
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ರನ್ಗಳ ಮಳೆ ಹರಿಸಿದರು. ಕೇವಲ 30 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಅಭಿಷೇಕ್ ಹೊಸ ಇತಿಹಾಸವನ್ನು ಸೃಷ್ಟಿಸಿದರು. ಅಭಿಷೇಕ್ ತಮ್ಮ ಇನ್ನಿಂಗ್ಸ್ನಲ್ಲಿ 34 ಎಸೆತಗಳನ್ನು ಎದುರಿಸಿದ ಅಭಿಷೇಕ್ 11 ಸಿಕ್ಸರ್ಗಳು ಮತ್ತು 9 ಬೌಂಡರಿಗಳ ಸಹಿತ 108 ರನ್ ಬಾರಿಸಿದರು. ಈ ಪಂದ್ಯದಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳನ್ನು ಸಿಡಿಸುವುದರ ಮೇಲೆ ಹೆಚ್ಚು ಗಮನ ಹರಿಸಿದ್ದ ಅಭಿಷೇಕ್ಗೆ ತಾನು ಶತಕ ಬಾರಿಸಿದರ ಅರಿವೂ ಇರಲಿಲ್ಲ. ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟುವುದನ್ನು ಅಚ್ಚರಿಯಿಂದ ನೋಡಿದ ಅಭಿಷೇಕ್ಗೆ ಅದಾದ ಬಳಿಕ ತಾನು ಶತಕ ಪೂರೈಸಿರುವುದು ಅರಿವಿಗೆ ಬಂತು.
30 ಎಸೆತಗಳಲ್ಲಿ ದಾಖಲೆಯ ಶತಕ ಬಾರಿಸಿದ ಅಭಿಷೇಕ್ ಈ ಬಾರಿ ವಿಭಿನ್ನವಾಗಿ ಶತಕವನ್ನು ಸಂಭ್ರಮಿಸಿದರು. ವಾಸ್ತವವಾಗಿ, ಅಭಿಷೇಕ್ ಶತಕ ಗಳಿಸಿದ ತಕ್ಷಣ ಮೈದಾನದಲ್ಲಿ ಕುಳಿತು ಓಂ ನಮಃ ಶಿವಾಯ ಮಂತ್ರವನ್ನು ಜಪಿಸಲು ಪ್ರಾರಂಭಿಸಿದರು. ಇದೇ ಮೊದಲ ಬಾರಿಗೆ ಅಭಿಷೇಕ್ ಈ ರೀತಿಯಾಗಿ ಶತಕವನ್ನು ಆಚರಿಸಿದ್ದು. ಅಷ್ಟಕ್ಕೂ ಅಭಿಷೇಕ್ ಶರ್ಮಾ ಏಕೆ ಹೀಗೆ ಆಚರಿಸಿದರು ಎಂಬುದಕ್ಕೆ ಕಾರಣವೂ ಇದೆ.
ಅಭಿಷೇಕ್ ಶರ್ಮಾ ಈಗ ಧ್ಯಾನ ಮಾಡಲು ಪ್ರಾರಂಭಿಸಿದ್ದಾರೆ. ಪ್ರತಿದಿನ ಧ್ಯಾನ ಮಾಡುವ ಮೂಲಕ ಅಭಿಷೇಕ್ ತಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಅವರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಧ್ಯಾನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಅಭಿಷೇಕ್ ಶರ್ಮಾ ಬ್ಯಾಟಿಂಗ್ಗೆ ಬರುವುದಕ್ಕೂ ಮೊದಲು ತಮ್ಮ ಬ್ಯಾಟ್ನಿಂದ ಚೆಂಡನ್ನು ಹೊಡೆಯುತ್ತಲೇ ಇರುತ್ತಾರೆ. ಅವರ ಗಮನವು ಚೆಂಡಿನ ಮೇಲೆ ಮಾತ್ರ ಇರುತ್ತದೆ. ಚೆಂಡಿನ ಮೇಲೆ ಕೇಂದ್ರೀಕರಿಸುವ ಈ ಕೌಶಲ್ಯವೇ ಅವರು ಕ್ರೀಸ್ಗೆ ಹೆಜ್ಜೆ ಹಾಕಿದ ತಕ್ಷಣ ದೊಡ್ಡ ಹೊಡೆತಗಳನ್ನು ಹೊಡೆಯಲು ಸಹಾಯ ಮಾಡುತ್ತದೆ.
11 ಸಿಕ್ಸರ್, 9 ಬೌಂಡರಿ.. ಅತಿ ವೇಗದ ಶತಕ ಬಾರಿಸಿದ ಅಭಿಷೇಕ್ ಶರ್ಮಾ..!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 221 ರನ್ ಗಳಿಸಿತು. ಭಾರತದ ಪರ ಅಭಿಷೇಕ್ ಶರ್ಮಾ 108 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸಂಜು ಸ್ಯಾಮ್ಸನ್ 50 ರನ್ ಬಾರಿಸಿದರು. ನಾಯಕ ಶ್ರೇಯಸ್ ಅಯ್ಯರ್ 29 ರನ್ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜೈ 2 ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಅಬ್ದುಲ್ಲಾ ತಲಾ 1 ವಿಕೆಟ್ ಪಡೆದರು.