KKR vs SRH : ವೃತ್ತಿಜೀವನದ ಬೆಸ್ಟ್ ಕ್ಯಾಚ್ ಹಿಡಿದ ವರುಣ್ ಚಕ್ರವರ್ತಿ; ಹುಟ್ಟಿಕೊಳ್ತು ವಿವಾದ

Abhishek Sharma's Controversial IPL 2026 Out: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2026 ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ 48 ರನ್ ಗಳಿಸಿ ವಿವಾದಾತ್ಮಕವಾಗಿ ಔಟಾದರು. ವರುಣ್ ಚಕ್ರವರ್ತಿ ಹಿಡಿದ ಕ್ಯಾಚ್ ಅನ್ನು ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು, ಆದರೆ ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಂಡುಬಂದಿತ್ತು. ಈ ನಿರ್ಧಾರದಿಂದ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿಷೇಕ್ ಔಟ್ ಆಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ. ಇದು ಪಂದ್ಯದ ಪ್ರಮುಖ ಚರ್ಚೆಯಾಗಿದೆ.

KKR vs SRH : ವೃತ್ತಿಜೀವನದ ಬೆಸ್ಟ್ ಕ್ಯಾಚ್ ಹಿಡಿದ ವರುಣ್ ಚಕ್ರವರ್ತಿ; ಹುಟ್ಟಿಕೊಳ್ತು ವಿವಾದ
Varun Chakravarthy Catch

Updated on: Apr 02, 2026 | 10:00 PM

ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ನಡೆದ ಐಪಿಎಲ್ 2026 ರ (IPL 2026) 6ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 48 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ 4 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ ಅವರ ವಿಕೆಟ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅವರ ವಿಕೆಟ್ ಅನ್ನು ಬ್ಲೆಸ್ಸಿಂಗ್ ಮುಜರಬಾನಿ ಪಡೆದರಾದರೂ, ವರುಣ್ ಚಕ್ರವರ್ತಿ (Varun Chakravarthy) ಹಿಡಿದ ಕ್ಯಾಚ್ ಇದೀಗ ವಿವಾದ ಸೃಷ್ಟಿಸಿದೆ. 9 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ದೊಡ್ಡ ಶಾಟ್ ಆಡಿದರು, ಆದರೆ ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ನಿಂತಿದ್ದ ವರುಣ್ ಚಕ್ರವರ್ತಿ ಅದ್ಭುತ ಕ್ಯಾಚ್ ತೆಗೆದುಕೊಂಡರು.

ಅಭಿಷೇಕ್ ಶರ್ಮಾ ಔಟ್?

ವರುಣ್ ಚಕ್ರವರ್ತಿ ಕ್ಯಾಚ್ ಹಿಡಿದ ವಿಡಿಯೋವನ್ನು ಮೂರನೇ ಅಂಪೈರ್ ಪರಿಶೀಲಿಸಿದಾಗ, ಚೆಂಡು ನೆಲಕ್ಕೆ ತಾಗಿರುವಂತೆ ಕಂಡುಬಂದಿತು. ಚಕ್ರವರ್ತಿ ಕ್ಯಾಚ್ ತೆಗೆದುಕೊಳ್ಳುವ ಮೊದಲೇ ಚೆಂಡು ನೆಲಕ್ಕಪಳಿಸಿದಂತೆ ಕಾಣಿಸಿತು ಆದರೆ, ಮೂರನೇ ಅಂಪೈರ್ ಅಭಿಷೇಕ್ ಔಟ್ ಎಂದು ಘೋಷಿಸಿದರು. ಇದೀಗ ಅಭಿಷೇಕ್ ಔಟ್ ಆದ ನಂತರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿಷೇಕ್ ಔಟ್ ಆಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಅರ್ಧಶತಕ ವಂಚಿತರಾದ ಅಭಿ

ವರುಣ್ ಚಕ್ರವರ್ತಿಯ ಕ್ಯಾಚ್‌ನಿಂದ ಅಭಿಷೇಕ್ ಶರ್ಮಾ 48 ರನ್​ಗಳಿಗೆ ಔಟಾದರು. ಕುತೂಹಲಕಾರಿ ಸಂಗತಿಯೆಂದರೆ ಇದೇ ವರುಣ್ ಬೌಲಿಂಗ್​ನಲ್ಲಿ, ಅಭಿಷೇಕ್ ಬೌಂಡರಿ, ಸಿಕ್ಸರ್​ಗಳ ಮಳೆಗರೆದಿದ್ದರು. ವರುಣ್ ಅವರ ಓವರ್‌ನಲ್ಲಿ ಅಭಿಷೇಕ್ ಎರಡು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಒಳಗೊಂಡಂತೆ 25 ರನ್‌ ಕಲೆಹಾಕಿದ್ದರು. ಅಲ್ಲದೆ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೊತೆಗೂಡಿ 34 ಎಸೆತಗಳಲ್ಲಿ 82 ರನ್‌ಗಳ ಜತೆಯಾಟ ನಿರ್ಮಿಸಿದ್ದರು.

KKR vs SRH IPL 2026 Live Score: ಕೆಕೆಆರ್​​ ಮೊದಲ ವಿಕೆಟ್ ಪತನ

ದುಬಾರಿಯಾದ ವರುಣ್ ಚಕ್ರವರ್ತಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವರುಣ್ ಚಕ್ರವರ್ತಿ ಕೇವಲ ಎರಡು ಓವರ್‌ಗಳನ್ನು ಎಸೆದು 31 ರನ್‌ಗಳನ್ನು ನೀಡಿದರು. ಹಿಂದಿನ ಪಂದ್ಯದಲ್ಲೂ ಕಳಪೆ ಬೌಲಿಂಗ್ ಪ್ರದರ್ಶಿಸಿದ ವರುಣ್, ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳನ್ನು ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Thu, 2 April 26

Follow Us