
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯ ಸೆಮಿಫೈನಲ್ಸ್ ವೇಳಾಪಟ್ಟಿ ಪ್ರಕಟವಾಗಿದೆ. ದೋಹಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಗಳು ನವೆಂಬರ್ 21 ರಂದು ನಡೆಯಲಿದೆ. ಅಂದರೆ ಒಂದೇ ದಿನ ಎರಡು ಸೆಮಿಫೈನಲ್ ಪಂದ್ಯಗಳು ಜರುಗಲಿದೆ.
ಈ ಮೂರು ಪಂದ್ಯಗಳೂ ದೋಹಾದ ಈಸ್ಟ್ ಎಂಡ್ ಪಾರ್ಕ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟಿ20 ಟೂರ್ನಿಯ ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯಗಳನ್ನು ಸೋನಿ ಲೈವ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್ ಹಾಗೂ ವೆಬ್ಸೈಟ್ನಲ್ಲೂ ಈ ಪಂದ್ಯದ ನೇರ ಪ್ರಸಾರ ಇರಲಿದೆ.
ಭಾರತ ಎ ಮತ್ತು ಬಾಂಗ್ಲಾದೇಶ್ ಎ ನಡುವಣ ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಪಾಕಿಸ್ತಾನ್ ಎ ಮತ್ತು ಶ್ರೀಲಂಕಾ ನಡುವಣ ದ್ವಿತೀಯ ಸೆಮಿಫೈನಲ್ ಪಂದ್ಯವು ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಹಾಗೆಯೇ ಫೈನಲ್ ಮ್ಯಾಚ್ ನವೆಂಬರ್ 23 ರಂದು ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.
ಭಾರತ ಎ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್, ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ), ರಮಣ್‌ದೀಪ್ ಸಿಂಗ್, ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ವಿಜಯ್ ಕುಮಾರ್ ವೈಶಾಕ್, ಯುಧ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ಸುಯಶ್ ಶರ್ಮಾ.
ಬಾಂಗ್ಲಾದೇಶ್ ಎ: ಅಕ್ಬರ್ ಅಲಿ (ನಾಯಕ), ಹಬೀಬುರ್ ರೆಹಮಾನ್, ಯಾಸಿರ್ ಅಲಿ, ಜಿಶಾನ್ ಆಲಂ, ಆರಿಫುಲ್ ಇಸ್ಲಾಂ, ರಕಿಬುಲ್ ಹಸನ್, ಮಹಿದುಲ್ ಅಂಕನ್, ತೋಫೆಲ್ ಅಹ್ಮದ್ ರೇಹಾನ್, ಮೃತುನ್‌ಜೋಯ್ ಚೌಧರಿ, ಮೆಹೆರೋಬ್ ಹಸನ್, ರಿಪಾನ್ ಮೊಂಡೋಲ್, ಅಬು ಹಿದರ್ ರೋನಿ, ಶಾದಿನ್ ಇಸ್ಲಾಮ್.
ಪಾಕಿಸ್ತಾನ್ ಎ: ಇರ್ಫಾನ್ ಖಾನ್ (ನಾಯಕ), ಯಾಸಿರ್ ಖಾನ್, ಮುಹಮ್ಮದ್ ನಯೀಮ್, ಮುಹಮ್ಮದ್ ಫೈಕ್, ಮಾಝ್ ಸದಾಖತ್, ಗಾಝಿ ಘೋರಿ, ಮುಹಮ್ಮದ್ ಶಹಝಾದ್, ಸಾದ್ ಮಸೂದ್, ಅರಾಫತ್ ಮಿನ್ಹಾಸ್, ಮುಬಾಸಿರ್ ಖಾನ್, ಶಾಹಿದ್ ಅಜೀಜ್, ಸುಫ್ಯಾನ್ ಮೊಕಿಮ್, ಉಬೈದ್ ಶಾ, ಮುಹಮ್ಮದ್ ಸಲ್ಮಾನ್, ಅಹ್ಮದ್ ದಾನಿಯಾಲ್.
ಇದನ್ನೂ ಓದಿ: VIDEO: ಪಾಕ್ ಆಟಗಾರನೊಂದಿಗೆ ಶೇಕ್ ಹ್ಯಾಂಡ್ ಮಾಡಿದ ಭಾರತೀಯ ಕ್ರಿಕೆಟಿಗ
ಶ್ರೀಲಂಕಾ ಎ: ದುನಿತ್ ವೆಲ್ಲಲಾಗೆ (ನಾಯಕ), ವಿಶೇನ್ ಹಳಂಬಗೆ, ನಿಸಾನ್ ಮದುಷ್ಕ, ಲಸಿತ್ ಕ್ರೂಸ್‌ಪುಲ್ಲೆ, ನುವಾನಿಡು ಫೆರ್ನಾಂಡೊ, ರಮೇಶ್ ಮೆಂಡಿಸ್, ಕವಿಂದು ಡಿ ಲಿವೇರಾ, ಸಹನ್ ಅರಾಚ್ಚಿಗೆ, ಅಹಾನ್ ವಿಕ್ರಮಸಿಂಘೆ, ಪ್ರಮೋದ್ ಮದುಶನ್, ಗರುಕ ಸಂಕೇತ್, ಇಸಿತಾ ವಿಜೆಸುಂದರ, ಮಿಕಂತ್ ವಿಜೇಸುಂದರ್.