AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರ್​ಸಿಬಿಗೆ ಎಂಟ್ರಿಕೊಟ್ಟ ಇಂಗ್ಲೆಂಡ್ ವೇಗಿ; ಸಿಎಸ್​ಕೆ ತಂಡಕ್ಕೆ ಕುಲ್ದೀಪ್‌ ಯಾದವ್ ಸೇರ್ಪಡೆ

IPL 2026 Player Replacements: ಐಪಿಎಲ್ 2026 ಪ್ಲೇಆಫ್ ಸಿದ್ಧತೆಗಳ ನಡುವೆ, ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಪ್ರಮುಖ ಆಟಗಾರರ ಬದಲಾವಣೆಯನ್ನು ಘೋಷಿಸಿವೆ. ಗಾಯದಿಂದಾಗಿ ಸಿಎಸ್‌ಕೆ ತಂಡದಿಂದ ಖಲೀಲ್ ಅಹ್ಮದ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಕುಲದೀಪ್ ಯಾದವ್ ಸೇರಿದ್ದಾರೆ. ಅದೇ ರೀತಿ, ಆರ್‌ಸಿಬಿ ತಂಡವು ನುವಾನ್ ತುಷಾರ ಬದಲಿಗೆ ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರನ್ನು ಸೇರಿಸಿಕೊಂಡಿದೆ. ಎರಡೂ ತಂಡಗಳಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಬದಲಾವಣೆಗಳು ನಿರ್ಣಾಯಕ.

IPL 2026: ಆರ್​ಸಿಬಿಗೆ ಎಂಟ್ರಿಕೊಟ್ಟ ಇಂಗ್ಲೆಂಡ್ ವೇಗಿ; ಸಿಎಸ್​ಕೆ ತಂಡಕ್ಕೆ ಕುಲ್ದೀಪ್‌ ಯಾದವ್ ಸೇರ್ಪಡೆ
Rcb, Csk
ಪೃಥ್ವಿಶಂಕರ
|

Updated on: May 15, 2026 | 5:46 PM

Share

2026 ರ ಐಪಿಎಲ್‌ನ (IPL 2026) ಲೀಗ್ ಹಂತಕ್ಕೆ ಇನ್ನೇನು ತೆರೆ ಬೀಳಲಿದೆ. ಅದಾದ ಬಳಿಕ ಪ್ಲೇಆಫ್ ಸುತ್ತು ಶುರುವಾಗಲಿದೆ. ಆದಾಗ್ಯೂ ಈವರೆಗೆ ಯಾವ ತಂಡಕ್ಕೂ ಪ್ಲೇಆಫ್ ಟಿಕೆಟ್ ಸಿಕ್ಕಿಲ್ಲ. ಕೆಲವು ತಂಡಗಳ ಸ್ಥಾನ ಖಚಿತವಾದರೂ ಇನ್ನು ಕೆಲವು ತಂಡಗಳು ತೀವ್ರಪೈಪೋಟಿ ನಡೆಸುತ್ತಿವೆ. ಅಂತಹ ತಂಡಗಳಲ್ಲಿ ಆರ್​ಸಿಬಿಗೆ (RCB) ಪ್ಲೇಆಫ್ ಸ್ಥಾನ ಭಾಗಶಃ ಖಚಿತವಾಗಿದ್ದರೆ, ಇತ್ತ ಸಿಎಸ್​ಕೆಗೂ (CSK) ಪ್ಲೇಆಫ್​ಗೇರುವ ಅವಕಾಶವಿದೆ. ಇದೀಗ ಈ ಎರಡೂ ತಂಡಗಳಿಗೆ ಹೊಸ ಆಟಗಾರರ ಆಗಮನವಾಗಿದೆ.

ವಾಸ್ತವವಾಗಿ ಈ ಸೀಸನ್​ನಲ್ಲಿ ಆಟಗಾರರ ಇಂಜುರಿಯಿಂದ ಅತಿ ಹೆಚ್ಚು ಸಮಸ್ಯೆಗೆ ಗುರಿಯಾದ ತಂಡಗಳಲ್ಲಿ ಸಿಎಸ್​ಕೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸಿಎಸ್​ಕೆ ತಂಡದ ಐದರಿಂದ ಆರು ಆಟಗಾರರು ಗಾಯದ ಕಾರಣದಿಂದಾಗಿ ಇಡೀ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಫ್ರಾಂಚೈಸಿ ಅವರ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಅದರಂತೆ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಸಿಎಸ್‌ಕೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಏತನ್ಮಧ್ಯೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇಂಗ್ಲೆಂಡ್​ನ ರಿಚರ್ಡ್ ಗ್ಲೀಸನ್ ಅವರನ್ನು ನುವಾನ್ ತುಷಾರ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದೆ.

ಖಲೀಲ್ ಬದಲಿಗೆ ಕುಲ್ದೀಪ್‌

ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಎರಡೂ ತಂಡಗಳಲ್ಲಿ ಮಾಡಲಾದ ಬದಲಾವಣೆಗಳನ್ನು ವಿವರಿಸಲಾಗಿದೆ. ಪ್ರಕಟಣೆಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಖಲೀಲ್ ಬದಲಿಗೆ ದೆಹಲಿ ವೇಗದ ಬೌಲರ್ ಕುಲದೀಪ್ ಯಾದವ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡಕ್ಕೆ ಕರತಂದಿದೆ. ಸಿಎಸ್​ಕೆ ಪರ ಆರಂಭಿಕ ಐದು ಪಂದ್ಯಗಳನ್ನಾಡಿದ ಬಳಿಕ ಖಲೀಲ್, ಗಾಯಗೊಂಡು ಇಡೀ ಐಪಿಎಲ್​ನಿಂದ ಹೊರಗುಳಿದಿದ್ದರು. ಇದೀಗ ಅವರ ಬದಲಿಗೆ ಬಂದ ಕುಲ್ದೀಪ್ ಈ ಹಿಂದೆ 2021 ಮತ್ತು 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದರು, ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

ಆರ್‌ಸಿಬಿ ಸೇರಿದ 38 ವರ್ಷದ ಬೌಲರ್

ಮತ್ತೊಂದೆಡೆ, ಹಾಲಿ ಚಾಂಪಿಯನ್ ಆರ್​ಸಿಬಿ ಕೂಡ, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಈ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿಯವರೆಗೆ 12 ಲೀಗ್ ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 38 ವರ್ಷದ ಇಂಗ್ಲಿಷ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಗ್ಲೀಸನ್, ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ವಾಯುಭಾರ ಕುಸಿತ: ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?
ವಾಯುಭಾರ ಕುಸಿತ: ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಆರೋಪಿಗಳು ಜಿಲೆಟಿನ್ ಇಟ್ಟಿದ್ಯಾಕೆ?
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಬೆಂಗಳೂರಿನಲ್ಲೊಂದು ವಿಚಿತ್ರ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ
ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ