IND vs ENG: 10 ವಿಕೆಟ್ ಉರುಳಿಸಿ ದಿಗ್ಗಜ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಗೊಂಡ ಆಕಾಶ್ ದೀಪ್
Akash Deep's 10-Wicket Haul: ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 337 ರನ್‌ಗಳಿಂದ ಸೋಲಿಸಿದೆ. ಆಕಾಶ್ ದೀಪ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ (10 ವಿಕೆಟ್‌ಗಳು) ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಎಡ್ಜ್‌ಬಾಸ್ಟನ್‌ನಲ್ಲಿ ಭಾರತದ ಮೊದಲ ಗೆಲುವಾಗಿದೆ. ಈ ಮೂಲಕ ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಜಹೀರ್ ಖಾನ್ ಅವರಂತಹ ಭಾರತೀಯ ಬೌಲರ್‌ಗಳ ವಿಶೇಷ ಸಾಧನೆ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) 337 ರನ್ಗಳ ಭಾರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಮೊದಲ ಗೆಲುವು ದಾಖಲಿಸಿದ ಇತಿಹಾಸವನ್ನು ನಿರ್ಮಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಐವರು ಆಟಗಾರರು ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ವೇಗಿ ಆಕಾಶ್ ದೀಪ್ (Akash Deep) ಅದ್ಭುತ ಪ್ರದರ್ಶನ ನೀಡಿ ಇಡೀ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದ ಆಕಾಶ್ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಇದರೊಂದಿಗೆ ವಿಶೇಷ ದಾಖಲೆಯ ಪಟ್ಟಿಗೂ ಸೇರ್ಪಡೆಗೊಂಡರು.
ಒಂದೇ ಪಂದ್ಯದಲ್ಲಿ 10 ವಿಕೆಟ್
ಮೇಲೆ ಹೇಳಿದಂತೆ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಉರುಳಿಸಿದ್ದ ಆಕಾಶ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಾರಕ ದಾಳಿ ನಡೆಸಿ 6 ವಿಕೆಟ್ ಉರುಳಿಸಿದರು. ಮೊದಲಿಗೆ 25 ರನ್ ಬಾರಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಬೆನ್ ಡಕೆಟ್ ಅವರನ್ನು ಬೇಟೆಯಾಡಿದ ಆಕಾಶ್ ದೀಪ್, ಆ ನಂತರ ಆರು ರನ್ ಗಳಿಸಿದ್ದ ಜೋ ರೂಟ್ ಅವರನ್ನು ಬೌಲ್ಡ್ ಮಾಡಿದರು. ಇನ್ನು ಐದನೇ ದಿನದಾಟದಲೂ ಇದೇ ಲಯವನ್ನು ಮುಂದುವರಿಸಿದ ಆಕಾಶ್, ಮೊದಲ ಸೆಷನ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು.
ಕೊನೆಯ ವಿಕೆಟ್ ಉರುಳಿಸಿದ ಆಕಾಶ್
ಮೊದಲಿಗೆ ಓಲಿ ಪೋಪ್ ಅವರನ್ನು ಬೌಲ್ಡ್ ಮಾಡಿದ ಆಕಾಶ್, ಆ ನಂತರ ಹ್ಯಾರಿ ಬ್ರೂಕ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡಿದರು. ಈ ರೀತಿಯಾಗಿ, ಈ ಇನ್ನಿಂಗ್ಸ್‌ನಲ್ಲಿಯೂ ಆಕಾಶ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಆ ಬಳಿಕವೂ ವಿಕೆಟ್ ಬೇಟೆ ಮುಂದುವರೆಸಿದ ಆಕಾಶ್, ಶತಕದ ಸಮೀಪದಲ್ಲಿದ್ದ ಜೇಮೀ ಸ್ಮಿತ್ರನ್ನು ಬಲಿ ಪಡೆದರೆ, ಕೊನೆಯಲ್ಲಿ ಜೋಶ್ ಟಂಗ್ ಅವರ ವಿಕೆಟ್ ಪಡೆದು ಇಂಗ್ಲೆಂಡ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
IND vs ENG: ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾ
ಗಣ್ಯರ ಪಟ್ಟಿಯಲ್ಲಿ ಆಕಾಶ್ಗೆ ಸ್ಥಾನ
ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಆಕಾಶ್, ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಜಹೀರ್ ಖಾನ್‌ರಂತಹ ಭಾರತೀಯ ಬೌಲರ್‌ಗಳ ಗಣ್ಯರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಆಕಾಶ್ ಮೊದಲು, ಚೇತನ್ ಶರ್ಮಾ, ಜಹೀರ್ ಖಾನ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಈ ಸಾಧನೆ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Sun, 6 July 25