The Ashes 2021-22: ಇಂದಿನಿಂದ ಆ್ಯಶಸ್ ಸರಣಿಯ ಎರಡನೇ ಟೆಸ್ಟ್​​: ಅಹರ್ನಿಶಿ ಪಂದ್ಯಕ್ಕೆ ರೆಡಿಯಾದ ಆಸ್ಟ್ರೇಲಿಯಾ- ಇಂಗ್ಲೆಂಡ್

Australia vs England, 2nd Test: ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳ 6 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಗೆದ್ದ ಹಿರಿಮೆ ಕಾಂಗರೂಗಳದು.

The Ashes 2021-22: ಇಂದಿನಿಂದ ಆ್ಯಶಸ್ ಸರಣಿಯ ಎರಡನೇ ಟೆಸ್ಟ್​​: ಅಹರ್ನಿಶಿ ಪಂದ್ಯಕ್ಕೆ ರೆಡಿಯಾದ ಆಸ್ಟ್ರೇಲಿಯಾ- ಇಂಗ್ಲೆಂಡ್
Australia vs England 1st Test
Follow us
TV9 Web
| Updated By: Vinay Bhat

Updated on: Dec 16, 2021 | 7:07 AM

ಪ್ರತಿಷ್ಠಿತ ಆ್ಯಶಸ್ (The Ashes) ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಅಡಿಲೇಡ್ ಓವಲ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಣ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಡೇ ನೈಟ್ ಪಂದ್ಯದಲ್ಲಿ (Day0Night Test Match) ಸಂಪೂರ್ಣ ಮೇಲುಗೈ ಸಾಧಿಸಿರುವ ದಾಖಲೆ ಹೊಂದಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿಯೂ ಗೆಲ್ಲುವ ಸಂಪೂರ್ಣ ಆತ್ಮ ವಿಶ್ವಾಸದಲ್ಲಿದೆ. ಬ್ರಿಸ್ಬೇನ್‌ನಲ್ಲಿ ಸಾಧಿಸಿದ 9 ವಿಕೆಟ್‌ ಗೆಲುವು ಕೂಡ ಕಾಂಗರೂಗಳ ಉತ್ಸಾಹವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳ 6 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಗೆದ್ದ ಹಿರಿಮೆ ಕಾಂಗರೂಗಳದು. ಇದರಲ್ಲಿ 4 ಗೆಲುವು ಅಡಿಲೇಡ್‌ನ‌ಲ್ಲೇ ಒಲಿದಿದೆ. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 120 ರನ್‌ ಗೆಲುವು ಸಾಧಿಸಿದ್ದು ಇದೇ ಅಂಗಳದಲ್ಲಿ. ಇಂಗ್ಲೆಂಡ್ ಆಡಿದ ನಾಲ್ಕು ಡೇನೈಟ್ ಟೆಸ್ಟ್ ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಅನುಭವಿಸಿದೆ.

ತಮ್ಮ ಮೊದಲ ಟೆಸ್ಟ್‌ ಕ್ಯಾಪ್ಟನ್ಸಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಆಸೀಸ್​ನ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿರುವುದು ಆಸ್ಟ್ರೇಲಿಯದ ಪಾಲಿಗೊಂದು ಸಿಹಿ ಸುದ್ದಿ. ಆದರೆ ಮತ್ತೋರ್ವ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಗಾಯಾಳಾಗಿ ಹೊರಬಿದ್ದಿದ್ದಾರೆ. ಈ ಸ್ಥಾನದಲ್ಲಿ ಜೇ ರಿಚರ್ಡ್‌ಸನ್‌ ಕಾಣಿಸಿಕೊಳ್ಳಲಿರು ವುದರಿಂದ ಹೆಚ್ಚಿನ ಆತಂಕವೇನೂ ಇಲ್ಲ. ಅಗ್ರ ಕ್ರಮಾಂಕದ ಬ್ಯಾಟರ್ ಡೇವಿಡ್‌ ವಾರ್ನರ್‌ ಮೊದಲ ಟೆಸ್ಟ್‌ ವೇಳೆ ಗಾಯಾಳಾಗಿದ್ದರೂ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಮೆನೆಗೆ ತೆರಳಿದ ಅವರು ಈಗಾಗಲೇ ಅಡಿಲೇಡ್‌ಗೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದಾರೆ. ಬ್ಯಾಟಿಂಗ್ – ಬೌಲಿಂಗ್ ಎರಡು ವಿಭಾಗದಲ್ಲಿ ಸುಧಾರಿಸಬೇಕಾಗಿರುವ ಇಂಗ್ಲೆಂಡ್, ಎರಡನೇ ಟೆಸ್ಟ್​ನಲ್ಲಿ ಯಾವರೀತಿ ಕಮ್​ಬ್ಯಾಕ್ ಮಾಡುತ್ತೆ ಎಂಬುದುನ್ನು ನೋಡಬೇಕಿದೆ.

ಅಡಿಲೇಡ್ ಪಿಚ್:

ಅಡಿಲೇಡ್ ಪಿಚ್‌ನಲ್ಲಿ ಮೊದಲ ಮೂರು ದಿನಗಳ ಕಾಲ ಬ್ಯಾಟಿಂಗ್‌ಗೆ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಪಿಚ್ ಹೆಚ್ಚು ಫ್ಲ್ಯಾಟ್ ಆಗಿರುವುದು ಬ್ಯಾಟರ್‌ಗಳಿಗೆ ನೆರವಾಗಬಹುದು. ಜೊತೆಗೆ ಸ್ಪಿನ್ನರ್‌ಗಳಿಗೆ ಕೂಡ ಸ್ವಲ್ಪ ನೆರವನ್ನು ನೀಡುವ ಸಾಧ್ಯತೆಯಿದೆ. ಇನ್ನು ಅಡಿಲೇಡ್ ಮೈದಾನದ ಅಂಕಿಅಂಶವನ್ನು ನೋಡಿದರೆ ಇಲ್ಲಿ ಆಡಿದ 79 ಟೆಸ್ಟ್ ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 38 ಬಾರಿ ಗೆದ್ದಿದ್ದರೆ ನಂತರ ಬ್ಯಾಟಿಂಗ್ ಮಾಡಿದ ನಂತರ 22 ಬಾರಿ ಗೆಲುವು ಸಾಧಿಸಿದೆ. ಇನ್ನು ಈ ಮೈದಾನದ ಅತ್ಯಧಿಕ ಮೊತ್ತ 674 ಆಗಿದ್ದರೆ, ಕನಿಷ್ಠ ಮೊತ್ತ 82ಕ್ಕೆ ಆಲ್‌ಔಟ್ ಆಗಿದೆ.

ಅಡಿಲೇಡ್‌ ದಾಖಲೆಯೂ ಆಸ್ಟ್ರೇಲಿಯ ಪರವಾಗಿದೆ. ಇತ್ತಂಡಗಳು ಈವರೆಗೆ 32 ಸಲ ಮುಖಾಮುಖಿ ಆಗಿವೆ. ಆಸ್ಟ್ರೇಲಿಯ 18, ಇಂಗ್ಲೆಂಡ್‌ 9ರಲ್ಲಿ ಗೆದ್ದಿವೆ. 5 ಟೆಸ್ಟ್‌ ಡ್ರಾಗೊಂಡಿವೆ.

ಪಂದ್ಯ ಆರಂಭದ ಸಮಯ: ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ

ಸ್ಥಳ: ಅಡಿಲೇಡ್ ಓವಲ್, ಅಡಿಲೇಡ್

ಭಾರತದಲ್ಲಿ ನೇರಪ್ರಸಾರ: ಸೋನಿ ಸಿಕ್ಸ್ ಮತ್ತು ಸೋನಿ ಸಿಕ್ಸ್ ಎಚ್‌ಡಿ

ಲೈವ್ ಸ್ಟ್ರೀಮಿಂಗ್: ಸೋನಿ ಲಿವ್

Pro Kabaddi League: ಬೆಂಗಳೂರು ಬುಲ್ಸ್ ತಂಡಕ್ಕೆ ನಾಯಕ-ಉಪನಾಯಕನ ನೇಮಕ

(Ashes 2021 Here is all you need to know before the Australia vs England 2nd Test begins)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ