AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pro Kabaddi League: ಬೆಂಗಳೂರು ಬುಲ್ಸ್ ತಂಡಕ್ಕೆ ನಾಯಕ-ಉಪನಾಯಕನ ನೇಮಕ

Bengaluru Bulls: ಪಿಕೆಎಲ್‌ನಲ್ಲಿ ಸೀಸನ್ 6 ರಲ್ಲಿ ಗುಜರಾತ್ ಫಾರ್ಚೂನ್‌ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ಬುಲ್ಸ್ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು.

Pro Kabaddi League: ಬೆಂಗಳೂರು ಬುಲ್ಸ್ ತಂಡಕ್ಕೆ ನಾಯಕ-ಉಪನಾಯಕನ ನೇಮಕ
Bengaluru bulls
TV9 Web
| Edited By: |

Updated on: Dec 15, 2021 | 10:48 PM

Share

ದೇಶೀಯ ಅಂಗಳದ ಮದಗಜಗಳ ಕಾಳಗಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 22 ರಿಂದ ಶುರುವಾಗಲಿರುವ 8ನೇ ಸೀಸನ್ ಪಂದ್ಯಾವಳಿಗೆ ಬೆಂಗಳೂರು ಬುಲ್ಸ್ ತಂಡ ಕೂಡ ಸಕಲ ರೀತಿಯಲ್ಲೂ ಸಜ್ಜಾಗಿದೆ. ಅದರಂತೆ ಈ ಬಾರಿ ಬೆಂಗಳೂರು ಬುಲ್ಸ್​ ತಂಡವನ್ನು ಹಿರಿಯ ಆಟಗಾರ ಪವನ್ ಕುಮಾರ್ ಶೆಹ್ರಾವತ್ ಅವರು ಮುನ್ನಡೆಸಲಿದ್ದಾರೆ. ಹಾಗೆಯೇ ಪ್ರಮುಖ ಡಿಫೆಂಡರ್ ಮಹೇಂದರ್ ಸಿಂಗ್ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ.

ಬೆಂಗಳೂರು ಬುಲ್ಸ್ ಪರ ಪವನ್ ಶೆಹ್ರಾವತ್ ಅವರ ಪ್ರದರ್ಶನ ಅದ್ಭುತವಾಗಿದೆ. ಇದಲ್ಲದೇ ಅವರು ಬೆಂಗಳೂರು ಬುಲ್ಸ್ ತಂಡದ ನಾಯಕರಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಪಿಕೆಎಲ್ ಸೀಸನ್ 7 ರಲ್ಲಿಯೂ ಬುಲ್ಸ್ ತಂಡದ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಪೂರ್ಣಾವಧಿ ನಾಯಕನನ್ನಾಗಿ ಮಾಡಲಾಗಿದೆ.

ಪಿಕೆಎಲ್‌ನಲ್ಲಿ ಸೀಸನ್ 6 ರಲ್ಲಿ ಗುಜರಾತ್ ಫಾರ್ಚೂನ್‌ ಜೈಂಟ್ಸ್ (ಗುಜರಾತ್ ಜೈಂಟ್ಸ್) ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ಬುಲ್ಸ್ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಆ ಸೀಸನ್​ ಪವನ್ ಶೆಹ್ರಾವತ್ ಅದ್ಭುತ ಪ್ರದರ್ಶನ ನೀಡಿದ್ದರು. ಇನ್ನು ಕಳೆದ ಸೀಸನ್​ನಲ್ಲೂ ಟೂರ್ನಿಯ ಅತ್ಯಂತ ಯಶಸ್ವಿ ರೈಡರ್ ಎಂದು ಸಾಬೀತುಪಡಿಸಿದ್ದರು. ಡಿಸೆಂಬರ್ 22 ರಂದು ಬೆಂಗಳೂರು ಬುಲ್ಸ್ ತಂಡವು ಮೊದಲ ಪಂದ್ಯವಾಡಲಿದ್ದು, ಇದಕ್ಕಾಗಿ ಈಗಾಗಲೇ ಅಭ್ಯಾಸವನ್ನು ಆರಂಭಿಸಿದೆ.

ಪ್ರೊ ಕಬಡ್ಡಿ ಲೀಗ್​ನಲ್ಲಿ ಪವನ್ ಶೆಹ್ರಾವತ್ ಮತ್ತು ಮಹೇಂದರ್ ಸಿಂಗ್ ಪ್ರದರ್ಶನದ ಇಣುಕು ನೋಟ: ಬೆಂಗಳೂರು ತಂಡದ ನಾಯಕ ಪವನ್ ಶೆಹ್ರಾವತ್ ಇದುವರೆಗೆ ಪಿಕೆಎಲ್‌ನಲ್ಲಿ 80 ಪಂದ್ಯಗಳನ್ನು ಆಡಿದ್ದು, 716 ಅಂಕಗಳನ್ನು ಪಡೆದಿದ್ದಾರೆ. ಪವನ್ ಶೆಹ್ರಾವತ್ ರೇಡಿಂಗ್‌ನಲ್ಲಿ 682 ಮತ್ತು ಟ್ಯಾಕಲ್ ಮೂಲಕ 34 ಅಂಕಗಳನ್ನು ಗಳಿಸಿದ್ದಾರೆ. ಹಾಗೆಯೇ 31 ಸೂಪರ್ 10 ಮತ್ತು 26 ಸೂಪರ್ ರೈಡ್‌ಗಳನ್ನು ಮಾಡಿದ್ದಾರೆ. ಇನ್ನು ಪವನ್ ತಮ್ಮ ವೃತ್ತಿ ಜೀವನದಲ್ಲಿ 3 ಸೂಪರ್ ಟ್ಯಾಕಲ್ಸ್ ಕೂಡ ಮಾಡಿದ್ದಾರೆ.

ಮಹೇಂದರ್ ಸಿಂಗ್ ತಮ್ಮ PKL ವೃತ್ತಿಜೀವನದಲ್ಲಿ 67 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 182 ಅಂಕಗಳನ್ನು ಪಡೆದಿದ್ದಾರೆ. ಮಹೇಂದರ್ ಸಿಂಗ್ ರೇಡ್‌ನಲ್ಲಿ ಒಂದು ಪಾಯಿಂಟ್ ಮತ್ತು ಟ್ಯಾಕಲ್‌ನಿಂದ 181 ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಮಹೇಂದ್ರ ಸಿಂಗ್ 12 ಹೈ 5 ಮತ್ತು 15 ಸೂಪರ್ ಟ್ಯಾಕಲ್‌ಗಳನ್ನು ಮಾಡಿದ್ದಾರೆ.

ಬೆಂಗಳೂರು ಬುಲ್ಸ್ ತಂಡ ಹೀಗಿದೆ:

ಪವನ್ ಕುಮಾರ್ ಶೆಹ್ರಾವತ್ – ರೈಡರ್

ಅಮಿತ್ ಶಿಯೋರನ್ – ಡಿಫೆಂಡರ್

ಮೋಹಿತ್ ಸೆಹ್ರಾವತ್ – ಡಿಫೆಂಡರ್

ಬಂಟಿ – ರೈಡರ್

ಸೌರಭ್ ನಂದಾಲ್ – ಡಿಫೆಂಡರ್

ಜಿಯೌರ್ ರೆಹಮಾನ್ – ಡಿಫೆಂಡರ್

ಡಾಂಗ್ ಜಿಯಾನ್ ಲೀ –ರೈಡರ್

ಅಬೊಲ್​ಫಜಲ್ ಮಘಸೌದ್ –ರೈಡರ್

ಮಹೇಂದರ್ ಸಿಂಗ್ –ಡಿಫೆಂಡರ್

ಚಂದ್ರನ್ ರಂಜಿತ್ – ರೈಡರ್

ಜಿಬಿ ಮೋರೆ –ರೈಡರ್

ದೀಪಕ್ ನರ್ವಾಲ್ –ರೈಡರ್

ಮಯೂರ್ ಜಗನ್ನಾಥ ಕದಮ್ – ಡಿಫೆಂಡರ್

ಅಂಕಿತ್ –ಡಿಫೆಂಡರ್

ವಿಕಾಸ್ –ಡಿಫೆಂಡರ್

ಇದನ್ನೂ ಓದಿ:Pro Kabaddi League 2021: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ 

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!

ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್​ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!

(pro kabaddi league bengaluru bulls appoint pawan sehrawat captain pkl 8)

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ