IND Vs PAK: 4ನೇ ಕ್ರಮಾಂಕಕ್ಕೆ ಈ ಬ್ಯಾಟರ್ ಫಿಕ್ಸ್; ಅಚ್ಚರಿಯ ನಿರ್ಧಾರ ತೆಗೆದುಕೊಂಡ ರೋಹಿತ್..!

IND Vs PAK: ವಾಸ್ತವವಾಗಿ ಇಶಾನ್ ಓಪನರ್ ಆಗಿ ಕಣಕ್ಕಿಳಿಯುತ್ತಾರೆ. ಈ ಹಿಂದೆ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಇಶಾನ್ ಆರಂಭಿಕರಾಗಿ ಕಣಕ್ಕಿಳಿದು ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆದರೆ ರಾಹುಲ್ ಏಕದಿನದಲ್ಲಿ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ. ಹೀಗಿರುವಾಗ ಟೀಮ್ ಮ್ಯಾನೇಜ್ ಮೆಂಟ್ ಇಶಾನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಸಾಧ್ಯವೇ ಎಂಬುದು ಪ್ರಶ್ನೆ.

IND Vs PAK: 4ನೇ ಕ್ರಮಾಂಕಕ್ಕೆ ಈ ಬ್ಯಾಟರ್ ಫಿಕ್ಸ್; ಅಚ್ಚರಿಯ ನಿರ್ಧಾರ ತೆಗೆದುಕೊಂಡ ರೋಹಿತ್..!
ರೋಹಿತ್ ಶರ್ಮಾ

Updated on: Sep 01, 2023 | 4:54 PM

ಸೆಪ್ಟಂಬರ್ 2 ರಂದು ಪಾಕ್ ತಂಡವನ್ನು ಎದುರಿಸುವುದರೊಂದಿಗೆ ಟೀಂ ಇಂಡಿಯಾ (India vs Pakistan) ತನ್ನ ಏಷ್ಯಾಕಪ್ ಅಭಿಯಾನವನ್ನು ಆರಂಭಿಸುತ್ತಿದೆ. ಆದರೆ ಲೀಗ್​ನ ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ (KL Rahul) ಅಲಭ್ಯರೆನ್ನುವ ವಿಚಾರ ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಮೊದಲೆರಡು ಪಂದ್ಯಗಳಿಗೆ ರಾಹುಲ್ ಅಲಭ್ಯರೆಂಬ ವಿಚಾರವನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರೇ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಏಷ್ಯಾಕಪ್‌ಗೆ (Asia Cup 2023) ಟೀಂ ಇಂಡಿಯಾವನ್ನು ಪ್ರಕಟಿಸುವಾಗ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಸೆಪ್ಟೆಂಬರ್ 2 ಅಥವಾ 3 ರೊಳಗೆ ರಾಹುಲ್ ಫಿಟ್ ಆಗುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಸೆಪ್ಟೆಂಬರ್ 2 ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರಾಹುಲ್ ಆಡುವುದಿಲ್ಲ ಎಂಬುದು ಖಚಿತವಾಗಿತ್ತು. ಆದರೆ ಇದೀಗ ಕೋಚ್ ದ್ರಾವಿಡ್ ಹೇಳಿಕೆಯಿಂದ ಅವರು ನೇಪಾಳ ವಿರುದ್ಧವೂ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ರಾಹುಲ್ ಸ್ಥಾನದಲ್ಲಿ ಇಶಾನ್ ಕಿಶನ್ (Ishan Kishan) ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಆದರೆ ಪ್ರಶ್ನೆಯೆಂದರೆ, ಇಶಾನ್ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು.

ವಾಸ್ತವವಾಗಿ ಇಶಾನ್ ಓಪನರ್ ಆಗಿ ಕಣಕ್ಕಿಳಿಯುತ್ತಾರೆ. ಈ ಹಿಂದೆ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಇಶಾನ್ ಆರಂಭಿಕರಾಗಿ ಕಣಕ್ಕಿಳಿದು ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆದರೆ ರಾಹುಲ್ ಏಕದಿನದಲ್ಲಿ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ. ಹೀಗಿರುವಾಗ ಟೀಮ್ ಮ್ಯಾನೇಜ್ ಮೆಂಟ್ ಇಶಾನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಸಾಧ್ಯವೇ ಎಂಬುದು ಪ್ರಶ್ನೆ.

Rohit Sharma press conference: ಕೆಲವೇ ಹೊತ್ತಿನಲ್ಲಿ ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಮಹತ್ವದ ಹೇಳಿಕೆ ಸಾಧ್ಯತೆ

ಆಡಳಿತ ಮಂಡಳಿಯ ನಿರ್ಧಾರವೇನು?

ಟೀಂ ಇಂಡಿಯಾದ ಆರಂಭಿಕ ಜೋಡಿ ನೋಡಿದರೆ, ನಾಯಕ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಓಪನರ್ ಆಗಿ ಕಣಕ್ಕಿಳಿಯುವುದು ವಾಡಿಕೆ. ಆದರೆ ಇಶಾನ್ ಅವರು ತಂಡಕ್ಕೆ ಆಯ್ಕೆಯಾದರೆ ಗಿಲ್ ಅಥವಾ ರೋಹಿತ್ ಕೆಳ ಕ್ರಮಾಂಕದಲ್ಲಿ ಆಡಬೇಕಾಗಬಹುದು ಎಂದು ಈ ಹಿಂದೆ ಚರ್ಚಿಸಲಾಗಿತ್ತು. ಗಿಲ್ 3ನೇ ಕ್ರಮಾಂಕದಲ್ಲಿ ಹಾಗೂ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಬಹುದು ಎಂಬ ಚರ್ಚೆಯೂ ನಡೆದಿತ್ತು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಬರುವ ಬಗ್ಗೆ ಯಾವುದೇ ಮಾತುಕತೆ ನಡೆದಿರಲಿಲ್ಲ. ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ತಂಡದ ಮ್ಯಾನೇಜ್‌ಮೆಂಟ್ ಇಶಾನ್‌ಗೆ 4ನೇ ಕ್ರಮಾಂಕ ಅಥವಾ 5ನೇ ಕ್ರಮಾಂಕದಲ್ಲಿ ಅವಕಾಶ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿ ಮಾಡಿದೆ. ಪತ್ರಿಕೆಯ ವರದಿ ಪ್ರಕಾರ, ಏಷ್ಯಾಕಪ್‌ಗೂ ಮುನ್ನ ಬೆಂಗಳೂರಿನ ಆಲೂರಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಅವರನ್ನು ಪ್ರಯತ್ನಿಸಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದ್ದು, ಇಶಾನ್​ರನ್ನು ಟಾಪ್ 3ರೊಳಗೆ ಆಡಿಸುವ ಯೋಚನೆಯಲ್ಲಿ ನಾಯಕ ರೋಹಿತ್ ಇಲ್ಲ ಎಂದು ವರದಿ ಮಾಡಿದೆ.

ಇಶಾನ್ ಯಶಸ್ವಿಯಾಗುತ್ತಾರಾ?

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯೋಗಗಳನ್ನು ಮಾಡಿತ್ತು. ಅದಕ್ಕಾಗಿಯೇ ಭಾರತ ಟಿ20 ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ, ವಿಶ್ವಕಪ್‌ ಹತ್ತಿರವಾಗುತ್ತಿರುವಾಗ, ಓಪನರ್‌ಗೆ 4 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕವನ್ನು ನೀಡುವ ನಿರ್ಧಾರ ಸರಿಯಾಗಿರಬಹುದೇ?. ಹಾಗಂತ ಇಶಾನ್ ಇದೇ ಮೊದಲ ಬಾರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದಲ್ಲ. ಅವರು ಈ ಹಿಂದೆಯೂ ಈ ಕ್ರಮಾಂಕದಲ್ಲಿ ಆಡಿದ್ದಾರೆ. ಇಶಾನ್ ಈ ಹಿಂದೆ ಆರು ಏಕದಿನ ಪಂದ್ಯಗಳಲ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅದರಲ್ಲಿ 21.20 ರ ಸರಾಸರಿಯಲ್ಲಿ 106 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ರನ್‌ಗಳ ಇನ್ನಿಂಗ್ಸ್ ಕೂಡ ಸೇರಿದೆ. ಆದರೆ ಇಶಾನ್ ಅವರ ಸಮಸ್ಯೆ ಏನೆಂದರೆ ಅವರು ಸ್ಪಿನ್ ವಿರುದ್ಧ ನಿರರ್ಗಗಳವಾಗಿ ಬ್ಯಾಟ್ ಬೀಸುವುದಿಲ್ಲ.

ಆದರೆ ಗಿಲ್ ಸ್ಪಿನ್ನರ್‌ಗಳನ್ನು ಚೆನ್ನಾಗಿ ಆಡುತ್ತಾರೆ ಮತ್ತು ಕೊಹ್ಲಿ ಕೂಡ ಚೆನ್ನಾಗಿ ಆಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗಿಲ್ ಅಥವಾ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದರೆ ಭಾರತಕ್ಕೆ ಹೆಚ್ಚು ಲಾಭವಾಗಬಹುದು. ಅಲ್ಲದೆ ಇಶಾನ್ ಆರಂಭಿಕರಾಗಿ ಕಣಕ್ಕಿಳಿದರೆ ಎಡ-ಬಲ ಸಂಯೋಜನೆಯು ಎದುರಾಳಿ ತಂಡಗಳಿಗೆ ತಲೆನೋವು ತರುವುದಲ್ಲದೆ, ತಂಡದ ಸಮನ್ವಯವನ್ನು ಸುಧಾರಿಸಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Fri, 1 September 23