Rohit Sharma press conference: ಕೆಲವೇ ಹೊತ್ತಿನಲ್ಲಿ ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಮಹತ್ವದ ಹೇಳಿಕೆ ಸಾಧ್ಯತೆ
India vs Pakistan, Asia Cup 2023: ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೆ ಏಷ್ಯಾಕಪ್ ಟೂರ್ನಿ ಮಹತ್ವದ್ದಾಗಿದೆ. ಸೆ. 2 ರಂದು ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಇದರ ನಡುವೆ ಇಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತ ಕ್ರಿಕೆಟ್ ತಂಡವು ತಮ್ಮ ಏಷ್ಯಾಕಪ್ 2023 ರ ಅಭಿಯಾನವನ್ನು ಸೆಪ್ಟೆಂಬರ್ 2 ರಂದು ಆರಂಭಿಸಲಿದೆ. ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಕಾದಾಟ ನಡೆಸಲಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಬಹುನಿರೀಕ್ಷಿಯ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾ ಏಷ್ಯಾಕಪ್‌ನಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದೆ. ಇದರ ನಡುವೆ ಇಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಇಂಡೋ-ಪಾಕ್ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಏಷ್ಯಾಕಪ್ ಹಾಗೂ ವಿಶ್ವಕಪ್ ಎರಡೂ ಟೂರ್ನಿಯು ಭಾರತಕ್ಕೆ ಬಹಳ ಮುಖ್ಯವಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಸೆಪ್ಟೆಂಬರ್ 5 ರಂದು ನೇಪಾಳ ವಿರುದ್ಧದ ಭಾರತದ ಪಂದ್ಯದ ನಂತರ ವಿಶ್ವಕಪ್ ತಂಡವನ್ನು ಪ್ರಕಟಿಸಲಿದೆ. ನಾಯಕನಾಗಿ ತನ್ನ ಮೊದಲ ಮತ್ತು ಕೊನೆಯ ವಿಶ್ವಕಪ್ ಆಡುತ್ತಿರುವ ರೋಹಿತ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೆಲ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಏಷ್ಯಾಕಪ್ 2023ರಲ್ಲಿ ಇಂದು ಯಾವುದೇ ಪಂದ್ಯವಿಲ್ಲ: ಯಾಕೆ ಗೊತ್ತೇ?, ಇಲ್ಲಿದೆ ನೋಡಿ ಮಾಹಿತಿ
ಪತ್ರಿಕಾಗೋಷ್ಠಿಯಲ್ಲಿ ರೋಹಿತ್ಗೆ ಎದುರಾಗಲಿರುವ ಪ್ರಶ್ನೆಗಳು:
- ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡುತ್ತಾರೆ?
- ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ದಾರೆ, ಅವರು ಶೇ. 100 ರಷ್ಟು ಫಿಟ್ ಆಗಿದ್ದಾರಾ?
- ಕೆಎಲ್ ರಾಹುಲ್ ಆಡುವುದಿಲ್ಲ, ಇಶಾನ್ ಕಿಶನ್ ಎಷ್ಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ?
- ಶಾರ್ದೂಲ್ vs ಶಮಿ vs ಪ್ರಸಿದ್ಧ್ ಪೈಕಿ ಯಾರಿಗೆ ಸ್ಥಾನ?
- ಅಕ್ಷರ್ ಪಟೇಲ್ಗೆ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆಯೇ?
ನಾಲ್ಕನೇ ಕ್ರಮಾಂದ ತೊಂದರೆ ಮುಂದುವರೆಯುತ್ತಾ?:
ಭಾರತೀಯ ಕ್ರಿಕೆಟ್ ತಂಡವು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನಿಲ್ಲದೆ ಮತ್ತೊಂದು ಏಷ್ಯಾಕಪ್ ಮತ್ತು ವಿಶ್ವಕಪ್ ಅಭಿಯಾನದಲ್ಲಿ ತೊಡಗಿದೆ. ರೋಹಿತ್ ಶರ್ಮಾ ಕಳೆದ ತಿಂಗಳು ಒಪ್ಪಿಕೊಂಡಂತೆ, ಯುವರಾಜ್ ಸಿಂಗ್ ನಂತರ 4ನೇ ಸ್ಥಾನವನ್ನು ತುಂಬಲು ಭಾರತ ತಂಡ ಹೆಣಗಾಡಿದೆ. ಶ್ರೇಯಸ್ ಅಯ್ಯರ್ ತಂಡಕ್ಕೆ ಸೇರಿಕೊಂಡಿದ್ದಾರೆ ಆದರೂ ಅವರ ಫಾರ್ಮ್ ಯಾವರೀತಿ ಇರಲಿದೆ ಎಂಬುದು ನೋಡಬೇಕಿದೆ. ಇದರ ನಡುವೆ ವಿರಾಟ್ ಕೊಹ್ಲಿ ಕ್ರಮಾಂಕ ಕೂಡ ಸ್ಪಷ್ಟವಾಗಿಲ್ಲ, ಇಶಾನ್ ಕಿಶನ್ ಕೂಡ ಮಧ್ಯಮ ಕ್ರಮಾಂಕದಲ್ಲಿ ಆಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಶ್ರೇಯಸ್ ಅಯ್ಯರ್ ಶೇ. 100 ಫೀಟ್?:
ಗಾಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಭಾರತಕ್ಕೆ ಆಧಾರಸ್ತಂಭವಾಗಿದ್ದರು. ಸುದೀರ್ಘ ಚೇತರಿಕೆಯ ನಂತರ ಅವರು ಈಗ ಏಷ್ಯಾಕಪ್ ಮತ್ತು ವಿಶ್ವಕಪ್ ಸಮಯದ ವೇಳೆ ತಂಡಕ್ಕೆ ಮರಳಿದ್ದಾರೆ. ಕಳೆದ ಮಾರ್ಚ್‌ನಿಂದ ಅಯ್ಯರ್ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಹೀಗಾಗಿ 2023 ರ ಏಷ್ಯಾ ಕಪ್ ಇವರಿಗೆ ದೊಡ್ಡ ಪರೀಕ್ಷೆ ಎಂದೇ ಹೇಳಬಹುದು. 50 ಓವರ್‌ಗಳ ಪಂದ್ಯ ಆಗಿರುವುದರಿಂದ ಶ್ರೇಯಸ್ ಎಷ್ಟು ಹೊತ್ತು ಕ್ರೀಸ್ನಲ್ಲಿ ನಿಲ್ಲುತ್ತಾರೆ ಎಂಬುದು ನೋಡಬೇಕಿದೆ.
ರಾಹುಲ್ ಔಟ್, ಇಶಾನ್ ಕಿಶನ್ಗೆ ಯಾವ ಕ್ರಮಾಂಕ?:
2023 ರ ಏಷ್ಯಾಕಪ್‌ನಲ್ಲಿ ಭಾರತದ ಮೊದಲ ಎರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಕೂಡ ಶ್ರೀಲಂಕಾಕ್ಕೆ ಪ್ರಯಾಣಿಸಿದ್ದರೆ. ಆದರೆ, ಇಶಾನ್ ಕಿಶನ್ ಕೀಪರ್ ಸ್ಲಾಟ್‌ಗೆ ನೆಚ್ಚಿನ ಆಟಗಾರ. ಹೀಗಿರುವಾಗ ಕಿಶನ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ನಿಗೂಢ. ಇವರು ಆರಂಭಿಕ ಆಟಗಾರರಾಗಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಇದು ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




