ಏಷ್ಯಾಕಪ್ ಹೊಸ ಜೆರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು: ಫೋಟೋ ನೋಡಿ
Team India Photoshoot Asia Cup 2023: ರವೀಂದ್ರ ಜಡೇಜಾ, ಶುಭ್ಮನ್ ಗಿಲ್ ಮತ್ತು ಇತರೆ ಆಟಗಾರರು ತಮ್ಮ ಏಷ್ಯಾಕಪ್ 2023 ರ ಆರಂಭಿಕ ಪಂದ್ಯಕ್ಕೂ ಏಷ್ಯಾಕಪ್ನ ಲೋಗೋ ಇರುವ ಫೋಟೋಕ್ಕೆ ಪೋಸ್ ನೀಡಿದರು. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಏಷ್ಯಾಕಪ್ 2023 ರಲ್ಲಿ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಲಿದೆ. ಶ್ರೀಲಂಕಾದಲ್ಲಿರುವ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್ 2 ರಂದು ಈ ಪಂದ್ಯ ನಡೆಯಲಿದೆ. ಬಹು ನಿರೀಕ್ಷಿತ ಮುಖಾಮುಖಿಯ ಮೊದಲು, ಭಾರತೀಯ ತಂಡದ ಆಟಗಾರರು ಏಷ್ಯಾಕಪ್ನ ಹೊಸ ಜೆರ್ಸಿಯಲ್ಲಿ ಫೋಟೋಶೂಟ್‌ನಲ್ಲಿ ಭಾಗವಹಿಸಿದರು. ರವೀಂದ್ರ ಜಡೇಜಾ, ಶುಭ್ಮನ್ ಗಿಲ್ ಮತ್ತು ಇತರೆ ಆಟಗಾರರು ಆರಂಭಿಕ ಪಂದ್ಯಕ್ಕೂ ಮುನ್ನ ಏಷ್ಯಾಕಪ್ನ ಲೋಗೋ ಇರುವ ಫೋಟೋಕ್ಕೆ ಪೋಸ್ ನೀಡಿದರು.
ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಶುಭ್ಮನ್ ಗಿಲ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. “ಬ್ಲೂ ಫೀವರ್” ಎಂದು ಜಡೇಜಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಗಿಲ್ ಅವರು “ಒನ್ ಲವ್”, ಎಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಭಾರತೀಯ ವೇಗಿ ಮೊಹಮ್ಮದ್ ಶಮಿ ಅವರು ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಗ್ರೂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಏಷ್ಯಾಕಪ್ ಜೆರ್ಸಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟ ಜಡೇಜಾ:
View this post on Instagram
ಏಷ್ಯಾಕಪ್ ಜೆರ್ಸಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟ ಶುಭ್ಮನ್ ಗಿಲ್:
View this post on Instagram
ಮೊಹಮ್ಮದ್ ಶಮಿ ಹಂಚಿಕೊಂಡ ಗ್ರೂಪ್ ಫೋಟೋ:
View this post on Instagram
ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ:
ಭಾರತ ಹಾಗೂ ಪಾಕಿಸ್ತಾನ ರಣರೋಚಕ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದರೂ, ಸೆಪ್ಟೆಂಬರ್ 2 ರಂದು ಮಳೆಯು ಅಡ್ಡಿ ಪಡಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಯುಕೆ ಮೂಲದ ಮೆಟ್ ಆಫೀಸ್ ಪ್ರಕಾರ, ಕ್ಯಾಂಡಿಯಲ್ಲಿ ಇಂಡೋ-ಪಾಕ್ ಕದನ ಪ್ರಾರಂಭವಾಗುವ 30 ನಿಮಿಷಗಳ ಮೊದಲು 70% ಮಳೆಯಾಗುತ್ತದೆ. ಪಂದ್ಯ ಆರಂಭವಾದರೂ ಮಧ್ಯದಲ್ಲಿ ಮಳೆ ಸುರಿಯುವ ಸಂಭವವಿದೆ ಎಂದು ಹೇಳಲಾಗಿದೆ. ಇದರ ಹೊರತಾಗಿ, ಆರ್ದ್ರತೆಯು ಸುಮಾರು 85 ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದ್ದು, ತಾಪಮಾನವು ಸುಮಾರು 27 ಡಿಗ್ರಿ ಸೆಲ್ಸಿಯಸ್ ಇರುತ್ತದೆಂತೆ.
Asia Cup 2023: ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದ ಶ್ರೀಲಂಕಾ
ಏಷ್ಯಾಕಪ್ 2023ಕ್ಕೆ ಟೀಮ್ ಇಂಡಿಯಾ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಏಷ್ಯಾಕಪ್ 2023ಕ್ಕೆ ಪಾಕಿಸ್ತಾನ ತಂಡ:
ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 am, Fri, 1 September 23




