AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ‘ಇಂತಾ ತಂಡವನ್ನು ಎಲ್ಲಿಯೂ ನೋಡಿಲ್ಲ’; ಟೀಂ ಇಂಡಿಯಾ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್ ನಾಯಕ

India-Pakistan Handshake Row: 2025ರ ಏಷ್ಯಾಕಪ್ ಭಾರತ-ಪಾಕಿಸ್ತಾನ ನಡುವಿನ ಹ್ಯಾಂಡ್‌ಶೇಕ್ ವಿವಾದದಿಂದ ಸದ್ದು ಮಾಡಿದೆ. ಪಾಕ್ ಆಟಗಾರರೊಂದಿಗೆ ಟೀಂ ಇಂಡಿಯಾ ಕೈಕುಲುಕಲು ನಿರಾಕರಿಸಿದ್ದು, ಪಾಕ್ ಕ್ರಿಕೆಟ್ ಮಂಡಳಿ ICCಗೆ ದೂರು ನೀಡಿತ್ತು. ಈಗ ಪಾಕ್ ನಾಯಕ ಸಲ್ಮಾನ್ ಆಘಾ ಈ ವಿವಾದದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದು, ಇಂತಹ ಘಟನೆಯನ್ನು ಹಿಂದೆಂದೂ ನೋಡಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

Asia Cup 2025: ‘ಇಂತಾ ತಂಡವನ್ನು ಎಲ್ಲಿಯೂ ನೋಡಿಲ್ಲ’; ಟೀಂ ಇಂಡಿಯಾ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್ ನಾಯಕ
Salman Ali Agha
ಪೃಥ್ವಿಶಂಕರ
|

Updated on:Sep 27, 2025 | 10:25 PM

Share

2025 ರ ಏಷ್ಯಾಕಪ್ (Asia Cup 2025) ಆಟಗಾರರ ಪ್ರದರ್ಶನದಿಂದ ಸುದ್ದಿಯಾದದ್ದಕ್ಕಿಂತ ಹೆಚ್ಚಾಗಿ, ವಿವಾದಗಳಿಂದಲೇ ಸಖತ್ ಸದ್ದು ಮಾಡಿತು. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಹುಟ್ಟಿಕೊಂಡ ಹ್ಯಾಂಡ್‌ಶೇಕ್ ವಿವಾದ ಪಂದ್ಯಾವಳಿ ಮುಗಿಯುವುದಕ್ಕೆ ಬಂದರೂ ಇನ್ನು ತಣ್ಣಗಾಗಿಲ್ಲ. ಪಾಕ್ ಆಟಗಾರರೊಂದಿಗೆ ಟೀಂ ಇಂಡಿಯಾ ಹ್ಯಾಂಡ್‌ಶೇಕ್ ಮಾಡದಿರಲು ನಿರಾಕರಿಸಿದ ಘಟನೆ ಪಾಕಿಸ್ತಾನವನ್ನು ವಿಶ್ವದ ಮುಂದೆ ಮುಜುಗರಕ್ಕೀಡು ಮಾಡಿತ್ತು. ಇದರಿಂದ ಕೆರಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಐಸಿಸಿಗೂ ದೂರು ನೀಡಿತ್ತು. ಟೀಂ ಇಂಡಿಯಾದಿಂದ ಈ ರೀತಿಯ ನಡೆಯನ್ನು ನಿರೀಕ್ಷಿಸದ ಪಾಕಿಸ್ತಾನ ಆಟಗಾರರು ಆಘಾತಕ್ಕೆ ಒಳಗಾಗಿದ್ದರು. ಇದೀಗ ಆ ವಿವಾದದ ಬಗ್ಗೆ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

2025 ರ ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 28 ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಶಸ್ತಿಗಾಗಿ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಪರಿಣಾಮವಾಗಿ, ಈ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ, ಎರಡೂ ದೇಶಗಳ ನಡುವಿನ ಉದ್ವಿಗ್ನತೆಯು ಪಂದ್ಯಾವಳಿಯ ಮೇಲೂ ಪರಿಣಾಮ ಬೀರಿದೆ, ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿತ್ತು.

ಇಂತಾ ತಂಡವನ್ನು ಎಲ್ಲಿಯೂ ನೋಡಿಲ್ಲ

ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಅಲಿ ಆಘಾ, ‘ಹಸ್ತಲಾಘವದ ವಿಷಯಕ್ಕೆ ಬಂದರೆ, ನಾನು 2007 ರಿಂದ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದೇನೆ. ಎರಡು ತಂಡಗಳ ಆಟಗಾರರು ಕೈಕುಲುಕದೇ ಇರುವುದನ್ನು ನಾನು ಎಂದಿಗೂ ನೋಡಿಲ್ಲ. ನನ್ನ ತಂದೆ ಕೂಡ ದೊಡ್ಡ ಕ್ರಿಕೆಟ್ ಅಭಿಮಾನಿ ಮತ್ತು ನಾನು ಅವರಿಂದ ಅನೇಕ ಕ್ರಿಕೆಟ್ ಕಥೆಗಳನ್ನು ಕೇಳಿದ್ದೇನೆ. ಎರಡು ತಂಡಗಳು ಕೈಕುಲುಕದೇ ಇದ್ದ ಸಮಯವನ್ನು ಅವರು ಎಂದಿಗೂ ಉಲ್ಲೇಖಿಸಲಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಇದಕ್ಕಿಂತ ಕೆಟ್ಟದಾಗಿದ್ದಾಗಲೂ ನಾವು ಕೈಕುಲುಕಿದೆವು’ ಎಂದು ಆಘಾ ಹೇಳಿದ್ದಾರೆ.

Asia Cup 2025: ಸೆ.28 ರಂದು ನಡೆಯಲಿರುವ ಫೈನಲ್​ನಲ್ಲಿ ಭಾರತ ಗೆಲ್ಲುವುದು ಖಚಿತ; ಇಲ್ಲಿದೆ ಪುರಾವೆ

ಏಷ್ಯಾಕಪ್ ಗೆಲ್ಲುವುದು ನಮ್ಮ ಗುರಿ

ಮುಂದುವರೆದು ಮಾತನಾಡಿದ ಸಲ್ಮಾನ್ ಆಘಾ, ‘ನಮ್ಮ ನಿಯಂತ್ರಣಕ್ಕೆ ಮೀರಿದ ವಿಷಯಗಳ ಮೇಲೆ ನಾವು ಗಮನಹರಿಸುವುದಿಲ್ಲ. ಮಾಧ್ಯಮ ವರದಿಗಳು ಮತ್ತು ಹೊರಗಿನ ಊಹಾಪೋಹಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಏಷ್ಯಾಕಪ್ ಗೆಲ್ಲುವುದು ನಮ್ಮ ಗುರಿ. ನಾವು ಉತ್ತಮ ಕ್ರಿಕೆಟ್ ಆಡಲು ಇಲ್ಲಿಗೆ ಬಂದಿದ್ದೇವೆ ಮತ್ತು ನಾಳೆಯ ಫೈನಲ್ ಗೆಲ್ಲಲು ಪ್ರಯತ್ನಿಸುತ್ತೇವೆ. ಇನ್ಶಾ ಅಲ್ಲಾ ನಾವು ಗೆಲ್ಲುವುದನ್ನು ನೀವು ನೋಡುತ್ತೀರಿ. ನಾವು ಸಂಪೂರ್ಣ 40 ಓವರ್‌ಗಳಿಗೆ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರೆ, ನಾವು ಯಾವುದೇ ತಂಡವನ್ನು ಸೋಲಿಸಬಹುದು ಎಂದು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Sat, 27 September 25

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ