Asia Cup 2025: ಇಂದು ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ: ಈ ಆಟಗಾರರ ಭವಿಷ್ಯ ನಿರ್ಧಾರ
Team India Squad Asia Cup 2025: 2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಈ ದೊಡ್ಡ ಟೂರ್ನಮೆಂಟ್‌ಗಾಗಿ ಭಾರತೀಯ ತಂಡವನ್ನು ಆಗಸ್ಟ್ 19 ರಂದು ಅಂದರೆ ಇಂದು ಬಿಸಿಸಿಐ ಸಭೆ ಕರೆದು ಘೋಷಿಸಲಿದೆ. ಕೊನೆಯ ಬಾರಿಗೆ ಏಷ್ಯಾ ಕಪ್ ಅನ್ನು ODI ಸ್ವರೂಪದಲ್ಲಿ ಆಡಿದ್ದು 2023 ರಲ್ಲಿ, ಭಾರತ ತಂಡವು ಆ ಟೂರ್ನಿಯನ್ನು ಗೆದ್ದುಕೊಂಡಿತ್ತು. ಈ ಬಾರಿ ಟಿ20 ಸ್ವರೂಪದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು (ಆ. 19): 2025 ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಈ ದೊಡ್ಡ ಟೂರ್ನಮೆಂಟ್‌ಗಾಗಿ ಭಾರತೀಯ ತಂಡವನ್ನು ಆಗಸ್ಟ್ 19 ರಂದು ಅಂದರೆ ಇಂದು ಘೋಷಿಸಲಾಗುವುದು. ಮೊದಲು ಬಿಸಿಸಿಐ (BCCI) ಪ್ರಧಾನ ಕಚೇರಿಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ನಂತರ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ತಂಡದ ನಾಯಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ತಂಡವನ್ನು ಅನೌನ್ಸ್ ಮಾಡಲಿದ್ದಾರೆ. ಇದರ ಜೊತೆಗೆ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಕೂಡ ಟೀಮ್ ಇಂಡಿಯಾವನ್ನು ಹೆಸರಿಸಲಿದ್ದಾರೆ.
ಮಹಿಳಾ ತಂಡದ ಜೊತೆಗೆ ಪುರುಷರ ತಂಡದ ಆಯ್ಕೆ
ಆಗಸ್ಟ್ 19 ರಂದು ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಿಗೆ ಆಯ್ಕೆ ನಡೆಯಲಿದೆ. ಏಷ್ಯಾ ಕಪ್‌ಗೆ ಪುರುಷರ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಮಹಿಳಾ ತಂಡವನ್ನು ಕೂಡ ಆಯ್ಕೆ ಮಾಡಲಾಗುತ್ತದೆ. ಪುರುಷರ ತಂಡದ ಸಭೆ ಮಧ್ಯಾಹ್ನ 1:30 ಕ್ಕೆ ಮತ್ತು ಮಹಿಳಾ ತಂಡದ ಸಭೆ ಮಧ್ಯಾಹ್ನ 3:30 ಕ್ಕೆ ನಡೆಯಲಿದೆ. ಸಭೆಯ ನಂತರ, ನಾಯಕ ಮತ್ತು ನಾಯಕಿ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಈ ಆಟಗಾರರ ಭವಿಷ್ಯ ನಿರ್ಧಾರ
ಏಷ್ಯಾ ಕಪ್ ತಂಡದಲ್ಲಿ ಯಾವ ಆಟಗಾರರಿಗೆ ಸ್ಥಾನ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಟೀಮ್ ಇಂಡಿಯಾದ ಕಳೆದ ಟಿ20 ಸರಣಿಯ ಹೆಚ್ಚಿನ ಆಟಗಾರರನ್ನು ಏಷ್ಯಾ ಕಪ್‌ಗೆ ಆಯ್ಕೆ ಮಾಡುವ ನಿರೀಕ್ಷೆಯಿದೆ. ಆದರೆ ಶುಭ್ಮನ್ ಗಿಲ್, ರಿಂಕು ಸಿಂಗ್, ಕೆಎಲ್ ರಾಹುಲ್ ಅವರಂತಹ ಆಟಗಾರರ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.
Asia Cup: ಏಷ್ಯಾಕಪ್‌ನ ಪ್ರತಿ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿವರು
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಏಷ್ಯಾ ಕಪ್‌ಗಾಗಿ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು ಮತ್ತು ಗಿಲ್ ಮತ್ತು ಜೈಸ್ವಾಲ್ ಇಬ್ಬರನ್ನೂ ಕೈಬಿಡುವ ಸಾಧ್ಯತೆ ಇದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಇತ್ತೀಚಿನ ದಿನಗಳಲ್ಲಿ ಟಿ20 ಸ್ವರೂಪದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೋರ್ ಗುಂಪನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಆಯ್ಕೆದಾರರು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರನ್ನೇ ಆರಂಭಿಕಾರಿ ಕಣಕ್ಕಿಳಿಯಲು ಬಯಸುತ್ತಿದೆ.
ಮೂರನೇ ಸ್ಥಾನಕ್ಕಾಗಿ ಗಿಲ್ ಮತ್ತು ಜೈಸ್ವಾಲ್ ಅವರ ಹೆಸರನ್ನು ಪರಿಗಣಿಸಬಹುದು ಎಂದು ವರದಿ ಹೇಳುತ್ತದೆ. ಆದಾಗ್ಯೂ, ಜೈಸ್ವಾಲ್ ಪ್ರಸ್ತುತ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಈ ಇಬ್ಬರಲ್ಲಿ ಯಾರಿಗೂ ಅವಕಾಶ ಸಿಗದಿರಬಹುದು ಎಂಬುದು ನೋಡಬೇಕಿದೆ. ಇದರೊಂದಿಗೆ, ಶಿವಂ ದುಬೆ ಅಥವಾ ವಾಷಿಂಗ್ಟನ್ ಸುಂದರ್ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಜಿತೇಶ್ ಶರ್ಮಾ ಏಷ್ಯಾ ಕಪ್ ತಂಡದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಐಪಿಎಲ್ 2025 ರಲ್ಲಿ, ಜಿತೇಶ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಮ್ಮ ದೊಡ್ಡ ಹೊಡೆತಗಳಿಂದ ಎಲ್ಲರನ್ನೂ ಮೆಚ್ಚಿಸಿದ್ದರು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಆಯ್ಕೆ ಅನುಮಾನ. ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




