ಏಷ್ಯನ್ ಗೇಮ್ಸ್ ಕ್ರಿಕೆಟ್ ಸೆಮೀಸ್ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?

2026 ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಸೆಮಿಫೈನಲ್​ಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಪ್ರವೇಶ ಪಡೆದಿವೆ. ಸೆಪ್ಟೆಂಬರ್ 20 ರಂದು ಪಾಕಿಸ್ತಾನ vs ಶ್ರೀಲಂಕಾ ಮತ್ತು ಭಾರತ vs ಬಾಂಗ್ಲಾದೇಶ ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಭಾರತ ಪಂದ್ಯ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ಮತ್ತು ಸೋನಿ LIV ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಪದಕ ಪಂದ್ಯಗಳು ಸೆಪ್ಟೆಂಬರ್ 22 ರಂದು ನಡೆಯಲಿವೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಸೆಮೀಸ್ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?
ಏಷ್ಯನ್ ಗೇಮ್ಸ್ ಕ್ರಿಕೆಟ್

Updated on: Sep 18, 2026 | 5:06 PM

2026 ರ ಏಷ್ಯನ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ಸ್ಪರ್ಧೆಯ ಕ್ವಾರ್ಟರ್-ಫೈನಲ್‌ ಸುತ್ತು ಮುಗಿದಿದ್ದು, ಈ ಸುತ್ತಿನಲ್ಲಿ ಗೆದ್ದ 4 ತಂಡಗಳು ಇದೀಗ ಸೆಮಿಫೈನಲ್​ಗೆ ಅರ್ಹತೆ ಪಡೆದಿವೆ. ಅದರಂತೆ ಸೆಮಿಫೈನಲ್ ಸುತ್ತಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ. ಇದರಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಎದುರು ಬದುರಾಗಲಿವೆ.

ಮೊದಲಿಗೆ ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶಗಳನ್ನು ನೋಡುವುದಾದರೆ, ಬಾಂಗ್ಲಾದೇಶ ಮತ್ತು ಚೀನಾ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ಇದರಿಂದಾಗಿ ಬಾಂಗ್ಲಾದೇಶ ಸೆಮಿಫೈನಲ್ ಸ್ಥಾನವನ್ನು ಪಡೆದುಕೊಂಡಿತು. ನಂತರ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್​ನಲ್ಲಿ ಸ್ಥಾನ ಪಡೆದುಕೊಂಡಿತು. ನಂತರ, ಸೆಪ್ಟೆಂಬರ್ 18 ರ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ, ಮಲೇಷ್ಯಾವನ್ನು ಸೋಲಿಸಿದರೆ, ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಜಪಾನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.

ಸೆಮಿಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಮೊದಲನೇ ಸೆಮಿಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಮೊದಲನೇ ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 20 ರಂದು ನಡೆಯಲಿದೆ.

ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಯಾವೆರಡು ತಂಡಗಳು ಮುಖಾಮುಖಿಯಾಗಲಿವೆ?

ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ.

ಮೊದಲನೇ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?

ಮೊದಲನೇ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 5:30 ಕ್ಕೆ ಆರಂಭವಾಗಲಿದೆ.

ಎರಡನೇ ಸೆಮಿಫೈನಲ್

ಎರಡನೇ ಸೆಮಿಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಎರಡನೇ ಸೆಮಿಫೈನಲ್ ಪಂದ್ಯವೂ ಸೆಪ್ಟೆಂಬರ್ 20 ರಂದೇ ನಡೆಯಲಿದೆ.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಯಾವೆರಡು ತಂಡಗಳು ಮುಖಾಮುಖಿಯಾಗಲಿವೆ?

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿವೆ.

ಎರಡನೇ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?

ಎರಡನೇ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಆರಂಭವಾಗಲಿದೆ.

ಎರಡೂ ಸೆಮಿಫೈನಲ್ ಪಂದ್ಯಗಳು ಜಪಾನ್‌ನ ನಿಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿವೆ. ಎಲ್ಲಾ ಕ್ವಾರ್ಟರ್-ಫೈನಲ್ ಪಂದ್ಯಗಳು ಇದೇ ಸ್ಥಳದಲ್ಲಿ ನಡೆದಿದ್ದವು. ಸೆಮಿಫೈನಲ್ ಪಂದ್ಯಗಳ ನಂತರ, ಕಂಚಿನ ಪದಕ ಪಂದ್ಯವು ಸೆಪ್ಟೆಂಬರ್ 22 ರಂದು ಬೆಳಿಗ್ಗೆ 5:30 ಕ್ಕೆ (ಭಾರತೀಯ ಸಮಯ) ನಡೆಯಲಿದೆ. ನಂತರ ಅಂತಿಮ ಪಂದ್ಯವಾದ ಚಿನ್ನದ ಪದಕ ಪಂದ್ಯವು ಅದೇ ದಿನ ಬೆಳಿಗ್ಗೆ 10:30 ಕ್ಕೆ (ಭಾರತೀಯ ಸಮಯ) ನಡೆಯಲಿದೆ.

ಭಾರತದಲ್ಲಿ ನೀವು ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಭಾರತದಲ್ಲಿ, ಸೆಮಿಫೈನಲ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ 3 ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಪಂದ್ಯಗಳ ನೇರ ಪ್ರಸಾರವು ಸೋನಿ LIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us