Athiya Shetty KL Rahul wedding: ರಾಹುಲ್ ಮನೆಯಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ; ವಿಡಿಯೋ ವೈರಲ್
Athiya Shetty-KL Rahul Marriage: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆಯ ತಯಾರಿ ಶುರುವಾಗಿದ್ದು ಕೆಎಲ್ ರಾಹುಲ್ ಅವರ ಮುಂಬೈನ ಮನೆಯಲ್ಲಿ ಮದುವೆ ಸಂಭ್ರಮ ಕಾಣಲಾರಂಭಿಸಿದೆ.

Athiya Shetty And KL Rahul Marriage: ಮತ್ತೊಬ್ಬ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಮತ್ತು ನಟಿ ಅಥಿಯಾ ಶೆಟ್ಟಿ (Athiya Shetty) ಮದುವೆಯ ತಯಾರಿ ಶುರುವಾಗಿದ್ದು ಕೆಎಲ್ ರಾಹುಲ್ ಅವರ ಮುಂಬೈನ ಮನೆಯಲ್ಲಿ ಮದುವೆ ಸಂಭ್ರಮ ಕಾಣಲಾರಂಭಿಸಿದೆ. ಇದರ ಮೊದಲ ವಿಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜನವರಿ 23 ರಂದು ಕೆಎಲ್ ರಾಹುಲ್ ಮತ್ತು ಅಥಿಯಾ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕಾಗಿ ರಾಹುಲ್ ನ್ಯೂಜಿಲೆಂಡ್ ವಿರುದ್ಧದ (India and New Zealand) ಏಕದಿನ ಸರಣಿಯಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಸಿಸಿಐ (BCCI) ಕೂಡ ಕಿವೀಸ್ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸುವಾಗ ರಾಹುಲ್ ಹಾಗೂ ಅಕ್ಷರ್ ಪಟೇಲ್ ಕೌಟುಂಬಿಕ ಕಾರಣಗಳಿಂದ ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ನೀಡಿತ್ತು.
ಸುನೀಲ್ ಶೆಟ್ಟಿ ಫಾರ್ಮ್‌ಹೌಸ್‌ನಲ್ಲಿ ವಿವಾಹ
ಮುಂಬೈನಲ್ಲಿರುವ ಕೆಎಲ್ ರಾಹುಲ್ ಅವರ ಮನೆಗೆ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳು ಹರಿದಾಡಲಾರಂಭಿಸಿವೆ. ಅಲ್ಲದೆ ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಅಥಿಯಾ ಅವರ ತಂದೆ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ವಿವಾಹ ನಡೆಯಲಿದೆ. ಜನವರಿ 21 ರಿಂದ ವಿವಿಧ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಈ ಮದುವೆಗೆ ಕೆಲವೇ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ ಎಂಬುದು ತಿಳಿದುಬಂದಿದೆ. ಹಾಗೆಯೇ ಅಥಿಯಾ ಅವರ ಸ್ನೇಹಿತರು, ಸಹೋದರ ಅಹಾನ್ ಶೆಟ್ಟಿ, ತಾಯಿ ಮಾಯಾ ಶೆಟ್ಟಿ ಮತ್ತು ತಂದೆ ಸುನೀಲ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ.
View this post on Instagram
View this post on Instagram
ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಜನವರಿ 21 ರಿಂದ ವಿವಾಹ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ನಂತರ ಜನವರಿ 23 ರಂದು ಇಬ್ಬರೂ ಪರಸ್ಪರ ಮದುವೆಯಾಗಲಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ.
ICC Rankings: ಟಾಪ್ 5ರೊಳಗೆ ಎಂಟ್ರಿ; ಏಕದಿನ ರ್ಯಾಂಕಿಂಗ್ನಲ್ಲಿ ಕಿಂಗ್ ಕೊಹ್ಲಿ- ಸಿರಾಜ್ರದ್ದೇ ದರ್ಬಾರು!
ಅಥಿಯಾ 2015 ರಲ್ಲಿ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದರ ನಂತರ, ಅವರು ಮುಬಾರಕನ್ (2017) ಮತ್ತು ಮೋತಿಚೂರ್ ಚಕ್ನಾಚೂರ್ (2019) ಎಂಬ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. ಫುಟ್ಬಾಲ್ ಆಟಗಾರ ಅಫ್ಶಾನ್ ಆಶಿಕ್ ಅವರ ಜೀವನಚರಿತ್ರೆ ‘ಹೋಪ್ ಸೋಲೋ’ದಲ್ಲಿ ಅಥಿಯಾ ಶೀಘ್ರದಲ್ಲೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Wed, 18 January 23




