2 ಸರಣಿಗಳಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಬಾಂಗ್ಲಾದೇಶ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡವು, ಇದೀಗ ಮುಂಬರುವ ಏಕದಿನ ಸರಣಿಗಳಿಗೆ ಸಂಪೂರ್ಣವಾಗಿ ಸಜ್ಜಾಗುತ್ತಿದೆ. ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ವಿರುದ್ಧದ ಈ ಸರಣಿಗಳಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ 17 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

2 ಸರಣಿಗಳಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
Australia
Image Credit source: GettyImages

Updated on: Sep 01, 2026 | 8:55 AM

ಮುಂಬರುವ ಝಿಂಬಾಬ್ವೆ ಮತ್ತು ಸೌತ್ ಆಫ್ರಿಕಾ ವಿರುದ್ಧದ ಏಕದಿಕ ಸರಣಿಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ (CA) 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವಿರುವ ಈ ತಂಡವನ್ನು ಸ್ಟಾರ್ ಆಲ್-ರೌಂಡರ್ ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದಾರೆ.

ಇನ್ನು ಆಸ್ಟ್ರೇಲಿಯಾ ಏಕದಿನ ತಂಡದ ಖಾಯಂ ಸದಸ್ಯರಾಗಿದ್ದ ಮಾರ್ನಸ್ ಲಾಬುಶೇನ್ ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕಾರಣ, ಅವರನ್ನು ಈ ಸರಣಿಯ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಒಂದೇ ಸರಣಿಗೆ ಕಮಿನ್ಸ್-ಸ್ಟಾರ್ಕ್:

ಆಸೀಸ್ ಪಡೆಯ ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಝಿಂಬಾಬ್ವೆ ಪ್ರವಾಸದ ವೇಳೆ ವಿಶ್ರಾಂತಿ ನೀಡಲಾಗಿದೆ. ಆದರೆ, ಹರಿಣಗಳ ನಾಡಿನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಹೈ-ವೋಲ್ಟೇಜ್ ಸರಣಿ ವೇಳೆಗೆ ಈ ಇಬ್ಬರೂ ಅನುಭವಿ ಬೌಲರ್‌ಗಳು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮಿನ್ಸ್ (ಸೌತ್ ಆಫ್ರಿಕಾ ಸರಣಿಗೆ ಮಾತ್ರ), ಮಿಚೆಲ್ ಸ್ಟಾರ್ಕ್ (ಸೌತ್ ಆಫ್ರಿಕಾ ಸರಣಿಗೆ ಮಾತ್ರ), ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಆ್ಯಡಂ ಝಂಪಾ, ಜೋಶ್ ಹೇಝಲ್‌ವುಡ್, ನಾಥನ್ ಎಲ್ಲಿಸ್, ಮ್ಯಾಥ್ಯೂ ರೆನ್‌ಶಾ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಸ್ಪೆನ್ಸರ್ ಜಾನ್ಸನ್, ಒಲಿವರ್ ಪೀಕ್ ಮತ್ತು ಬಿಲ್ಲಿ ಸ್ಟಾನ್ಲೇಕ್.

ಈ ಸರಣಿಗಳ ವೇಳಾಪಟ್ಟಿ:

ಆಸ್ಟ್ರೇಲಿಯಾ vs ಝಿಂಬಾಬ್ವೆ ಸರಣಿ:
ಪಂದ್ಯ ದಿನಾಂಕ ಮೈದಾನ
1ನೇ ಏಕದಿನ ಸೆಪ್ಟೆಂಬರ್ 15, 2026 ಹರಾರೆ ಸ್ಪೋರ್ಟ್ಸ್ ಕ್ಲಬ್
2ನೇ ಏಕದಿನ ಸೆಪ್ಟೆಂಬರ್ 18, 2026 ಹರಾರೆ ಸ್ಪೋರ್ಟ್ಸ್ ಕ್ಲಬ್
3ನೇ ಏಕದಿನ ಸೆಪ್ಟೆಂಬರ್ 20, 2026 ಹರಾರೆ ಸ್ಪೋರ್ಟ್ಸ್ ಕ್ಲಬ್

ಇದನ್ನೂ ಓದಿ: ದಾಖಲೆಯ ಮೊತ್ತಕ್ಕೆ ಬಿಗ್ ಬ್ಯಾಷ್​ ಲೀಗ್​ಗೆ ಬೆನ್ ಸ್ಟೋಕ್ಸ್ ಎಂಟ್ರಿ!
ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ ಸರಣಿ:

ಪಂದ್ಯ ದಿನಾಂಕ ಮೈದಾನ
1ನೇ ಏಕದಿನ ಸೆಪ್ಟೆಂಬರ್ 24, 2026 ಕಿಂಗ್ಸ್‌ಮೀಡ್, ಡರ್ಬನ್
2ನೇ ಏಕದಿನ ಸೆಪ್ಟೆಂಬರ್ 27, 2026 ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್
3ನೇ ಏಕದಿನ ಸೆಪ್ಟೆಂಬರ್ 30, 2026 ಸೆನ್ವೆಸ್ ಪಾರ್ಕ್, ಪಾಚೆಫ್‌ಸ್ಟ್ರೂಮ್

ಈ ಎರಡು ಏಕದಿನ ಸರಣಿಗಳ ಬಳಿಕ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ವಿರುದ್ಧ ಮೂರು ಮ್ಯಾಚ್​ಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ.

 

Loading...
Unable to load recommendations.
Follow Us