AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆಯ ಮೊತ್ತಕ್ಕೆ ಬಿಗ್ ಬ್ಯಾಷ್​ ಲೀಗ್​ಗೆ ಬೆನ್ ಸ್ಟೋಕ್ಸ್ ಎಂಟ್ರಿ!

Ben Stokes: ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್-ರೌಂಡರ್ ಬೆನ್ ಸ್ಟೋಕ್ಸ್ ಮುಂಬರುವ ಬಿಬಿಎಲ್ ಸೀಸನ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಕಣಕ್ಕಿಳಿಯಲಿದ್ದಾರೆ. ಬರೋಬ್ಬರಿ 11 ವರ್ಷಗಳ ನಂತರ ಬಿಬಿಎಲ್‌ಗೆ ಪುನರಾಗಮನ ಮಾಡುತ್ತಿರುವ ಸ್ಟೋಕ್ಸ್ ಅವರಿಗೆ ಸ್ಟ್ರೈಕರ್ಸ್ ಫ್ರಾಂಚೈಸಿ ಭಾರಿ ಮೊತ್ತ ನೀಡಲು ಒಪ್ಪಿಕೊಂಡಿದೆ.

ದಾಖಲೆಯ ಮೊತ್ತಕ್ಕೆ ಬಿಗ್ ಬ್ಯಾಷ್​ ಲೀಗ್​ಗೆ ಬೆನ್ ಸ್ಟೋಕ್ಸ್ ಎಂಟ್ರಿ!
Ben Stokes
ಝಾಹಿರ್ ಯೂಸುಫ್
|

Updated on: Sep 01, 2026 | 8:31 AM

Share

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL|16) ಆರಂಭಕ್ಕೂ ಮುನ್ನವೇ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವದ ಶ್ರೇಷ್ಠ ಆಲ್-ರೌಂಡರ್ ಆಗಿರುವ ಬೆನ್ ಸ್ಟೋಕ್ಸ್, ಮುಂಬರುವ ಬಿಬಿಎಲ್​ ಆವೃತ್ತಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಆಡಲು ಅಧಿಕೃತವಾಗಿ ಸಹಿ ಹಾಕಿದ್ದಾರೆ. ಅದು ಸಹ ಸುಮಾರು 5,00,000 ಆಸ್ಟ್ರೇಲಿಯನ್ ಡಾಲರ್ ಒಪ್ಪಂದದೊಂದಿಗೆ ಎಂಬುದು ವಿಶೇಷ.

3 ಫ್ರಾಂಚೈಸಿಗಳ ಪೈಪೋಟಿ!

35 ವರ್ಷದ ಬೆನ್ ಸ್ಟೋಕ್ಸ್ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಬಿಬಿಎಲ್‌ನ ಮೂರು ಪ್ರಮುಖ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಸಿಡ್ನಿ ಸಿಕ್ಸರ್ಸ್ ಮತ್ತು ಸ್ಟೋಕ್ಸ್ ಅವರ ಹಳೆಯ ತಂಡವಾದ ಮೆಲ್ಬೋರ್ನ್ ರೆನೆಗೇಡ್ಸ್ ಕೂಡ ಭಾರಿ ಮೊತ್ತದ ಆಫರ್ ನೀಡಿದ್ದವು. ಆದರೆ, ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ ಈ ರೇಸ್‌ನಲ್ಲಿ ಜಯಗಳಿಸಿದೆ. ಈ ಒಪ್ಪಂದದ ಸೀಸನ್ ಮೌಲ್ಯ ಸರಿಸುಮಾರು 5,00,000 ಆಸ್ಟ್ರೇಲಿಯನ್ ಡಾಲರ್ (AUD) ಎಂದು ವರದಿಯಾಗಿದೆ.

ದಾಖಲೆಯ ಮೊತ್ತ!

5,00,000 ಆಸ್ಟ್ರೇಲಿಯನ್ ಡಾಲರ್ ಒಪ್ಪಂದೊಂದಿಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಗರಿಷ್ಠ ಸಂಭಾವನೆ ಪಡೆದ ಆಟಗಾರ ಎಂಬ ದಾಖಲೆ ಬೆನ್ ಸ್ಟೋಕ್ಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಪ್ಲಾಟಿನಂ ಗೆಟಗರಿಯಲ್ಲಿ ಕಣಕ್ಕಿಳಿಯುತ್ತಿದ್ದ ಆಟಗಾರರ ಹೆಸರಿನಲ್ಲಿತ್ತು.

  • ಬಿಬಿಎಲ್‌ನ ವಿದೇಶಿ ಆಟಗಾರರ ಡ್ರಾಫ್ಟ್‌ನ ನಿಯಮಗಳ ಪ್ರಕಾರ, ಅತ್ಯುನ್ನತ ಶ್ರೇಣಿಯಾದ ‘ಪ್ಲಾಟಿನಂ’ ವಿಭಾಗದ ಆಟಗಾರರಿಗೆ ಗರಿಷ್ಠ 4,20,000 AUD ಅಂದರೆ ಸುಮಾರು ₹2.86 ಕೋಟಿ ವರೆಗೆ ವೇತನ ನೀಡಲಾಗುತ್ತಿತ್ತು.

ಮುಂಬರುವ ಸೀಸನ್‌ಗಾಗಿ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಬೆನ್ ಸ್ಟೋಕ್ಸ್ ಅವರಿಗೆ 5,00,000 ಆಸ್ಟ್ರೇಲಿಯನ್ ಡಾಲರ್ ನೀಡಲು ಒಪ್ಪಿಕೊಂಡಿದೆ. ಅಂದರೆ, ಭಾರತೀಯ ಮೌಲ್ಯದ ಪ್ರಕಾರ ಅವರು ಸುಮಾರು ₹3.41 ಕೋಟಿ  ಸಂಭಾವನೆ ಪಡೆಯಲಿದ್ದಾರೆ.

ಸಂಪೂರ್ಣ ಟೂರ್ನಿಗೆ ಲಭ್ಯ:

ಬೆನ್ ಸ್ಟೋಕ್ಸ್ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಂಪೂರ್ಣ ನಿವೃತ್ತಿ ಘೋಷಿಸಿರುವುದರಿಂದ, ಈ ಬಾರಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ಒತ್ತಡ ಅವರಿಗಿರುವುದಿಲ್ಲ. ಹೀಗಾಗಿ, ಅವರು ಬಿಬಿಎಲ್‌ನ ಎಲ್ಲಾ ಪಂದ್ಯಗಳಿಗೂ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಲಭ್ಯವಿರಲಿದ್ದಾರೆ.

11 ವರ್ಷಗಳ ಬಳಿಕ ಕಂಬ್ಯಾಕ್:

ಬೆನ್ ಸ್ಟೋಕ್ಸ್ ಈ ಹಿಂದೆ 2014-15ರ ಸೀಸನ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಕೇವಲ 4 ಪಂದ್ಯಗಳನ್ನು ಆಡಿದ್ದರು. ಅದಾದ ಬಳಿಕ ಅಂತಾರಾಷ್ಟ್ರೀಯ ವೇಳಾಪಟ್ಟಿ ಹಾಗೂ ಗಾಯದ ಸಮಸ್ಯೆಯಿಂದಾಗಿ ಬಿಬಿಎಲ್‌ನಿಂದ ದೂರ ಉಳಿದಿದ್ದರು. ಅಂದು ಆಡಿದ್ದ 4 ಪಂದ್ಯಗಳಲ್ಲಿ ಅವರು ಹೊಬಾರ್ಟ್ ಹರಿಕೇನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ 77 ರನ್ ಚಚ್ಚಿ ಅಬ್ಬರಿಸಿದ್ದರು.

ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದಿಂದ 7 ಆಟಗಾರರು ಔಟ್..!

ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಬೆನ್ ಸ್ಟೋಕ್ಸ್ ಮತ್ತೆ ಬಿಗ್ ಬ್ಯಾಷ್ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಅದರಂತೆ, ಡಿಸೆಂಬರ್ 16, 2026 ರಂದು ಸಿಡ್ನಿ ಥಂಡರ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಅವರು ಅಡಿಲೇಡ್ ಸ್ಟ್ರೈಕರ್ಸ್ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

Follow Us
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಸ್ಯಾಂಡಲ್​ವುಡ್ ಮಯೂರ ಎಂಬ ಬಿರುದು ನೀಡಿದ್ದಕ್ಕೆ ಕಾರಣ ತಿಳಿಸಿದ ವಿಜಯ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!