AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBL 2026: ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್..!

BBL 2026: ಭಾರತದಲ್ಲಿ ಐಪಿಎಲ್ ಕ್ರೇಝ್ ನಡುವೆಯೇ ಈಗ ಮತ್ತೊಂದು ವಿದೇಶಿ ಟಿ20 ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ! ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯುವುದು ಈಗ ಬಹುತೇಕ ಪಕ್ಕಾ ಆಗಿದೆ. ಬಿಸಿಸಿಐ ನೀಡಿರುವ ಈ ಒಂದು ಗ್ರೀನ್ ಸಿಗ್ನಲ್ ನಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ತಾಯ್ನಾಡಿನಲ್ಲೇ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್‌ಗಳ ಅಬ್ಬರವನ್ನು ಕಣ್ಣಾರೆ ನೋಡುವ ಅದ್ಭುತ ಅವಕಾಶ ದೊರೆಯಲಿದೆ.

BBL 2026: ಭಾರತದಲ್ಲಿ ಬಿಗ್ ಬ್ಯಾಷ್ ಲೀಗ್..!
Bbl 2026
ಝಾಹಿರ್ ಯೂಸುಫ್
|

Updated on: May 19, 2026 | 4:38 PM

Share

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ‘ಬಿಗ್ ಬ್ಯಾಷ್ ಲೀಗ್‘ನ (BBL) ಉದ್ಘಾಟನಾ ಪಂದ್ಯವನ್ನು ಭಾರತದಲ್ಲಿ ಆಯೋಜಿಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ ಜೊತೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತುಕತೆ ನಡೆಸಿದ್ದು, ಈ ವೇಳೆ ಬಿಸಿಸಿಐ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ವರದಿಯಾಗಿದೆ.

ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ:

2026-27ರ ಬಿಬಿಎಲ್ (BBL 16) ಸೀಸನ್‌ನ ಭರ್ಜರಿ ಉದ್ಘಾಟನಾ ಪಂದ್ಯವು ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕಾಗಿ ತಮಿಳುನಾಡಿನ ಚೆನ್ನೈನಲ್ಲಿರುವ ಐತಿಹಾಸಿಕ ಎಂ.ಎ. ಚಿದಂಬರಂ (ಚೇಪಾಕ್) ಕ್ರೀಡಾಂಗಣವನ್ನು ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ ನೆಲವನ್ನು ಬಿಟ್ಟು ಹೊರದೇಶವೊಂದರಲ್ಲಿ ಬಿಗ್ ಬ್ಯಾಷ್ ಲೀಗ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ಪ್ರಯತ್ನಕ್ಕೆ ಕೈ ಹಾಕಲು ನಿರ್ಧರಿಸಿದೆ.

ರೇಸ್‌ನಲ್ಲಿರುವ ಪ್ರಮುಖ ತಂಡಗಳು ಯಾವುವು?

ಚೆನ್ನೈನಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲು ಬಿಬಿಎಲ್‌ನ ಮೂರು ಪ್ರಮುಖ ಫ್ರಾಂಚೈಸಿಗಳು ಮುಂಚೂಣಿಯಲ್ಲಿವೆ.

  • ಪರ್ತ್ ಸ್ಕಾರ್ಚರ್ಸ್ (Perth Scorchers)
  • ಸಿಡ್ನಿ ಥಂಡರ್ (Sydney Thunder)
  • ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades)

ಈ ಮೂರರಲ್ಲಿ ಎರಡು ತಂಡಗಳು ಭಾರತದ ಕ್ರಿಕೆಟ್ ಪ್ರೇಮಿಗಳ ಸಮ್ಮುಖದಲ್ಲಿ ಸೆಣಸಾಡಲಿವೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮಾಸ್ಟರ್ ಪ್ಲ್ಯಾನ್:

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಭಾರತವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ಕೋಟಿ ಕೋಟಿ ಭಾರತೀಯ ಪ್ರೇಕ್ಷಕರು ಮತ್ತು ಹೂಡಿಕೆದಾರರು.

ಬಿಬಿಎಲ್ ತಂಡಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸುತ್ತಿರುವ ಸಿಎ (CA), ಭಾರತದ ಐಪಿಎಲ್ (IPL) ಮಾಲೀಕರನ್ನು ಮತ್ತು ದೊಡ್ಡ ಬ್ರಾಂಡ್‌ಗಳನ್ನು ತನ್ನತ್ತ ಸೆಳೆಯಲು ಈ ಬಿಗ್ ಪ್ಲಾನ್ ರೂಪಿಸಿದೆ.

ವಿಶೇಷವೆಂದರೆ, ಭಾರತದಲ್ಲಿ ಈ ಪಂದ್ಯವನ್ನು ಆಯೋಜಿಸಲು ತಗಲುವ ಬಹುಪಾಲು ವೆಚ್ಚವನ್ನು ಕ್ರಿಕೆಟ್ ಆಸ್ಟ್ರೇಲಿಯಾವೇ ಭರಿಸಲಿದೆ.

ಇದನ್ನೂ ಓದಿ: 1 ಸ್ಥಾನಕ್ಕಾಗಿ 5 ತಂಡಗಳ ಪೈಪೋಟಿ: ಯಾರು ಹೇಗೆ ಪ್ಲೇಆಫ್​ಗೇರಬಹುದು?

ಮನರಂಜನೆಯ ರಸದೌತಣ:

ಡಿಸೆಂಬರ್ ಮಧ್ಯಭಾಗದಲ್ಲಿ (ಸಂಭಾವ್ಯವಾಗಿ ಡಿಸೆಂಬರ್ 12 ರಂದು) ಈ ಪಂದ್ಯ ನಡೆಯುವ ಸಾಧ್ಯತೆ ಇದೆ. ಅದರಂತೆ, ಭಾರತೀಯ ಕ್ರೀಡಾ ಪ್ರೇಮಿಗಳಿಗೆ ವರ್ಷಾಂತ್ಯದಲ್ಲಿ ಬಿಗ್ ಬ್ಯಾಷ್ ಲೀಗ್ ಅನ್ನು ಚೆನ್ನೈ ನಲ್ಲಿ ವೀಕ್ಷಿಸುವ ಅವಕಾಶ ದೊರೆಯಲಿದೆ. ಸದ್ಯಕ್ಕೆ ಬಿಸಿಸಿಐ ಪಂದ್ಯ ಆಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಇನ್ನು ಸರ್ಕಾರದ ಮಟ್ಟದಲ್ಲಿ ಅನುಮೋದನೆಗಳನ್ನು ಪಡೆಯಬೇಕಿದೆ. ಇದಾದ ಬಳಿಕ ಪಂದ್ಯ ಆಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More