AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

24 ವರ್ಷಗಳ ನಂತರ ಪಾಕ್ ನೆಲಕ್ಕೆ ಕಾಲಿಡಲಿದೆ ಆಸ್ಟ್ರೇಲಿಯಾ ತಂಡ! ಮೂರು ಮಾದರಿಯ ವೇಳಾಪಟ್ಟಿ ಹೀಗಿದೆ

ಮಾರ್ಚ್ 2022 ರಲ್ಲಿ ಪಾಕಿಸ್ತಾನ- ಆಸ್ಟ್ರೇಲಿಯಾ ಪ್ರವಾಸವನ್ನು ಪ್ರಸ್ತಾಪಿಸಲಾಗಿದೆ. ಇದು ಮೂರು ಟೆಸ್ಟ್, ಮೂರು ODI ಮತ್ತು ಒಂದು T20 ಅನ್ನು ಆಡಲು ಯೋಜಿಸಲಾಗಿದೆ.

24 ವರ್ಷಗಳ ನಂತರ ಪಾಕ್ ನೆಲಕ್ಕೆ ಕಾಲಿಡಲಿದೆ ಆಸ್ಟ್ರೇಲಿಯಾ ತಂಡ! ಮೂರು ಮಾದರಿಯ ವೇಳಾಪಟ್ಟಿ ಹೀಗಿದೆ
ಪಾಕಿಸ್ತಾನ Vs ಆಸ್ಟ್ರೇಲಿಯಾ
TV9 Web
| Edited By: |

Updated on: Nov 08, 2021 | 4:43 PM

Share

ಮುಂದಿನ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಅವರು ಎಲ್ಲಾ ಮೂರು ಮಾದರಿಗಳಲ್ಲಿ ಟೆಸ್ಟ್, ODI ಮತ್ತು T20 ಪಂದ್ಯಗಳನ್ನು ಆಡಲಿದ್ದಾರೆ. ಮಾರ್ಚ್ 2022 ರಲ್ಲಿ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸವನ್ನು ಪ್ರಸ್ತಾಪಿಸಲಾಗಿದೆ. ಇದು ಮೂರು ಟೆಸ್ಟ್, ಮೂರು ODI ಮತ್ತು ಒಂದು T20 ಅನ್ನು ಆಡಲು ಯೋಜಿಸಲಾಗಿದೆ. ಈ ಪಂದ್ಯಗಳು ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ. ಎಲ್ಲಾ ಮೂರು ಟೆಸ್ಟ್​ಗಳು ಈ ನಗರಗಳಲ್ಲಿ ನಡೆಯಲಿವೆ. ಅದೇ ಸಮಯದಲ್ಲಿ, ಏಕದಿನ ಮತ್ತು ಟಿ20 ಪಂದ್ಯಗಳು ಲಾಹೋರ್‌ನಲ್ಲಿ ಮಾತ್ರ ನಡೆಯಲಿವೆ. 24 ವರ್ಷಗಳ ನಂತರ ಆಸ್ಟ್ರೇಲಿಯಾದ ಮೊದಲ ಪಾಕಿಸ್ತಾನ ಪ್ರವಾಸ ಇದಾಗಿದೆ. ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಈ ಸುದ್ದಿ ಮುನ್ನೆಲೆಗೆ ಬಂದಿದೆ.

ಮಾರ್ಚ್ 3 ರಿಂದ ಕರಾಚಿಯಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುತ್ತವೆ. ಅದೇ ಸಮಯದಲ್ಲಿ, ಪುರುಷರ ಕ್ರಿಕೆಟ್ ವಿಶ್ವಕಪ್‌ನ ಸೂಪರ್ ಲೀಗ್‌ನ ಅಡಿಯಲ್ಲಿ ODI ಸರಣಿಯನ್ನು ಆಡಲಾಗುತ್ತದೆ. ಸೂಪರ್ ಲೀಗ್‌ನಲ್ಲಿ ಅಗ್ರ ಏಳು ಶ್ರೇಯಾಂಕಿತ ತಂಡಗಳು 2023 ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುತ್ತವೆ. ಭಾರತ ಈ ಟೂರ್ನಿಯ ಆತಿಥ್ಯ ವಹಿಸಿರುವುದರಿಂದ ನೇರ ಪ್ರವೇಶ ಪಡೆಯಲಿದೆ.

24 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ ಹೋಗಿತ್ತು 1998-99ರಲ್ಲಿ ಆಸ್ಟ್ರೇಲಿಯಾ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ, ಪೇಶಾವರದಲ್ಲಿ ಮಾರ್ಕ್ ಟೇಲರ್ ಅಜೇಯ 334 ರನ್ ಗಳಿಸಿದರು. ಇದರಿಂದಾಗಿ ಆಸ್ಟ್ರೇಲಿಯ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದು 1959-60ರ ನಂತರ ಪಾಕಿಸ್ತಾನದಲ್ಲಿ ಆಸ್ಟ್ರೇಲಿಯಾದ ಮೊದಲ ಟೆಸ್ಟ್ ಸರಣಿ ಜಯವಾಗಿದೆ. 1998 ರ ನಂತರವೂ ಪಾಕಿಸ್ತಾನವು ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಿದ್ದರೂ, ಈ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಹೊರಗೆ ನಡೆದವು. ಇದರಲ್ಲಿ ಮೂರು ಸರಣಿಗಳು ಯುಎಇಯಲ್ಲಿ ನಡೆದರೆ ಒಂದು ಸರಣಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು. 2018-19ರಲ್ಲಿ ಯುಎಇಯಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಆಡಿತ್ತು, ಇದರಲ್ಲಿ ಪಾಕಿಸ್ತಾನವು 1-0 ಅಂತರದಲ್ಲಿ ಗೆದ್ದಿತ್ತು.

ರಮೀಜ್ ರಾಜಾ ಸಂತಸ ವ್ಯಕ್ತಪಡಿಸಿದರು ಕ್ರಿಕೆಟ್ ಆಸ್ಟ್ರೇಲಿಯಾ ಪರವಾಗಿ ಸರಣಿಗೆ ಸಂಬಂಧಿಸಿದ ಹೇಳಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ, ‘ಆಸ್ಟ್ರೇಲಿಯಾವನ್ನು ಪಾಕಿಸ್ತಾನಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ವೈಯಕ್ತಿಕ ದೃಷ್ಟಿಕೋನದಿಂದ, ನಾವು ಮೂರು ಟೆಸ್ಟ್‌ಗಳ ಸರಣಿಯನ್ನು ಆಡುತ್ತೇವೆ ಎಂದು ತಿಳಿಯಲು ನನಗೆ ತುಂಬಾ ಸಂತೋಷವಾಗಿದೆ ಎಂದರು.

ಆಸ್ಟ್ರೇಲಿಯಾವು ಅತ್ಯುತ್ತಮವಾಗಿ ಆಡುವ ತಂಡಗಳಲ್ಲಿ ಒಂದಾಗಿದೆ ಮತ್ತು ಅವರು 24 ವರ್ಷಗಳ ನಂತರ ನಮ್ಮ ನೆಲಕ್ಕೆ ಬಂದು ಆಡುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಕೊಡುಗೆಯಾಗಿದೆ. ಅದೇ ರೀತಿ ಆಸ್ಟ್ರೇಲಿಯಾದ ಕ್ರಿಕೆಟಿಗರಿಗೆ ನಮ್ಮ ಪ್ರಸಿದ್ಧ ನಗರಗಳಲ್ಲಿ ಆಡಲು ಇದೊಂದು ಉತ್ತಮ ಅವಕಾಶ ಎಂದರು.

ಪ್ರವಾಸದ ಮೊದಲು, ಕ್ರಿಕೆಟ್ ಆಸ್ಟ್ರೇಲಿಯಾದ ನಿಯೋಗವು ಪಾಕಿಸ್ತಾನಕ್ಕೆ ಹೋಗಲಿದೆ ಮತ್ತು ಅಲ್ಲಿ ಮಂಡಳಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಭದ್ರತೆ, ತಂಡದ ಕಾರ್ಯಾಚರಣೆ, ಕೊರೊನಾ ಪ್ರೋಟೋಕಾಲ್ ವಿಷಯಗಳ ಬಗ್ಗೆ ಮಾತನಾಡಲಿದೆ.