ರಣಜಿ ಆಟಗಾರರಿಗೆ ವಿಶೇಷ ಯೋಜನೆ; ದೇಶೀ ಸ್ಟಾರ್ಗಳಿಗೆ ಇನ್ಮುಂದೆ ಪ್ರತಿ ತಿಂಗಳು ಸಂಬಳ
Ranji Trophy Players Get Monthly Salary: ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ರಣಜಿ ಟ್ರೋಫಿ ಆಟಗಾರರಿಗೆ ಮಾಸಿಕ ವೇತನ ನೀಡುವ ಯೋಜನೆಯನ್ನು ಘೋಷಿಸಿದೆ. 1-10 ಪಂದ್ಯಗಳನ್ನು ಆಡಿದ ಆಟಗಾರರಿಗೆ ₹10,000 ಮತ್ತು 11-24 ಪಂದ್ಯಗಳನ್ನು ಆಡಿದವರಿಗೆ ₹15,000 ಮಾಸಿಕ ವೇತನ ನೀಡಲಾಗುವುದು. ಮಹಿಳಾ ಕ್ರಿಕೆಟಿಗರು ಮತ್ತು ಮೃತ ರಣಜಿ ಆಟಗಾರರ ವಿಧವೆಯರಿಗೂ ಈ ಯೋಜನೆಯ ಲಾಭ ದೊರೆಯಲಿದೆ.
ಭಾರತೀಯ ಕ್ರಿಕೆಟ್‌ಗೆ ರಣಜಿ ಟ್ರೋಫಿ ಮಹತ್ವದ ಕೊಡುಗೆ ನೀಡಿದೆ. ಬಿಸಿಸಿಐ ಕೂಡ ಈ ದೇಶಿಯ ಟೂರ್ನಿಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಆದ್ಯತೆ ನೀಡುತ್ತದೆ. ಈ ದಿನಗಳಲ್ಲಿ ರಣಜಿ ಟ್ರೋಫಿಯ ಆರನೇ ಸುತ್ತು ನಡೆಯುತ್ತಿದ್ದು, ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರವೀಂದ್ರ ಜಡೇಜಾ, ರಿಷಬ್ ಪಂತ್ ಕೂಡ ರಣಜಿ ಪಂದ್ಯಗಳನ್ನು ಆಡುತ್ತಿದ್ದಾರೆ. ರಣಜಿ ಆಡುವ ಆಟಗಾರರಿಗೆ ಪಂದ್ಯದ ದಿನದ ಆಧಾರದ ಮೇಲೆ ವೇತನ ನೀಡಲಾಗುತ್ತದೆ. ಆದರೆ ಇದೀಗ ರಣಜಿ ಆಡುವ ಆಟಗಾರರಿಗೆ ಪ್ರತಿ ತಿಂಗಳು ವೇತನ ನೀಡುವುದಾಗಿ ಕ್ರಿಕೆಟ್ ಸಂಸ್ಥೆ ಘೋಷಿಸಿದೆ. ಇದರಲ್ಲಿ ಮಹಿಳಾ ಕ್ರಿಕೆಟಿಗರು ಮತ್ತು ಪುರುಷ ಆಟಗಾರರೂ ಸೇರಿದ್ದು, ಇದರ ಜೊತೆಗೆ ಸಾವನ್ನಪ್ಪಿದ ರಣಜಿ ಕ್ರಿಕೆಟಿಗನ ಪತ್ನಿಗೂ ಪ್ರತಿ ತಿಂಗಳು ವೇತನ ನೀಡಲಾಗುವುದು.
ಪ್ರತಿ ತಿಂಗಳು ವೇತನ
ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪ್ರಣಬ್ ಅಮೀನ್ ಮತ್ತು ಉನ್ನತ ಸಮಿತಿಯ ನೇತೃತ್ವದಲ್ಲಿ, ರಣಜಿ ಆಟಗಾರರನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬರೋಡಾ ಕ್ರಿಕೆಟ್ ಸಂಸ್ಥೆ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಮೂಲಕ ಈಗ 1 ರಿಂದ10 ರಣಜಿ ಪಂದ್ಯಗಳನ್ನು ಆಡಿರುವ ಆಟಗಾರರಿಗೆ ಪ್ರತಿ ತಿಂಗಳು 10,000 ರೂ. ಮತ್ತು 11 ರಿಂದ 24 ಪಂದ್ಯಗಳನ್ನು ಆಡಿರುವ ಆಟಗಾರರಿಗೆ ಪ್ರತಿ ತಿಂಗಳು 15,000 ರೂ. ವೇತನ ನೀಡಲು ನಿರ್ಧರಿಸಲಾಗಿದೆ.
ಬರೋಡಾ ಕ್ರಿಕೆಟ್ ಸಂಸ್ಥೆಯ ಈ ಯೋಜನೆಯನ್ನು ಮಹಿಳಾ ಕ್ರಿಕೆಟಿಗರು ಸಹ ಸ್ವಾಗತಿಸಿದ್ದು, ಇದಲ್ಲದೇ ಮರಣ ಹೊಂದಿದ ರಣಜಿ ಕ್ರಿಕೆಟಿಗರ ವಿಧವಾ ಪತ್ನಿಯರಿಗೂ ಇದರ ಲಾಭ ಸಿಗಲಿದೆ. ಇದರಲ್ಲಿ ಮಹಿಳಾ ಕ್ರಿಕೆಟಿಗರು ಮತ್ತು ಬಿಸಿಸಿಐ ಯೋಜನೆಯಡಿ ಒಳಪಡದ ಮೃತ ಪುರುಷ ಆಟಗಾರರ ಪತ್ನಿಯರಿಗೆ ವೇತನ ನೀಡಲಾಗುತ್ತದೆ.
Baroda Cricket Association's new scheme:
– 10,000 monthly for players with 1-10 Ranji games and 15,000 monthly for players with 11-24 matches.
A beautiful initiative by BCA. 👌❤️ pic.twitter.com/Dn7Yd1hjRx
— Mufaddal Vohra (@mufaddal_vohra) January 25, 2025
ರಣಜಿ ಆಟಗಾರರ ವೇತನ ಮಾದರಿ
ಬಿಸಿಸಿಐ ಅಂತರಾಷ್ಟ್ರೀಯ ಪಂದ್ಯಗಳಿಗೆ ಟೀಂ ಇಂಡಿಯಾದ ಆಟಗಾರರಿಗೆ ಪಂದ್ಯ ಶುಲ್ಕ ಪಾವತಿಸುವುದಲ್ಲದೆ ಆಟಗಾರರು ವಾರ್ಷಿಕ ಒಪ್ಪಂದದ ಮೂಲಕ ಕೋಟ್ಯಂತರ ರೂಪಾಯಿ ಪಡೆಯುತ್ತಾರೆ. ಆದರೆ ರಣಜಿ ಆಟಗಾರರು ಪಂದ್ಯಗಳನ್ನು ಆಡಿದರೆ ಮಾತ್ರ ವೇತನ ಪಡೆಯುತ್ತಾರೆ. ನಾಕ್ ಔಟ್ ಪಂದ್ಯಗಳನ್ನು ಹೊರತುಪಡಿಸಿ ರಣಜಿ ಪಂದ್ಯಗಳು ನಾಲ್ಕು ದಿನಗಳ ಕಾಲ ನಡೆಯುತ್ತವೆ.
ಆ ಪ್ರಕಾರ 41ಕ್ಕಿಂತ ಹೆಚ್ಚು ಪಂದ್ಯ ಆಡಿರುವ ಆಟಗಾರರಿಗೆ ದಿನಕ್ಕೆ 60 ಸಾವಿರ ವೇತನ, 21 ರಿಂದ 40 ಪಂದ್ಯ ಆಡಿರುವ ಆಟಗಾರರಿಗೆ ದಿನಕ್ಕೆ 50 ಸಾವಿರ ಹಾಗೂ 0-20 ಪಂದ್ಯ ಆಡಿರುವ ಆಟಗಾರರಿಗೆ ದಿನಕ್ಕೆ 40 ಸಾವಿರ ರೂ. ವೇತನ ನೀಡಲಾಗುತ್ತದೆ. ಆದರೆ ಈಗ ಬಿಸಿಎ ಪಂದ್ಯ ಶುಲ್ಕದ ಜೊತೆಗೆ ತನ್ನ ಆಟಗಾರರಿಗೆ ಪ್ರತಿ ತಿಂಗಳು ವೇತನ ನೀಡಲು ವ್ಯವಸ್ಥೆ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ