ಟೀಮ್ ಇಂಡಿಯಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ

Team India: ಭಾರತ ತಂಡವು ಜೂನ್ 20 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಿದ್ದಾರೆ. ಇದಾದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ವಿರುದ್ಧದ ತವರಿನಲ್ಲಿ ಸರಣಿಗಳನ್ನು ಆಡಬೇಕಿದೆ. ಈ ಸರಣಿಗಳ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಟೀಮ್ ಇಂಡಿಯಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ
Team India

Updated on: Jun 09, 2025 | 1:29 PM

ಭಾರತ ತಂಡದ ತವರಿನ ಸರಣಿಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಂತೆ ಅಕ್ಟೋಬರ್ 2, 2025 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಪ್ರಾರಂಭವಾಗುವ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಕೋಲ್ಕತ್ತಾದ ಬದಲಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹಾಗೆಯೇ ನವೆಂಬರ್ 14 ರಿಂದ ಸೌತ್ ಆಫ್ರಿಕಾ ವಿರುದ್ಧ ಪ್ರಾರಂಭವಾಗುವ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ದೆಹಲಿಯ ಬದಲಿಗೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಚೆನ್ನೈನಿಂದ ಏಕದಿನ ಪಂದ್ಯ ಎತ್ತಂಗಡಿ:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ಸರಣಿಯ ಪಂದ್ಯಗಳು ಚೆನ್ನೈನಲ್ಲಿ ನಡೆಯುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೆ ಈ ಸರಣಿಯ ಎರಡು ಪಂದ್ಯಗಳಿಗೆ ಚಂಡೀಗಢದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಆತಿಥ್ಯವಹಿಸಲಿದ್ದು, ಕೊನೆಯ ಏಕದಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಸ್ಥಳಾಂತರಗೊಳಿಸಲು ಮುಖ್ಯ ಕಾರಣ ಚೆಪಾಕ್​ನಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳು. ಅಂದರೆ ಚೆಪಾಕ್ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿಗಳು ನಡೆಯುತ್ತಿದ್ದು, ಹೀಗಾಗಿ ಮಹಿಳಾ ಏಕದಿನ ಪಂದ್ಯಗಳನ್ನು ಚೆನ್ನೈನಿಂದ ಚಂಡಿಗಢಕ್ಕೆ ಸ್ಥಳಾಂತರಿಸಲಾಗಿದೆ.

ಭಾರತ ತಂಡದ ಮುಂಬರುವ ವೇಳಾಪಟ್ಟಿ:

ಭಾರತ vs ವೆಸ್ಟ್ ಇಂಡೀಸ್ ಸರಣಿ
   ದಿನ ಮತ್ತು ದಿನಾಂಕ  ದಿನ ಮತ್ತು ದಿನಾಂಕ ಪಂದ್ಯ ಸಮಯ ಸ್ಥಳ
1 ಗುರುವಾರ ಅಕ್ಟೋಬರ್ 02, 25 ಸೋಮ ಅಕ್ಟೋಬರ್ 06, 25 ಮೊದಲ ಟೆಸ್ಟ್ ಬೆಳಗ್ಗೆ 9:30 ಅಹಮದಾಬಾದ್
2 ಶುಕ್ರವಾರ ಅಕ್ಟೋಬರ್ 10 – 25 ಮಂಗಳ ಅಕ್ಟೋಬರ್ 14 – 25 ಎರಡನೇ ಟೆಸ್ಟ್ ಬೆಳಗ್ಗೆ 9:30 ನವ ದೆಹಲಿ

ಇದನ್ನೂ ಓದಿ: ರೋಹಿತ್ ಶರ್ಮಾ ಬದಲಿಗೆ ಯಾರು? ವಿರಾಟ್ ಕೊಹ್ಲಿ ಸ್ಥಾನ ಸಿಗೋದು ಯಾರಿಗೆ?

ಭಾರತ  vs ಸೌತ್ ಆಫ್ರಿಕಾ ಸರಣಿ
  ದಿನ ಮತ್ತು ದಿನಾಂಕ ದಿನ ಮತ್ತು ದಿನಾಂಕ ಪಂದ್ಯ ಸಮಯ ಸ್ಥಳ
1 ಶುಕ್ರವಾರ ನವೆಂಬರ್ 14, 25 ಮಂಗಳ ನವೆಂಬರ್ 18, 25  ಮೊದಲ ಟೆಸ್ಟ್ ಪಂದ್ಯ ಬೆಳಗ್ಗೆ 9:30 ಕೋಲ್ಕತ್ತಾ
2 ಶನಿವಾರ ನವೆಂಬರ್ 22, 25 ಬುಧ 26-ನವೆಂಬರ್-25 ಎರಡನೇ ಟೆಸ್ಟ್ ಪಂದ್ಯ ಬೆಳಗ್ಗೆ 9:30 ಗುವಾಹಟಿ
3 ಭಾನುವಾರ ನವೆಂಬರ್ 30, 25 1ನೇ  ಏಕದಿನ ಪಂದ್ಯ ಮಧ್ಯಾಹ್ನ 1:30 ರಾಂಚಿ
4 ಬುಧವಾರ ಡಿಸೆಂಬರ್ 03-25 2ನೇ ಏಕದಿನ  ಪಂದ್ಯ ಮಧ್ಯಾಹ್ನ 1:30 ರಾಯ್‌ಪುರ
5 ಶನಿವಾರ ಡಿಸೆಂಬರ್ 06-25 3ನೇ  ಏಕದಿನ ಪಂದ್ಯ ಮಧ್ಯಾಹ್ನ 1:30 ವೈಜಾಗ್
6 ಮಂಗಳವಾರ ಡಿಸೆಂಬರ್ 09-25 1ನೇ  ಟಿ20 ಪಂದ್ಯ ಸಂಜೆ 7:00 ಕ್ಕೆ ಕಟಕ್
7 ಗುರುವಾರ ಡಿಸೆಂಬರ್ 11-25 2ನೇ  ಟಿ20 ಪಂದ್ಯ ಸಂಜೆ 7:00 ಕ್ಕೆ  ಚಂಡೀಗಢ
8 ಭಾನುವಾರ ಡಿಸೆಂಬರ್ 14-25 3ನೇ  ಟಿ20 ಪಂದ್ಯ ಸಂಜೆ 7:00 ಕ್ಕೆ ಧರ್ಮಶಾಲಾ
9 ಬುಧವಾರ ಡಿಸೆಂಬರ್ 17-25 4ನೇ  ಟಿ20 ಪಂದ್ಯ ಸಂಜೆ 7:00 ಕ್ಕೆ ಲಕ್ನೋ
10 ಶುಕ್ರವಾರ ಡಿಸೆಂಬರ್ 19-25 5ನೇ  ಟಿ20 ಪಂದ್ಯ ಸಂಜೆ 7:00 ಕ್ಕೆ ಅಹಮದಾಬಾದ್

 

 

Published On - 1:27 pm, Mon, 9 June 25