BCCI Awards 2024: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

BCCI Awards 2024: ಭಾರತೀಯ ಕ್ರಿಕೆಟ್ ಮಂಡಳಿ ಕಳೆದ ಮೂರು ವರ್ಷಗಳಲ್ಲಿ ದೇಶೀಯ ಹಾಗೂ ರಾಷ್ಟ್ರೀಯ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡಿದೆ. ಹಾಗೆಯೇ ಭಾರತ ತಂಡದ ಇಬ್ಬರು ಮಾಜಿ ಆಟಗಾರರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

BCCI Awards 2024: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ
Team India Players
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 24, 2024 | 8:06 AM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವರ್ಷದ ಪ್ರಶಸ್ತಿ ಪ್ರಧಾನ ಮಾಡಿದೆ. ಹೈದರಾಬಾದ್​ನಲ್ಲಿ ನಡೆದ ಈ ಸಮಾರಂಭದಲ್ಲಿ ಟೀಮ್ ಇಂಡಿಯಾ (Team India) ಆಟಗಾರರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಭಾರತೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮಾಜಿ ಆಟಗಾರ ಕೋಚ್‌ ರವಿ ಶಾಸ್ತ್ರಿ ಹಾಗೂ ಫಾರೂಖ್ ಇಂಜಿನಿಯರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಜೊತೆಗೆ ಟೀಮ್ ಇಂಡಿಯಾ ಆಟಗಾರರಾದ ಶುಭಮನ್ ಗಿಲ್‌, ಮೊಹಮ್ಮದ್ ಶಮಿ ಸೇರಿದಂತೆ ಹಲವರು ಬಿಸಿಸಿಐ ಪ್ರಶಸ್ತಿಯನ್ನು ಪಡೆದರು. ಆ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

  • ಜಗಮೋಹನ್ ದಾಲ್ಮಿಯಾ ಟ್ರೋಫಿ ಅತ್ಯುತ್ತಮ ಮಹಿಳಾ ಜೂನಿಯರ್ ಆಟಗಾರ್ತಿ (ದೇಶೀಯ-ಜೂನಿಯರ್): ಕಾಶ್ವೀ ಗೌತಮ್ (2019-20), ಸೌಮ್ಯ ತಿವಾರಿ (2021-22) ಮತ್ತು ವೈಷ್ಣವಿ ಶರ್ಮಾ (2022-23)
  • ಜಗಮೋಹನ್ ದಾಲ್ಮಿಯಾ ಟ್ರೋಫಿ ಅತ್ಯುತ್ತಮ ಮಹಿಳಾ ಆಟಗಾರ್ತಿ (ಸೀನಿಯರ್): ಸಾಯಿ ಪುರಂದರೆ (2019-20), ಇಂದ್ರಾಣಿ ರಾಯ್ (2020-21), ಕನಿಕಾ ಅಹುಜಾ (2021-22), ನಬಮ್ ಯಾಪು (2022-23)
  • ಜಗಮೋಹನ್ ದಾಲ್ಮಿಯಾ ಟ್ರೋಫಿ ಅತ್ಯಧಿಕ ವಿಕೆಟ್ ಟೇಕರ್ U16, ವಿಜಯ್ ಮರ್ಚೆಂಟ್ ಪ್ರಶಸ್ತಿ: ನಿರ್ದೇಶ್ ಬೈಸೋಯಾ (2019-20) ಮತ್ತು ಅನ್ಮೋಲ್ಜೀತ್ ಸಿಂಗ್ (2022-23)
  • ಜಗಮೋಹನ್ ದಾಲ್ಮಿಯಾ ಟ್ರೋಫಿ ಅತಿ ಹೆಚ್ಚು ರನ್ ಗಳಿಸಿದ U16, ವಿಜಯ್ ಮರ್ಚೆಂಟ್ ಪ್ರಶಸ್ತಿ: ಉದಯ್ ಸಹಾರನ್ (2019-20) ಮತ್ತು ವಿಹಾನ್ ಮಲ್ಹೋತ್ರಾ (2022-23)
  • ಅತಿ ಹೆಚ್ಚು ವಿಕೆಟ್ ಪಡೆದವರು (ಕರ್ನಲ್ ಸಿಕೆ ನಾಯುಡು ಟ್ರೋಫಿ): ಅಂಕುಶ್ ತ್ಯಾಗಿ (2019-20), ಹರ್ಷ್ ದುಬೆ (2021-22) ಮತ್ತು ವಿಶಾಲ್ ಜೈಸ್ವಾಲ್ (2022-23)

ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ – ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ:

  • 2019-20ರಲ್ಲಿ ಅರುಣಾಚಲ ಪ್ರದೇಶದಿಂದ ರಾಹುಲ್ ದಲಾಲ್.
  • 2021-22ರಲ್ಲಿ ಮುಂಬೈನಿಂದ ಸರ್ಫರಾಝ್​ ಖಾನ್
  • 2022-2023ರಲ್ಲಿ ಕರ್ನಾಟಕದಿಂದ ಮಯಾಂಕ್ ಅಗರ್ವಾಲ್

ಲಾಲಾ ಅಮರನಾಥ್ ಅತ್ಯುತ್ತಮ ಆಲ್ ರೌಂಡರ್ ಡೊಮೆಸ್ಟಿಕ್ ಲಿಮಿಟೆಡ್ ಓವರ್:

  • ಬಾಬರ್ ಅಪರಾಜಿತ್ (2019-20)
  • ರಿಷಿ ಧವನ್ (2020-21)
  • ರಿಯಾನ್ ಪರಾಗ್ (2022-23)

ಲಾಲಾ ಅಮರನಾಥ್ ಅತ್ಯುತ್ತಮ ಆಲ್ ರೌಂಡರ್ ರಣಜಿ ಟ್ರೋಫಿ:

  • ಎಂಬಿ ಮುರಾಸಿಘ್ (2019-20)
  • ಶಮ್ಸ್ ಮುಲಾನಿ (2021-22)
  • ಸರನ್ಶ್ ಜೈನ್ (2022-23)

ಅತ್ಯುತ್ತಮ ಅಂಪೈರ್ ದೇಶೀಯ ಕ್ರಿಕೆಟ್

  • 2019-20ರಲ್ಲಿ ಕೆಎನ್ ಅನಂತಪದ್ಮನಾಭನ್
  • 2020-21ರಲ್ಲಿ ವೃಂದಾ ರಾಠಿ
  • 2021-22ರಲ್ಲಿ ಜಯರಾಮನ್ ಮದನ್ ಗೋಪಾಲ್
  • 2022-23ರಲ್ಲಿ ರೋಹನ್ ಪಂಡಿತ್

ಮಹಿಳಾ ಏಕದಿನ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ:

  • ಪೂನಂ ಯಾದವ್ (2019-20)
  • ಜೂಲನ್ ಗೋಸ್ವಾಮಿ (2020-21)
  • ರಾಜೇಶ್ವರಿ ಗಾಯಕ್‌ವಾಡ್ (2021-22)
  • ದೇವಿಕಾ ವೈದ್ಯ (2022-23)

ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ:

  • ಪೂನಮ್ ರಾವುತ್ (2019-20)
  • ಮಿಥಾಲಿ ರಾಜ್ (2020-21)
  • ಹರ್ಮನ್‌ಪ್ರೀತ್ ಕೌರ್ (2021-22)
  • ಜೆಮಿಮಾ ರೋಡ್ರಿಗಸ್ (2022-23)
  • ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ಬೌಲರ್​​ ಪ್ರಶಸ್ತಿ: ರವಿಚಂದ್ರನ್ ಅಶ್ವಿನ್ (2022-23)
  • ಅತಿ ಹೆಚ್ಚು ಟೆಸ್ಟ್​ ರನ್ ಕಲೆಹಾಕಿದ ಬ್ಯಾಟರ್ ಪ್ರಶಸ್ತಿ: ಯಶಸ್ವಿ ಜೈಸ್ವಾಲ್ (2022-23)

ಮಹಿಳಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯುತ್ತಮ ಆಟಗಾರ್ತಿಯರು:

  • ಪ್ರಿಯಾ ಪೂನಿಯಾ (2019-20)
  • ಎಸ್ ಮೇಘನಾ (2021-22)
  • ಅಮನ್ಜೋತ್ ಕೌರ್ (2022-23)

ಪುರುಷ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯುತ್ತಮ ಆಟಗಾರರು:

  • ಮಯಾಂಕ್ ಅಗರ್ವಾಲ್ (2019-20)
  • ಅಕ್ಷರ್ ಪಟೇಲ್ (2020-21)
  • ಶ್ರೇಯಸ್ ಅಯ್ಯರ್ (2021-22)
  • ಯಶಸ್ವಿ ಜೈಸ್ವಾಲ್ (2022-23)

ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರ್ತಿ:

  • ದೀಪ್ತಿ ಶರ್ಮಾ (2019-20)
  • ಸ್ಮೃತಿ ಮಂಧಾನ (2020-22)
  • ದೀಪ್ತಿ ಶರ್ಮಾ (2022-2023)

ಇದನ್ನೂ ಓದಿ: Josh Brown: ಜೋಶ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

  • 2019-20ರ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ-ಪಾಲಿ ಉಮ್ರಿಗರ್ ಪ್ರಶಸ್ತಿ: ಮೊಹಮ್ಮದ್ ಶಮಿ
  • 2020-21ರ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ- ಪಾಲಿ ಉಮ್ರಿಗರ್ ಪ್ರಶಸ್ತಿ: ರವಿಚಂದ್ರನ್ ಅಶ್ವಿನ್
  • 2021-22ರ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ- ಪಾಲಿ ಉಮ್ರಿಗರ್ ಪ್ರಶಸ್ತಿ: ಜಸ್​ಪ್ರೀತ್ ಬುಮ್ರಾ
  • 2022-23ರ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ- ಪಾಲಿ ಉಮ್ರಿಗರ್ ಪ್ರಶಸ್ತಿ: ಶುಭ್​ಮನ್ ಗಿಲ್.
  • ಕರ್ನಲ್ ಸಿ.ಕೆ.ನಾಯುಡು ಜೀವಮಾನ ಸಾಧನೆ ಪ್ರಶಸ್ತಿ: ಫಾರೂಖ್ ಇಂಜಿನಿಯರ್ ಮತ್ತು ರವಿಶಾಸ್ತ್ರಿ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ