AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI Chief Selector: ವೇತನ ಹೆಚ್ಚಿಸುವ ಭರವಸೆ; ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಆಯ್ಕೆ ಖಚಿತ

BCCI Chief Selector: ಆಯ್ಕೆ ಸಮಿತಿ ಅಧ್ಯಕ್ಷರಾಗಿ ಟೀಂ ಇಂಡಿಯಾದ ಮಾಜಿ ವೇಗಿ ಅಜಿತ್ ಅಗರ್ಕರ್ ಆಯ್ಕೆಯಾಗುವುದು ಖಚಿತ ಎಂದು ವರದಿಯಾಗಿದೆ.

BCCI Chief Selector: ವೇತನ ಹೆಚ್ಚಿಸುವ ಭರವಸೆ; ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ಆಯ್ಕೆ ಖಚಿತ
ಅಜಿತ್ ಅಗರ್ಕರ್
ಪೃಥ್ವಿಶಂಕರ
|

Updated on: Jul 01, 2023 | 10:52 AM

Share

ಕಳೆದ ಫೆಬ್ರವರಿಯಲ್ಲಿ ಚೇತನ್ ಶರ್ಮಾ ಟೀಂ ಇಂಡಿಯಾದ ಆಯ್ಕೆ ಸಮಿತಿ ಅಧ್ಯಕ್ಷ (BCCI Chief Selector) ಸ್ಥಾನದಿಂದ ಕೆಳಗಿಳಿದ ಬಳಿಕ ತೆರವಾಗಿದ್ದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಟೀಂ ಇಂಡಿಯಾದ (Team India) ಮಾಜಿ ವೇಗಿ ಅಜಿತ್ ಅಗರ್ಕರ್ (Ajit Agarkar) ಆಯ್ಕೆಯಾಗುವುದು ಖಚಿತ ಎಂದು ವರದಿಯಾಗಿದೆ. ಪ್ರಸ್ತುತ ಆಯ್ಕೆ ಸಮಿತಿ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಇಷ್ಟರಲ್ಲೇ ಅರ್ಗಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಈ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಮಾಡಲ್ಲಿರುವ ಟೀಂ ಇಂಡಿಯಾ ನಂತರ ಐರ್ಲೆಂಡ್ ಪ್ರವಾಸ, ಏಷ್ಯಾಕಪ್ (Asia Cup) ಮತ್ತು ವಿಶ್ವಕಪ್ (World Cup 2023) ಆಡಲಿದೆ. ಹಾಗಾಗಿ ಈ ಬಾರಿಯ ಏಷ್ಯಾಕಪ್ ಟೂರ್ನಿಗೂ ಮುನ್ನ ಖಾಲಿ ಇರುವ ಆಯ್ಕೆ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆಯ್ಕೆ ಸಮಿತಿ ಅಧ್ಯಕ್ಷರಾಗುವಂತೆ ಬಿಸಿಸಿಐ, ಅಜಿತ್ ಅಗರ್ಕರ್ ಅವರನ್ನು ಸಂಪರ್ಕಿಸಿದ್ದು, ವೇತನ ಹೆಚ್ಚಳದ ಭರವಸೆಯನ್ನು ನೀಡಿದೆ ಎಂದು ವರದಿಯಾಗಿದೆ. ಹೀಗಾಗಿ ಬಿಸಿಸಿಐ ಭರವಸೆಯ ನಂತರ, ಅಗರ್ಕರ್ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಹಿಂದೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತದ್ದ ಅಗರ್ಕರ್ ಇತ್ತೀಚೆಗೆ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅಗರ್ಕರ್ ಆಯ್ಕೆ ಸಮಿತಿ ಅಧ್ಯಕ್ಷರಾಗುವುದು ಖಚಿತ ಎಂದು ವರದಿ ಹೇಳಿದೆ.

World Cup 2023 schedule: ‘ನಮಗೆ ಅನ್ಯಾಯವಾಗಿದೆ’; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ

ಎರಡನೇ ಬಾರಿಗೆ ಯತ್ನ

ಅಜಿತ್ ಅಗರ್ಕರ್ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವುದು ಇದು ಎರಡನೇ ಬಾರಿ. ಅಗರ್ಕರ್ ಈ ಹಿಂದೆ 2020 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಂದು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಅಗರ್ಕರ್ ವಿಫಲರಾಗಿದ್ದರು.

ಆಯ್ಕೆ ಸಮಿತಿಯ ಸದಸ್ಯರ ಸಂಬಳ ಎಷ್ಟು?

ಸದ್ಯಕ್ಕೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರು ವಾರ್ಷಿಕ 90 ಲಕ್ಷ ವೇತನ ಪಡೆದರೆ, ಮುಖ್ಯ ಆಯ್ಕೆದಾರರು 1 ಕೋಟಿ ವೇತನ ಪಡೆಯುತ್ತಾರೆ. ಹೀಗಾಗಿ ವೇತನ ಕಡಿಮೆ ಎಂಬ ಕಾರಣದಿಂದಾಗಿ ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು ಈ ಹುದ್ದೆಗೆ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದರು.

ಬಿಸಿಸಿಐನಿಂದ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

ಇದೇ ವೇಳೆ ಆಯ್ಕೆ ಸಮಿತಿಗೆ ನೀಡಿರುವ ವೇತನವನ್ನು ಪರಿಶೀಲಿಸಲು ಬಿಸಿಸಿಐ ನಿರ್ಧರಿಸಿದೆ. ಕಾರಣ ಒಂದೇ. ಹಲವು ಅನುಭವಿ ಆಟಗಾರರು ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಲ್ಲ. ಹೀಗಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಪ್ರಸ್ತುತ, ಬಿಸಿಸಿಐ ಆಯ್ಕೆ ಸಮಿತಿಯು ಸುಬ್ರೊಟೊ ಬ್ಯಾನರ್ಜಿ, ಸಲಿಲ್ ಅಂಕೋಲಾ, ಶ್ರೀಧರನ್ ಶರತ್ ಮತ್ತು ಶಿವಸುಂದರ್ ದಾಸ್ ಅವರನ್ನು ಒಳಗೊಂಡಿದೆ.

ವೃತ್ತಿ ಜೀವನದಲ್ಲಿ ಸುವರ್ಣ ಕ್ಷಣ

ಅಜಿತ್ ಅಗರ್ಕರ್ ವೇಗದ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ದಾಖಲೆ ನಿರ್ಮಿಸಿದ್ದಾರೆ. 2000ರಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಪರ ಅಜಿತ್ ಅಗರ್ಕರ್ 21 ಎಸೆತಗಳಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ್ದರು. ಅಗರ್ಕರ್ ಅವರ ಈ ದಾಖಲೆ 23 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ. ಇಷ್ಟೇ ಅಲ್ಲ ಅಗರ್ಕರ್ ಲಾರ್ಡ್ಸ್ ನಲ್ಲಿ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.

ಅಜಿತ್ ಅಗರ್ಕರ್ ಅವರ ಕ್ರಿಕೆಟ್ ವೃತ್ತಿಜೀವನ

ಅಜಿತ್ ಅಗರ್ಕರ್ ಟೀಂ ಇಂಡಿಯಾ ಪರ 191 ಏಕದಿನ, 26 ಟೆಸ್ಟ್ ಮತ್ತು 4 ಟಿ20 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಕ್ರಮವಾಗಿ 58, 288 ಮತ್ತು 3 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಅಗರ್ಕರ್ ಏಕದಿನದಲ್ಲಿ 3 ಅರ್ಧಶತಕಗಳೊಂದಿಗೆ 1269 ರನ್, ಟೆಸ್ಟ್​ನಲ್ಲಿ 1 ಶತಕ ಮತ್ತು 15 ಅರ್ಧಶತಕದೊಂದಿಗೆ 571 ರನ್ ಬಾರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ