T20 World Cup: ಬಲಿಷ್ಠ ತಂಡಗಳೆದುರು ಎರಡು ಅಭ್ಯಾಸ ಪಂದ್ಯ ಆಡಲಿದೆ ಭಾರತ! ವೇಳಾಪಟ್ಟಿ ಹೀಗಿದೆ

T20 World Cup: ಈ ಬಾರಿ ಭಾರತವು ಅಕ್ಟೋಬರ್ 18 ರಂದು ದುಬೈನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ನಂತರ ಅಕ್ಟೋಬರ್ 20 ರಂದು ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ.

T20 World Cup: ಬಲಿಷ್ಠ ತಂಡಗಳೆದುರು ಎರಡು ಅಭ್ಯಾಸ ಪಂದ್ಯ ಆಡಲಿದೆ ಭಾರತ! ವೇಳಾಪಟ್ಟಿ ಹೀಗಿದೆ
ಟೀಂ ಇಂಡಿಯಾ

ಐಸಿಸಿ ಟಿ 20 ವಿಶ್ವಕಪ್ 2021 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿದ ತಕ್ಷಣ, ಸೂಪರ್ 12 ತಂಡಗಳು ಹೋರಾಡಲು ಪ್ರಾರಂಭಿಸುತ್ತವೆ. ಟೀಮ್ ಇಂಡಿಯಾ ಕೂಡ ಸೂಪರ್ -12 ಹಂತದಿಂದ ಸ್ಪರ್ಧೆಯನ್ನು ಆರಂಭಿಸಲಿದೆ. ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಏತನ್ಮಧ್ಯೆ, ಭಾರತ ತಂಡವು ಈ ಪಂದ್ಯದ ಮೊದಲು ಅಭ್ಯಾಸದಲ್ಲಿ ಎರಡು ತಂಡಗಳನ್ನು ಎದುರಿಸಲಿದೆ.

ಎರಡು ತಂಡಗಳು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್. ಕೆಲವು ದಿನಗಳ ಹಿಂದೆ, ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಆಡಲಾಗುವುದು ಎಂದು ವರದಿಯಾಗಿತ್ತು. ಆದರೆ ಈಗ, ಹೊಸ ಐಸಿಸಿ ವೇಳಾಪಟ್ಟಿಯ ಪ್ರಕಾರ, ಭಾರತದ ಪಂದ್ಯಗಳು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನೊಂದಿಗೆ ನಡೆಯಲಿದೆ. ಭಾರತವು ಎರಡೂ ತಂಡಗಳೊಂದಿಗೆ ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಪಂದ್ಯಾವಳಿಗೆ ತಯಾರಿ ನಡೆಸಲಿದೆ.

ಅಕ್ಟೋಬರ್ 18 ಮತ್ತು 20 ರಂದು ಪಂದ್ಯಗಳು
ಐಪಿಎಲ್ 2021 ರ ಫೈನಲ್ ನಡೆದ 3 ದಿನಗಳ ನಂತರ, ಭಾರತ ತಂಡವು ವಿಶ್ವಕಪ್‌ಗೆ ಮುನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಬಾರಿ ಭಾರತವು ಅಕ್ಟೋಬರ್ 18 ರಂದು ದುಬೈನಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ನಂತರ ಅಕ್ಟೋಬರ್ 20 ರಂದು ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ.

3 ಮೈದಾನಗಳಲ್ಲಿ 31 ಪಂದ್ಯಗಳು
ಮೇ 4, 2021 ರಂದು ಭಾರತದಲ್ಲಿ ಆರಂಭವಾದ ಐಪಿಎಲ್ ಅನ್ನು ಕೊರೊನಾ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಳಿಸಲಾಯಿತು. ಈಗ, ಅದೇ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಿದೆ. ಈ ವರ್ಷದ ಐಪಿಎಲ್‌ನಲ್ಲಿ 60 ಪಂದ್ಯಗಳಿದ್ದು, ಇದುವರೆಗೆ 29 ಪಂದ್ಯಗಳನ್ನು ಆಡಲಾಗಿದೆ. ಹಾಗಾಗಿ ಉಳಿದ 31 ಪಂದ್ಯಗಳು ಈಗ ಯುಎಇಯಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯುವುದರಿಂದ, ಪಿಚ್ ನಿಧಾನವಾಗುವುದರಿಂದ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

ಟಿ 20 ವಿಶ್ವಕಪ್‌ಗೆ ಭಾರತ ತಂಡ
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಕಾಯ್ದಿರಿಸಲಾಗಿರುವ ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹರ್

ಭಾರತದ ವಿಶ್ವಕಪ್ ಪಂದ್ಯಗಳು
ಭಾರತ ಮತ್ತು ಪಾಕಿಸ್ತಾನದ ಜೊತೆಗೆ, ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ಕೂಡ ಗುಂಪು -2 ರಲ್ಲಿವೆ. ಅಲ್ಲದೆ, ಗುಂಪು ಹಂತದಿಂದ ಅರ್ಹತೆ ಪಡೆದ ಎರಡು ತಂಡಗಳು ಒಂದೇ ಗುಂಪಿನಲ್ಲಿರುತ್ತವೆ ಮತ್ತು ಇವೆಲ್ಲವುಗಳ ಪಂದ್ಯವು ಅಕ್ಟೋಬರ್ 24 ರಿಂದ ಆರಂಭವಾಗುತ್ತದೆ. ಏತನ್ಮಧ್ಯೆ, ಭಾರತದ ಗುಂಪು ಪಂದ್ಯಗಳು ಹೀಗಿವೆ:

ಭಾರತ vs ಪಾಕಿಸ್ತಾನ (ಅಕ್ಟೋಬರ್ 24)
ಭಾರತ vs ನ್ಯೂಜಿಲ್ಯಾಂಡ್ (ಅಕ್ಟೋಬರ್ 31)
ಭಾರತ vs ಅಫ್ಘಾನಿಸ್ತಾನ (ನವೆಂಬರ್ 3)
ಭಾರತ vs ಗುಂಪು ಹಂತ ಅರ್ಹ ತಂಡ 1 (ನವೆಂಬರ್ 5)
ಭಾರತ vs ಗುಂಪು ಹಂತ ಅರ್ಹ ತಂಡ 2 (ನವೆಂಬರ್ 8)

ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಸ್ ಇವರೇ..!

Read Full Article

Click on your DTH Provider to Add TV9 Kannada