ಆಸ್ಟ್ರೇಲಿಯಾದಿಂದ ಟೀಂ ಇಂಡಿಯಾದ 8 ಆಟಗಾರರು ತವರಿಗೆ ವಾಪಸ್

Border-Gavaskar Trophy: ಆಸ್ಟ್ರೇಲಿಯಾ ಎ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಸರಣಿಯನ್ನು ಆಡಿದ್ದ ಭಾರತ ಎ ತಂಡದ 8 ಆಟಗಾರರು ಭಾರತಕ್ಕೆ ಮರಳುತ್ತಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಉಳಿದ ಆಟಗಾರರು ಪರ್ತ್‌ನಲ್ಲಿ ತರಬೇತಿಯನ್ನು ಮುಂದುವರಿಸುತ್ತಾರೆ. ಈ ಸರಣಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ನಿರ್ಣಾಯಕವಾಗಿದೆ. ಹೀಗಾಗಿ ಈ ಸರಣಿಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತವಿದೆ.

ಆಸ್ಟ್ರೇಲಿಯಾದಿಂದ ಟೀಂ ಇಂಡಿಯಾದ 8 ಆಟಗಾರರು ತವರಿಗೆ ವಾಪಸ್
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Nov 17, 2024 | 9:36 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಸರಣಿ ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಈ ಸರಣಿಗಾಗಿ ಭಾರತ ತಂಡ ಮುಂದಿನ 50 ದಿನಗಳ ಕಾಲ ಆಸ್ಟ್ರೇಲಿಯಾದಲ್ಲಿ ಉಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ಆಡುತ್ತಾ ಅಥವಾ ಇಲ್ಲವಾ ಎಂಬುದು ಈ ಸರಣಿಯಿಂದ ನಿರ್ಧಾರವಾಗಲಿದೆ. ಹೀಗಾಗಿಯೇ ಟೀಂ ಇಂಡಿಯಾ ಆಟಗಾರರು ನೆಟ್ಸ್​ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಇದೀಗ ಭಾರತ ತಂಡ ಡಬ್ಲ್ಯುಎಸಿಎ ಮೈದಾನದಲ್ಲಿ ತಾಲೀಮು ಮುಗಿಸಿದ್ದು, ಮಂಗಳವಾರದಿಂದ (ನವೆಂಬರ್ 19) ಪಂದ್ಯದ ಕಸರತ್ತಿಗೆ ಆಟಗಾರರು ಆಪ್ಟಸ್ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಏತನ್ಮಧ್ಯೆ, ಭಾರತದ 8 ಆಟಗಾರರು ತವರಿಗೆ ವಾಪಸ್ಸಾಗುತ್ತಿದ್ದಾರೆ.

8 ಆಟಗಾರರು ಭಾರತಕ್ಕೆ ವಾಪಸ್

ವಾಸ್ತವವಾಗಿ ಭಾರತೀಯ ಹಿರಿಯ ಕ್ರಿಕೆಟ್ ತಂಡಕ್ಕಿಂತ ಆಸ್ಟ್ರೇಲಿಯಾಕ್ಕೆ ಹೋಗವು ಮೊದಲು, ಭಾರತ ಎ ತಂಡ ಆಸ್ಟ್ರೇಲಿಯಾಕ್ಕೆ ಹೋಗಿತ್ತು. ಅಲ್ಲಿ ಭಾರತ ಎ ತಂಡವು, ಆಸ್ಟ್ರೇಲಿಯಾ ಎ ವಿರುದ್ಧ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಹೀಗಾಗಿ ಕಳೆದ 20 ದಿನಗಳಿಂದ ಆಸ್ಟ್ರೇಲಿಯಾದಲ್ಲಿದ್ದ ಭಾರತ ಎ ತಂಡದ ಕೆಲವು ಆಟಗಾರರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ವಾಸ್ತವವಾಗಿ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಾಗಿ ಭಾರತ ಎ ತಂಡದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಈ 15 ಆಟಗಾರರಲ್ಲಿ ಕೆಲವು ಆಟಗಾರರು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡಲಿರುವ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರನ್ನು ಹೊರತುಪಡಿಸಿ, ಉಳಿದ 8 ಆಟಗಾರರು ಮಾತ್ರ ಭಾರತಕ್ಕೆ ಮರಳುತ್ತಾರೆ.

7 ಆಟಗಾರರು ಆಸ್ಟ್ರೇಲಿಯಾದಲ್ಲೇ

ಭಾರತಕ್ಕೆ ವಾಪಸ್ಸಾಗುತ್ತಿರುವ ಆಟಗಾರರ ಪೈಕಿ, ಭಾರತ ಎ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಿಕಿ ಭುಯಿ, ಬಾಬಾ ಇಂದರ್‌ಜಿತ್, ಇಶಾನ್ ಕಿಶನ್, ಅಭಿಷೇಕ್ ಪೊರೆಲ್, ಮಾನವ್ ಸುತಾರ್ ಮತ್ತು ತನುಷ್ ಕೋಟ್ಯಾನ್ ಸೇರಿದ್ದಾರೆ. ಉಳಿದಂತೆ ಅಭಿಮನ್ಯು ಈಶ್ವರನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಆಸ್ಟ್ರೇಲಿಯಾದಲ್ಲಿ ಉಳಿಯಲಿದ್ದಾರೆ. ಏಕೆಂದರೆ ಈ ಎಲ್ಲಾ ಆಟಗಾರರು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇವರಲ್ಲಿ, ದೇವದತ್ ಪಡಿಕ್ಕಲ್ ಈ ಮೊದಲು ಈ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಶುಭ್​ಮನ್ ಗಿಲ್ ಇಂಜುರಿಯಿಂದಾಗಿ ಪಡಿಕ್ಕಲ್ ಅವರನ್ನು ಆಸ್ಟ್ರೇಲಿಯಾದಲ್ಲೇ ಉಳಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ.

ಮೀಸಲು ಆಟಗಾರರು: ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ