BPL 2025: ದುಡ್ಡು ಕೊಡ್ತಿಲ್ಲ… ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯದ ವಿದೇಶಿ ಆಟಗಾರರು

BPL 2025: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ದರ್ಬಾರ್ ರಾಜ್‌ಶಾಹಿ ಹಾಗೂ ರಂಗ್​ಪುರ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದರ್ಬಾರ್ ರಾಜ್‌ಶಾಹಿ ಪರ ಯಾವುದೇ ವಿದೇಶಿ ಆಟಗಾರರು ಕಣಕ್ಕಿಳಿದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ಆಟಗಾರರಿಗೆ ಸಂಭಾವನೆ ನೀಡದಿರುವುದು.

BPL 2025: ದುಡ್ಡು ಕೊಡ್ತಿಲ್ಲ... ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯದ ವಿದೇಶಿ ಆಟಗಾರರು
Durbar Rajshahi
Follow us
ಝಾಹಿರ್ ಯೂಸುಫ್
|

Updated on: Jan 27, 2025 | 7:56 AM

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಸಖತ್ ಸದ್ದು ಮಾಡುತ್ತಿದೆ. ಆದರೆ ಅದು ಆಟದಿಂದಲ್ಲ. ಬದಲಾಗಿ ಆಟಗಾರರ ಸಂಭಾವನೆ ಪಾವತಿ ವಿಚಾರದಿಂದ. ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಆಟಗಾರರ ಬಂಡಾಯದ ಸುದ್ದಿಗಳು ಕೇಳಿ ಬರುತ್ತಿದ್ದವು. ಆದೀಗ ನಿಜವಾಗಿದೆ. ದರ್ಬಾರ್ ರಾಜ್‌ಶಾಹಿ ತಂಡದ ವಿದೇಶಿ ಆಟಗಾರರು ಭಾನುವಾರ ಮೈದಾನಕ್ಕಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಫಾರಿನ್ ಪ್ಲೇಯರ್ಸ್​ಗೆ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ಈವರೆಗೆ ನಿಗದಿತ ಸಂಭಾವನೆಯನ್ನು ನೀಡದಿರುವುದು.

ಬಿಪಿಎಲ್​ ಮೊದಲಾರ್ಧದ ಮುಕ್ತಾಯದ ಬೆನ್ನಲ್ಲೇ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ವಿರುದ್ಧ ಆಟಗಾರರ ಹಣ ಪಾವತಿ ಬಾಕಿ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಕೆಲ ಆಟಗಾರರು ಅಭ್ಯಾಸಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನು ಸಹ ಹೊರಹಾಕಿದ್ದರು. ಇದೀಗ ತಿಂಗಳುಗಳು ಕಳೆದರೂ ಆಟಗಾರರಿಗೆ ಸಂಭಾವನೆ ನೀಡಲು ಮೀನಾವೇಷ ಎನಿಸುತ್ತಿರುವ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ವಿರುದ್ಧ ವಿದೇಶಿ ಆಟಗಾರರು ತಿರುಗಿ ನಿಂತಿದ್ದಾರೆ.

ಅಲ್ಲದೆ ಭಾನುವಾರ ನಡೆದ ರಂಗ್‌ಪುರ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದರ್ಬಾರ್ ರಾಜ್‌ಶಾಹಿ ಪರ ಯಾವುದೇ ವಿದೇಶಿ ಆಟಗಾರರು ಕಣಕ್ಕಿಳಿದಿಲ್ಲ. ಇದರೊಂದಿಗೆ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ಇನ್ನೂ ಸಹ ಆಟಗಾರರಿಗೆ ಸಂಭಾವನೆಯನ್ನು ಪಾವತಿಸಿಲ್ಲ ಎಂಬುದು ಬಹಿರಂಗವಾಗಿದೆ.

ನಿಯಮ ಉಲ್ಲಂಘನೆ:

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ನ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ತನ್ನ ಆಡುವ ಬಳಗದಲ್ಲಿ ಕನಿಷ್ಠ 2 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬೇಕು. ಆದರೆ, ಜನವರಿ 26 ರಂದು ರಂಗ್‌ಪುರ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದರ್ಬಾರ್ ರಾಜ್‌ಶಾಹಿ ಪರ ಯಾವುದೇ ವಿದೇಶಿ ಆಟಗಾರರು ಕಾಣಿಸಿಕೊಂಡಿಲ್ಲ.

ಪಂದ್ಯದ ಆರಂಭಕ್ಕೂ ಮುನ್ನ ವಿದೇಶಿ ಆಟಗಾರರು ಹಿಂದೆ ಸರಿದಿದ್ದರಿಂದ ಪ್ಲೇಯಿಂಗ್ ಇಲೆವೆನ್​ನಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ ಎಂದು ದರ್ಬಾರ್ ರಾಜ್‌ಶಾಹಿ ತಂಡದ ನಾಯಕ ತಸ್ಕಿನ್ ಅಹ್ಮದ್ ತಿಳಿಸಿದ್ದರು. ಇದರೊಂದಿಗೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ ಆಟಗಾರರ ವೇತನದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಪ್ಲೇಯಿಂಗ್ 11 ನಲ್ಲಿ ವಿದೇಶಿಯರಿಲ್ಲ:

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿದೇಶಿ ಆಟಗಾರರಿಲ್ಲದೆ, ತಂಡವೊಂದು ಪಂದ್ಯವನ್ನಾಡಿದೆ. ಇದು ಬಿಪಿಎಲ್ ನಿಯಮದ ಉಲ್ಲಂಘನೆಯಾಗಿದ್ದರೂ, ದರ್ಬಾರ್ ರಾಜ್​ಶಾಹಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ವಿಶೇಷ ಮನವಿ ಮಾಡಿ, ಸ್ಥಳೀಯ ಆಟಗಾರರನ್ನು ಒಳಗೊಂಡ ಆಡುವ ಬಳಗವನ್ನು ಕಣಕ್ಕಿಳಿಸಿದೆ.

ದುಡ್ಡಿಲ್ಲ, ಆಡಲ್ಲ:

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದರೂ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ವಿದೇಶಿ ಆಟಗಾರರಿಗೆ ಅರ್ಧದಷ್ಟು ಕೂಡ ವೇತನ ಪಾವತಿ ಮಾಡಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ನಾಲ್ಕನೇ ಒಂದು ಭಾಗವನ್ನು ಮಾತ್ರ ಪಾವತಿ ಮಾಡಲಾಗಿದೆ. ಆದರೆ ಬಿಸಿಬಿ ನಿಯಮಗಳ ಪ್ರಕಾರ, ಪಂದ್ಯಾವಳಿಯ ಸಮಯದಲ್ಲಿ ಆಟಗಾರರಿಗೆ ಶೇ. 75 ರಷ್ಟು ವೇತನವನ್ನು ಪಾವತಿಸಬೇಕು.

ಇದನ್ನೂ ಓದಿ: ಸಿಕ್ಸ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ

ಆದರೆ ದರ್ಬಾರ್ ರಾಜ್‌ಶಾಹಿ ಫ್ರಾಂಚೈಸಿ ಬಳಿ ದುಡ್ಡಿಲ್ಲ. ಇದನ್ನರಿತಿರುವ ವಿದೇಶಿ ಆಟಗಾರರು ಇದೀಗ ಟೂರ್ನಿ ನಡುವೆಯೇ ಪಂದ್ಯಾವಳಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ರಂಗ್​ಪುರ್ ರೈಡರ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ದರ್ಬಾರ್ ರಾಜ್‌ಶಾಹಿ ತಂಡದಲ್ಲಿರುವ ವಿದೇಶಿ ಆಟಗಾರರು:

  • ಮೊಹಮ್ಮದ್ ಹ್ಯಾರಿಸ್ (ಪಾಕಿಸ್ತಾನ್)
  • ರಿಯಾನ್ ಬರ್ಲ್ (ಝಿಂಬಾಬ್ವೆ)
  • ಮಾರ್ಕ್​ ಡೆಯಲ್ (ವೆಸ್ಟ್ ಇಂಡೀಸ್)
  • ಅಫ್ತಾಬ್ ಆಲಂ (ಅಫ್ಘಾನಿಸ್ತಾನ್)
  • ಮಿಗುಯೆಲ್ ಕಮಿನ್ಸ್ (ವೆಸ್ಟ್ ಇಂಡೀಸ್)
  • ಲಹಿರು ಸಮರಕೂನ್(ಶ್ರೀಲಂಕಾ)
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?