
ಇಶಾನ್ ಕಿಶನ್ ಅವರ 70 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರು ನೆಲದಲ್ಲಿ 5 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಹೈದರಾಬಾದ್ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಇದಲ್ಲದೆ, ಹೈದರಾಬಾದ್ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆದಾಗ್ಯೂ, ಈ ಸೋಲಿನೊಂದಿಗೆ, ಸಿಎಸ್‌ಕೆ ಪ್ಲೇಆಫ್ ತಲುಪುವ ಭರವಸೆ ಅಧಿಕೃತವಾಗಿ ಕೊನೆಗೊಂಡಿತು.
ಹೈದರಾಬಾದ್ ತಂಡವು ಸಿಎಸ್‌ಕೆ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ಲೇಆಫ್‌ಗೇರಿದೆ. ಹೈದರಾಬಾದ್ ತಂಡದ ಗೆಲುವಿನೊಂದಿಗೆ ಗುಜರಾತ್ ಕೂಡ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರರ್ಥ ಈ ಆವೃತ್ತಿಯಲ್ಲಿ ಆರ್ಸಿಬಿ, ಹೈದರಾಬಾದ್ ಮತ್ತು ಗುಜರಾತ್ ಸೇರಿದಂತೆ ಮೂರು ತಂಡಗಳು ಪ್ಲೇಆಫ್ ತಲುಪಿವೆ. ಈಗ, ಕೇವಲ ಒಂದು ಪ್ಲೇಆಫ್ ಸ್ಥಾನ ಮಾತ್ರ ಉಳಿದಿದೆ.
ಇಶಾನ್ ಕಿಶನ್ 70 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿ ಔಟಾದರು. ಹೈದರಾಬಾದ್ ಗೆಲುವಿಗೆ 9 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿದೆ.
ಹೈದರಾಬಾದ್ ಗೆಲ್ಲಲು 12 ಎಸೆತಗಳಲ್ಲಿ 13 ರನ್‌ಗಳು ಬೇಕಾಗಿವೆ, ಇದು ಸುಲಭ ಗೆಲುವಿನಂತೆ ಕಾಣುತ್ತಿದೆ. ತಂಡವು 18 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 168 ರನ್‌ಗಳನ್ನು ಗಳಿಸಿದೆ. ಇಶಾನ್ ಪ್ರಸ್ತುತ 70 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇಶಾನ್ ಕಿಶನ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಹೈದರಾಬಾದ್ 16 ಓವರ್‌ಗಳಲ್ಲಿ 3 ವಿಕೆಟ್‌ಗೆ 143 ರನ್ ಗಳಿಸಿದೆ. ಗೆಲ್ಲಲು 24 ಎಸೆತಗಳಲ್ಲಿ 38 ರನ್‌ಗಳು ಬೇಕಾಗಿವೆ.
ಕ್ಲಾಸೆನ್ ಮತ್ತು ಇಶಾನ್ ಈಗಾಗಲೇ ಅರ್ಧಶತಕದ ಜೊತೆಯಾಟ ನಡೆಸಿದ್ದಾರೆ. ಹೈದರಾಬಾದ್ 13 ಓವರ್‌ಗಳಲ್ಲಿ 2 ವಿಕೆಟ್‌ಗೆ 114 ರನ್ ಗಳಿಸಿದೆ. ಗೆಲ್ಲಲು 42 ಎಸೆತಗಳಲ್ಲಿ 67 ರನ್‌ಗಳು ಬೇಕಾಗಿವೆ.
ಹೈದರಾಬಾದ್ ಗೆಲ್ಲಲು 60 ಎಸೆತಗಳಲ್ಲಿ 106 ರನ್‌ಗಳ ಅಗತ್ಯವಿದೆ. 10 ಓವರ್‌ಗಳಲ್ಲಿ 2 ವಿಕೆಟ್‌ಗೆ 75 ರನ್‌ಗಳಿಸಿದೆ. ಇಶಾನ್ ಮತ್ತು ಕ್ಲಾಸೆನ್ ಕ್ರೀಸ್‌ನಲ್ಲಿದ್ದಾರೆ.
ಹೈದರಾಬಾದ್ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 53 ರನ್ ಗಳಿಸಿದೆ. ಇಶಾನ್ ಮತ್ತು ಅಭಿಷೇಕ್ ಎರಡನೇ ವಿಕೆಟ್‌ಗೆ 27 ಎಸೆತಗಳಲ್ಲಿ 35 ರನ್ ಸೇರಿಸಿದ್ದಾರೆ.
ಟ್ರಾವಿಸ್ ಹೆಡ್ ಅವರನ್ನು ಮುಖೇಶ್ ಚೌಧರಿ 6 ರನ್‌ಗಳಿಗೆ ಔಟ್ ಮಾಡಿದರು. ಹೈದರಾಬಾದ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ತಂಡವು 3 ಓವರ್‌ಗಳಲ್ಲಿ 1 ವಿಕೆಟ್‌ಗೆ 19 ರನ್ ಗಳಿಸಿದೆ.
ಸ್ಪೆನ್ಸರ್ ಜಾನ್ಸನ್ 2ನೇ ಓವರ್‌ನಲ್ಲಿ ಕೇವಲ 5 ರನ್ ನೀಡಿದರು. ಹೈದರಾಬಾದ್ ತಂಡವು 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.
ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿದೆ. ಹೈದರಾಬಾದ್ ಗೆಲ್ಲಲು ಈಗ 181 ರನ್‌ಗಳ ಅಗತ್ಯವಿದೆ. ಪ್ಯಾಟ್ ಕಮ್ಮಿನ್ಸ್ ಅದ್ಭುತ ಬೌಲಿಂಗ್ ಮಾಡಿ 3 ವಿಕೆಟ್‌ಗಳನ್ನು ಕಬಳಿಸಿದರೆ, CSK ಪರ ಬ್ರೆವಿಸ್ 44 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಪ್ಯಾಟ್ ಕಮ್ಮಿನ್ಸ್ 4 ಓವರ್‌ಗಳಲ್ಲಿ 28 ರನ್‌ಗಳಿಗೆ 3 ವಿಕೆಟ್ ಪಡೆದರು. ಸಿಎಸ್‌ಕೆ 16 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 144 ರನ್ ಗಳಿಸಿದೆ.
ನಿತೀಶ್ ರೆಡ್ಡಿ ಎಸೆದ 14ನೇ ಓವರ್‌ನಲ್ಲಿ 18 ರನ್ ಬಂದವು. ಸಿಎಸ್‌ಕೆ 14 ಓವರ್‌ಗಳಲ್ಲಿ 4 ವಿಕೆಟ್‌ಗೆ 122 ರನ್ ಗಳಿಸಿದೆ.
ರುತುರಾಜ್ ಗಾಯಕ್ವಾಡ್ ಕೇಲವ 15 ರನ್ ಗಳಿಸಿ ಔಟಾದರು. ಸಿಎಸ್‌ಕೆ 12 ಓವರ್‌ಗಳಲ್ಲಿ 4 ವಿಕೆಟ್‌ಗೆ 100 ರನ್ ಗಳಿಸಿದೆ.
ಹೈದರಾಬಾದ್ ಪರ ಪ್ರಫುಲ್ 8ನೇ ಓವರ್ ಎಸೆದರು. ಈ ಓವರ್‌ನಲ್ಲಿ ಒಟ್ಟು 18 ರನ್‌ಗಳು ಬಂದವು. ಸಿಎಸ್‌ಕೆ 8 ಓವರ್‌ಗಳಲ್ಲಿ 2 ವಿಕೆಟ್‌ಗೆ 79 ರನ್ ಗಳಿಸಿದೆ.
ಸಿಎಸ್‌ಕೆ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್‌ಗೆ 57 ರನ್‌ಗಳಿಸಿದೆ. ಕಾರ್ತಿಕ್ ಶರ್ಮಾ ಪ್ರಸ್ತುತ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿದ್ದ ಸಂಜು ಸ್ಯಾಮ್ಸನ್ 27 ರನ್‌ಗಳಿಗೆ ಔಟಾದರು. ಸಿಎಸ್‌ಕೆ ತಂಡದ ಮೊದಲ ವಿಕೆಟ್ ಪತನವಾಯಿತು. ಉರ್ವಿಲ್ ಪಟೇಲ್ ಕ್ರೀಸ್‌ಗೆ ಬಂದಿದ್ದಾರೆ.
ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಬ್ಯಾಟಿಂಗ್ ಆಯ್ದುಕೊಂಡಿದೆ.
Published On - 7:25 pm, Mon, 18 May 26