PAK Vs WI: ವಿಂಡೀಸ್ ತಂಡದ ಮತ್ತೈದು ಸದಸ್ಯರಿಗೆ ಕೊರೊನಾ ಸೋಂಕು! ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆ

PAK Vs WI: ಇದಕ್ಕೂ ಮುನ್ನ ವೆಸ್ಟ್‌ಇಂಡೀಸ್‌ನ ಮೂವರು ಆಟಗಾರರು ಈ ವೈರಸ್‌ನ ಹಿಡಿತಕ್ಕೆ ಒಳಗಾಗಿದ್ದರು. ಈಗ ಕೋವಿಡ್​ಗೆ ಒಳಗಾದ ಆಟಗಾರರ ಒಟ್ಟು ಸಂಖ್ಯೆ ಆರಕ್ಕೇರಿದೆ.

PAK Vs WI: ವಿಂಡೀಸ್ ತಂಡದ ಮತ್ತೈದು ಸದಸ್ಯರಿಗೆ ಕೊರೊನಾ ಸೋಂಕು! ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆ
ವೆಸ್ಟ್ ಇಂಡೀಸ್ ತಂಡ
Follow us
ಪೃಥ್ವಿಶಂಕರ
|

Updated on:Dec 16, 2021 | 6:33 PM

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಸಂಕಷ್ಟ ಎದುರಾಗಿದೆ. ತಂಡವು ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದ್ದು, ಅಲ್ಲಿ ತಂಡದ ಕೆಲವು ಆಟಗಾರರು ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿದೆ. ಇದೀಗ ಅದರ ಸಂಖ್ಯೆ ಹೆಚ್ಚಿದ್ದು, ತಂಡದ ಪ್ರವಾಸವೂ ಬಿಕ್ಕಟ್ಟಿನಿಂದ ಕೂಡಿದೆ. ಬುಧವಾರದ ಟೆಸ್ಟ್ ನಂತರ ತನ್ನ ಐವರು ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿದೆ. ಈ ಐವರು ಈಗ ಪ್ರತ್ಯೇಕವಾಗಿಯೇ ಇರಲಿದ್ದು ಈ ಐವರಲ್ಲಿ ಮೂವರು ಆಟಗಾರರಾಗಿದ್ದರೆ ಒಬ್ಬರು ಸಹಾಯಕ ಕೋಚ್ ಮತ್ತು ಒಬ್ಬರು ತಂಡದ ವೈದ್ಯರಾಗಿದ್ದಾರೆ. ಶಾಯ್ ಹೋಪ್, ಎಡಗೈ ಸ್ಪಿನ್ನರ್ ಅಕಿಲಾ ಹೊಸೈನ್ ಮತ್ತು ಆಲ್ ರೌಂಡರ್ ಜಸ್ಟಿನ್ ಗ್ರೀವ್ಸ್ ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿರುವ ಆಟಗಾರರು. ಸಹಾಯಕ ಕೋಚ್ ರೊಡ್ಡಿ ಎಸ್ಟ್ವಿಕ್ ಮತ್ತು ತಂಡದ ವೈದ್ಯ ಅಕ್ಷಯ್ ಮಾನ್ಸಿಂಗ್ ಅವರ ಟೆಸ್ಟ್ ಸಹ ಪಾಸಿಟಿವ್ ಆಗಿದೆ. ಈ ಟೆಸ್ಟ್​ಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಸಿದೆ. ಈ ಮೂವರು ಆಟಗಾರರು ಮುಂಬರುವ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಈ ಐವರು ತಂಡದ ಉಳಿದವರಿಂದ ಪ್ರತ್ಯೇಕವಾಗಿರಲಿದ್ದು ಅವರೆಲ್ಲರೂ 10 ದಿನಗಳವರೆಗೆ ಅಥವಾ ಅವರ ಪರೀಕ್ಷೆಯು ನೆಗೆಟಿವ್ ಬರುವವರೆಗೆ ಪ್ರತ್ಯೇಕವಾಗಿರುತ್ತಾರೆ ಎಂದಿದೆ.

ಪ್ರವಾಸದಲ್ಲಿ ಬಿಕ್ಕಟ್ಟು ಇದಕ್ಕೂ ಮುನ್ನ ವೆಸ್ಟ್‌ಇಂಡೀಸ್‌ನ ಮೂವರು ಆಟಗಾರರು ಈ ವೈರಸ್‌ನ ಹಿಡಿತಕ್ಕೆ ಒಳಗಾಗಿದ್ದರು. ಈಗ ಕೋವಿಡ್​ಗೆ ಒಳಗಾದ ಆಟಗಾರರ ಒಟ್ಟು ಸಂಖ್ಯೆ ಆರಕ್ಕೇರಿದೆ. ಇದಲ್ಲದೇ ಡೆವೊನ್ ಥಾಮಸ್ ಮೊದಲ ಟಿ20ಯಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಪ್ರವಾಸಿ ತಂಡದ ಎಲ್ಲಾ ಸದಸ್ಯರನ್ನು ಒಮ್ಮೆ ಪರೀಕ್ಷಿಸಿದ ನಂತರ, ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಭೇಟಿಯಾಗಿ ಪ್ರವಾಸವನ್ನು ಮುಂದುವರೆಸುವ ಬಗ್ಗೆ ನಿರ್ಧರಿಸುತ್ತಾರೆ. ಈ ಆಟಗಾರರ ಮೊದಲು, ಎಡಗೈ ಬೌಲರ್ ಶೆಲ್ಡನ್ ಕಾಟ್ರೆಲ್, ಆಲ್ ರೌಂಡರ್ ರೋಸ್ಟನ್ ಚೇಸ್ ಮತ್ತು ಕೈಲ್ ಮೈಯರ್ಸ್ ಕೋವಿಡ್ ಪಾಸಿಟಿವ್ ಆಗಿದ್ದರು.

ಪ್ರವಾಸದ ವೇಳಾಪಟ್ಟಿ ಹೀಗಿದೆ ಪಾಕಿಸ್ತಾನ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಸದ್ಯ ಟಿ20 ಸರಣಿ ನಡೆಯುತ್ತಿದ್ದು, ಎರಡು ಪಂದ್ಯಗಳು ಕೂಡ ಮುಗಿದಿವೆ. ಎರಡೂ ಪಂದ್ಯಗಳು ಕರಾಚಿಯಲ್ಲಿ ನಡೆದಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ 63 ರನ್‌ಗಳ ಜಯ ಸಾಧಿಸಿತ್ತು. ಎರಡನೇ ಪಂದ್ಯದಲ್ಲೂ ಪಾಕಿಸ್ತಾನ ಗೆದ್ದಿತ್ತು. ಈ ಪಂದ್ಯವನ್ನು ಪಾಕಿಸ್ತಾನ ಒಂಬತ್ತು ರನ್‌ಗಳಿಂದ ಗೆದ್ದುಕೊಂಡಿತು. ಮೂರನೇ ಪಂದ್ಯ ಇಂದು ನಡೆಯಲಿದೆ. ಡಿಸೆಂಬರ್ 18 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಎರಡನೇ ಪಂದ್ಯ ಡಿಸೆಂಬರ್ 18 ರಿಂದ ಮತ್ತು ಮೂರನೇ ಪಂದ್ಯ ಡಿಸೆಂಬರ್ 22 ರಿಂದ ನಡೆಯಲಿದೆ.ಈ ಎಲ್ಲಾ ಪಂದ್ಯಗಳು ಕರಾಚಿಯಲ್ಲಿ ನಡೆಯಲಿವೆ.

ಇದನ್ನೂ ಓದಿ:Virat Kohli: ಬಿಸಿಸಿಐ ಬಿಗ್​ಬಾಸ್ ಗಂಗೂಲಿ ಕೆಂಗಣ್ಣಿಗೆ ಗುರಿಯಾಗಿರುವ ಕೊಹ್ಲಿಯ ಮುಂದಿರುವ 3 ಸವಾಲುಗಳಿವು

Published On - 6:31 pm, Thu, 16 December 21

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್