India vs Pakistan: ಆಸ್ಟ್ರೇಲಿಯಾದಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿ: ತ್ರಿಕೋನಾ ಸರಣಿಗೆ ಪ್ಲ್ಯಾನ್..!
India vs Pakistan: ವೈಯಕ್ತಿಕವಾಗಿ, ನಾನು ತ್ರಿಕೋನ ಸರಣಿಯನ್ನು ಇಷ್ಟಪಡುತ್ತೇನೆ. ಈ ಹಿಂದೆಯೂ ಅಭಿಮಾನಿಗಳು ತ್ರಿಕೋನಾ ಸರಣಿಯನ್ನು ಇಷ್ಟಪಟ್ಟಿದ್ದರು. ಇಂತಹ ಸರಣಿಗಳನ್ನು ಆಯೋಜಿಸಲು ನಾವು ಮುಂದಾಗಲಿದ್ದೇವೆ.
ಭಾರತ-ಪಾಕಿಸ್ತಾನ್ (India vs Pakistan) ತಂಡಗಳು ಮತ್ತೆ ಮುಖಾಮುಖಿಯಾಗಬೇಕಿದ್ದರೆ ಏಷ್ಯಾ ಕಪ್ ತನಕ ಕಾಯಲೇಬೇಕು, ಇಲ್ಲ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಅನ್ನು ಎದುರು ನೋಡಬೇಕು…ಆದರೆ ಈ ಪ್ರಮುಖ ಟೂರ್ನಿಗಳ ಹೊರತಾಗಿ ಇದೀಗ ತ್ರಿಕೋನಾ ಸರಣಿಯನ್ನು ಆಯೋಜಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಮುಖ್ಯಸ್ಥ ನಿಕ್ ಹಾಕ್ಲಿ. ಈ ಸರಣಿಯಲ್ಲಿ ಭಾರತ, ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ತಂಡಗಳು ಆಡಲಿವೆ. ಭವಿಷ್ಯದಲ್ಲಿ ಭಾರತ-ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತ್ರಿಕೋನ ಸರಣಿಯನ್ನು ಆಯೋಜಿಸಲು ಆಸಕ್ತಿ ಹೊಂದಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥರು ತಿಳಿಸಿದ್ದಾರೆ . ಭಾರತ ಮತ್ತು ಪಾಕಿಸ್ತಾನ 2012 ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಇದಾದ ಬಳಿಕ ಐಸಿಸಿ ಟೂರ್ನಿಗಳಲ್ಲಿ ಸೆಣಸಾಡಿದ್ದವು. ಇದೀಗ ತ್ರಿಕೋನಾ ಸರಣಿಯ ಮೂಲಕ ಮೂರು ತಂಡಗಳ ಕ್ರಿಕೆಟ್ ಕದನ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಆಸಕ್ತಿ ಹೊಂದಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಕೂಡ ನಾಲ್ಕು ರಾಷ್ಟ್ರಗಳ ಸರಣಿಯನ್ನು ಆಯೋಜಿಸುವ ಸೂಚನೆ ನೀಡಿದ್ದರು. ಪಾಕಿಸ್ತಾನ, ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್ ನಾಲ್ಕು ರಾಷ್ಟ್ರಗಳನ್ನು ಒಳಗೊಂಡ ಚತುಷ್ಕೋನ ಟಿ20 ಸರಣಿಗೆ ಪ್ಲ್ಯಾನ್ ರೂಪಿಸಿರುವುದಾಗಿ ರಮೀಜ್ ರಾಜಾ ತಿಳಿಸಿದ್ದರು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಹಾಕ್ಲಿ ತ್ರಿಕೋನ ಸರಣಿ ಬಗ್ಗೆ ಮಾತನಾಡಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಬಿಸಿಸಿಐ ಹಾಗೂ ಪಿಸಿಬಿ ಕ್ರಿಕೆಟ್ ಮಂಡಳಿ ಚರ್ಚೆ ಮಾಡಿಲ್ಲ ಎಂದಿದ್ದಾರೆ ಹಾಕ್ಲಿ.
‘ವೈಯಕ್ತಿಕವಾಗಿ, ನಾನು ತ್ರಿಕೋನ ಸರಣಿಯನ್ನು ಇಷ್ಟಪಡುತ್ತೇನೆ. ಈ ಹಿಂದೆಯೂ ಅಭಿಮಾನಿಗಳು ತ್ರಿಕೋನಾ ಸರಣಿಯನ್ನು ಇಷ್ಟಪಟ್ಟಿದ್ದರು. ಇಂತಹ ಸರಣಿಗಳನ್ನು ಆಯೋಜಿಸಲು ನಾವು ಮುಂದಾಗಲಿದ್ದೇವೆ. ಭಾರತ ಮತ್ತು ಪಾಕಿಸ್ತಾನಿ ಮೂಲದ ಲಕ್ಷಾಂತರ ಜನರು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಜಗತ್ತಿನಾದ್ಯಂತ ಎಲ್ಲರೂ ಭಾರತ-ಪಾಕಿಸ್ತಾನ ಕ್ರಿಕೆಟ್ ಕದನವನ್ನು ನೋಡಲು ಬಯಸುತ್ತಾರೆ. ಹೀಗಾಗಿ ಅಂತಹದೊಂದು ಸರಣಿ ಆಯೋಜಿಸಲು ಆಸಕ್ತರಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಹಾಕ್ಲಿ ತಿಳಿಸಿದ್ದಾರೆ.
ತ್ರಿಕೋನ ಸರಣಿ ಅನುಮಾನ: ಭಾರತ ಮತ್ತು ಪಾಕಿಸ್ತಾನ ನಡುವೆ ತ್ರಿಕೋನ ಸರಣಿಯನ್ನು ನಡೆಯುವುದು ಅನುಮಾನ. ಏಕೆಂದರೆ 2023 ರವರೆಗಿನ ಸರಣಿಗಳ ಬಗ್ಗೆ ಈಗಾಗಲೇ ಟೀಮ್ ಇಂಡಿಯಾ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಹಾಗೆಯೇ ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿಯೇ ಮುಖಾಮುಖಿಯಾಗಲಿವೆ. ಈ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದ್ದು, ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಇನ್ನು ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮೂರು ತಂಡಗಳ ಸರಣಿ ಆಯೋಜಿಸಲು ಬಯಸಿದರೂ ಬ್ಯುಸಿ ಸ್ಕೆಡ್ಯೂಲ್ ಕಾರಣ ಬಿಸಿಸಿಐ ಒಪ್ಪಿಗೆ ಸೂಚಿಸುವುದು ಅನುಮಾನ ಎಂದೇ ಹೇಳಬಹುದು.
ಇದನ್ನೂ ಓದಿ: Ipl 2022 Rcb Schedule: RCB ತಂಡ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Australia open to hosting series with Pakistan and India: CA boss)