ಭಾರತ ವನಿತಾ ಕ್ರಿಕೆಟ್ ತಂಡದಲ್ಲಿ ನಿಮ್ಮ ನೆಚ್ಚಿನ ಆಟಗಾರ್ತಿ ಯಾರು? ಟಿವಿ9 ಕನ್ನಡ ಡಿಜಿಟಲ್ ಸರ್ವೆಯಲ್ಲಿ ಬಂದ ಉತ್ತರವೇನು?

India Womens Cricket Team: ಟಿವಿ9 ಡಿಜಿಟಲ್ ಕೇಳಿದ ಪ್ರಶ್ನೆಗೆ ಹೆಚ್ಚಾಗಿ ಬಂದ ಉತ್ತರಗಳಲ್ಲಿ ಮೊದಲನೇ ಹೆಸರೆಂದರೆ ಅದು ಇತ್ತೀಚ್ಚಿನ ಯುವ ಪೀಳಿಗೆಯ ಚಂದ್ರಚಕೋರಿ ಸ್ಮೃತಿ ಮಂಧಾನ. ಟೀಂ ಇಂಡಿಯಾದ ಗೆಲುವಿಗೆ ಬ್ಯಾಟ್ ಮೂಲಕ ಉತ್ತಮ ಕೊಡುಗೆ ನೀಡುತ್ತಿರುವ ಮಂಧಾನ ಏಕಾಂಗಿಯಾಗಿ ಅದೇಷ್ಟೋ ಪಂದ್ಯಗಳ ಗೆಲುವಿಗೆ ಸಹಕಾರಿಯಾಗಿದ್ದಾರೆ.

ಭಾರತ ವನಿತಾ ಕ್ರಿಕೆಟ್ ತಂಡದಲ್ಲಿ ನಿಮ್ಮ ನೆಚ್ಚಿನ ಆಟಗಾರ್ತಿ ಯಾರು? ಟಿವಿ9 ಕನ್ನಡ ಡಿಜಿಟಲ್ ಸರ್ವೆಯಲ್ಲಿ ಬಂದ ಉತ್ತರವೇನು?
India Women's Cricket Team
Follow us
TV9 Web
| Updated By: Digi Tech Desk

Updated on:Mar 10, 2022 | 12:55 PM

ನ್ಯೂಜಿಲೆಂಡ್​ನಲ್ಲಿ 2022 ರ ಮಹಿಳಾ ವಿಶ್ವಕಪ್‌ (Icc Women World Cup 2022) ನಡೆಯುತ್ತಿದ್ದು, ಮೊದಲ ಪಂದ್ಯದಲ್ಲೇ ಬದ್ದವೈರಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ವಿಶ್ವಕಪ್​ನಲ್ಲಿ ಕಪ್​ ಗೆಲ್ಲುವ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ನ ಸವಾಲನ್ನು ಎದುರಿಸುತ್ತಿದೆ. ವಾಸ್ತವವಾಗಿ, ಇದು ಟೀಮ್ ಇಂಡಿಯಾಗೆ ಕಷ್ಟಕರವಾದ ಪಂದ್ಯವಾಗಿದೆ ಏಕೆಂದರೆ ಕಿವೀಸ್ ತಂಡವು ತನ್ನ ತವರಿನ ಲಾಭವನ್ನು ಪಡೆಯಲಿದೆ. ಅಲ್ಲದೆ ಕಳೆದ ಏಕದಿನ ಸರಣಿಯಲ್ಲಿ ಅವರು ಟೀಮ್ ಇಂಡಿಯಾವನ್ನು 4-1 ಅಂತರದಿಂದ ಸೋಲಿಸಿದ್ದಾರೆ. ಒಂದೆಡೆ ವಿಶ್ವ ಸಮರದ ಮಹಾ ಕದನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬರಬೇಕೆಂಬುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ. ಇನ್ನೊಂದೆಡೆ ವಿಶ್ವಕಪ್​ ಸಮರದಲ್ಲಿ ಭಾರತ ವನಿತಾ ತಂಡಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಅಭಿಮಾನಿಗಳಲ್ಲಿ ಮಹಿಳಾ ಕ್ರಿಕೆಟ್​ ಮೇಲೆ ಆಸಕ್ತಿ ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಸೋಶಿಯಲ್ ಮೀಡಿಯಾದಲ್ಲಿ ವಿನೂತನ ಪ್ರಯತ್ನ ಮಾಡುತ್ತಿದೆ.

ಇದರ ಮುಂದುವರೆದ ಅಧ್ಯಾಯವಾಗಿ ಟಿವಿ9 ಡಿಜಿಟಲ್ ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮುಂದೆ ಕುತೂಹಕಾರಿ ಪ್ರಶ್ನೆಯೊಂದನ್ನು ಮುಂದಿಟ್ಟಿತ್ತು. ಅದೇನೆಂದರೆ, ಪ್ರತಿ ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತ ಭಾರತದಲ್ಲಿ ವನಿತಾ ಕ್ರಿಕೆಟ್​ನ ಪ್ರಭಾವವನ್ನು ಹೆಚ್ಚಿಸುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ನಿಮ್ಮ ನೆಚ್ಚಿನ ಆಟಗಾರ್ತಿ ಯಾರು ಎಂಬುದಾಗಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಹಸ್ರಾರು ಅಭಿಮಾನಿಗಳು ತಮ್ಮದೆ ಆದ ಉತ್ತರವನ್ನು ನೀಡಿದ್ದಾರೆ.

ಸ್ಮೃತಿ ಮಂಧಾನ ಹಾಟ್​ ಫೇವರೆಟ್ ಟಿವಿ9 ಡಿಜಿಟಲ್ ಕೇಳಿದ ಪ್ರಶ್ನೆಗೆ ಹೆಚ್ಚಾಗಿ ಬಂದ ಉತ್ತರಗಳಲ್ಲಿ ಮೊದಲನೇ ಹೆಸರೆಂದರೆ ಅದು ಇತ್ತೀಚ್ಚಿನ ಯುವ ಪೀಳಿಗೆಯ ಚಂದ್ರಚಕೋರಿ ಸ್ಮೃತಿ ಮಂಧಾನ. ಟೀಂ ಇಂಡಿಯಾದ ಗೆಲುವಿಗೆ ಬ್ಯಾಟ್ ಮೂಲಕ ಉತ್ತಮ ಕೊಡುಗೆ ನೀಡುತ್ತಿರುವ ಮಂಧಾನ ಏಕಾಂಗಿಯಾಗಿ ಅದೇಷ್ಟೋ ಪಂದ್ಯಗಳ ಗೆಲುವಿಗೆ ಸಹಕಾರಿಯಾಗಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಭಾರತ ಮಹಿಳಾ ಕ್ರಿಕೆಟ್​ನಲ್ಲಿ ಹೆಸರು ವಾಸಿಯಾಗಿರುವ ಮಂಧಾನ ತಮ್ಮ ಸೌಂದರ್ಯದಿಂದಲೂ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹೀಗಾಗಿ ಟಿವಿ9 ಕನ್ನಡ ಡಿಜಿಟಲ್ ಪ್ರಶ್ನೆಗೆ ಸುಮಾರು 50 ಪ್ರತಿಶತ ಜನರು ಸ್ಮೃತಿ ಮೇಲೆ ಒಲವು ತೋರಿದ್ದಾರೆ.

ಹಾಲಿ ನಾಯಕಿ ಮೇಲೂ ಅಭಿಮಾನಿಗಳ ಒಲವು ಟೀಂ ಇಂಡಿಯಾ ವನಿತಾ ತಂಡದ ಹಾಲಿ ನಾಯಕಿ ಹಾಗೂ ಅನುಭವಿ ಆಟಗಾರ್ತಿ ಮಿಥಾಲಿ ರಾಜ್​ ಕೂಡ ಸಾವಿರಾರು ಅಭಿಮಾನಿಗಳ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಟೀಂ ಇಂಡಿಯಾ ವನಿತಾ ತಂಡ ಈ ಮಟ್ಟಕ್ಕೆ ಬೆಳೆಯುವಲ್ಲಿ ಇವರ ಕೊಡುಗೆಯೂ ಸಾಕಷ್ಟಿದೆ. ತಮ್ಮ ಅಪಾರ ಅನುಭವವನ್ನು ಮೈದಾನದಲ್ಲಿ ತರುವ ಇವರು ತಮ್ಮ ಚಾಣಕ್ಯ ನಿರ್ಧಾರಗಳಿಂದ ಹಲವು ಪಂದ್ಯಗಳಲ್ಲಿ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲದೆ ತಮ್ಮ ಬ್ಯಾಟಿಂಗ್​ನಿಂದಲೂ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್​ಗೆ ವಿದಾಯ ಹೇಳುವ ಹಂತದಲ್ಲಿರುವ ಮಿಥಾಲಿಗೆ ಇದು ಅಂತಿಮ ವಿಶ್ವಕಪ್ ಆಗಿದ್ದು, ಇವರಿಗೆ ಗೆಲುವಿನ ಬಿಳ್ಕೊಡುಗೆ ನೀಡಲು ಇಡೀ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗೆ ಟೀಂ ಇಂಡಿಯಾ ಯಶಸ್ಸಿಗೆ ಪಾತ್ರರಾಗಿರುವ ಮಿಥಾಲಿ ಪರ ಸುಮಾರು 30 ಪ್ರತಿಶತ ಜನರು ಒಲವು ತೋರಿದ್ದಾರೆ.

ಕನ್ನಡತಿಗೂ ಸಾಕಷ್ಟು ಅಭಿಮಾನಿಗಳು ಈ ಬಾರಿಯ ವಿಶ್ವಕಪ್​ನಲ್ಲಿ ತನ್ನ ಅದ್ಭುತ ಸ್ಪಿನ್ ದಾಳಿಯಿಂದ ಎದುರಾಳಿ ಬ್ಯಾಟರ್​ಗಳನ್ನು ಬಲಿಪಶು ಮಾಡುತ್ತಿರುವ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಕೂಡ ತಮ್ಮ ಪ್ರತಿಭೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ಕನ್ನಡತಿಯನ್ನು ಕೈಬಿಡದ ಸಾಕಷ್ಟು ಅಭಿಮಾನಿಗಳು ರಾಜೇಶ್ವರಿ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ. ಉಳಿದಂತೆ ಇತ್ತೀಚೆಗೆ ಮಹಿಳಾ ಸೆಹ್ವಾಗ್ ಎಂಬ ಬಿರುದ್ದು ಪಡೆದಿರುವ ಯುವ ಆಟಗಾರ್ತಿ ಶೆಫಾಲಿ ವರ್ಮಾ ನಮ್ಮ ನೆಚ್ಚಿನ ಆಟಗಾರ್ತಿಯೆಂದು ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Womens World Cup 2022: ವಿಶ್ವ ಸಮರದಲ್ಲಿ ಭಾರತಕ್ಕೆ ಬಲಿಷ್ಠ ಕಿವೀಸ್ ಎದುರಾಳಿ! ಮುಖಾಮುಖಿ ದಾಖಲೆ ಹೀಗಿದೆ

Published On - 8:02 pm, Wed, 9 March 22

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ