Riyan Parag: 5 ಭರ್ಜರಿ ಸಿಕ್ಸ್, 6 ಫೋರ್: ತೂಫಾನ್ ಶತಕ ಸಿಡಿಸಿದ ರಿಯಾನ್ ಪರಾಗ್

Deodhar Trophy 2023: ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ರಿಯಾನ್ ಪರಾಗ್ ಬ್ಯಾಟ್​ನಿಂದ ಮೂಡಿಬಂದ 2ನೇ ಶತಕ ಇದು. ಇದಕ್ಕೂ ಮುನ್ನ ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ ಯುವ ದಾಂಡಿಗ 131 ರನ್​ ಬಾರಿಸಿ ಅಬ್ಬರಿಸಿದ್ದರು. ಇದೀಗ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದ್ದಾರೆ.

Riyan Parag: 5 ಭರ್ಜರಿ ಸಿಕ್ಸ್, 6 ಫೋರ್: ತೂಫಾನ್ ಶತಕ ಸಿಡಿಸಿದ ರಿಯಾನ್ ಪರಾಗ್
Riyan Parag
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 01, 2023 | 4:09 PM

Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ 14ನೇ ಪಂದ್ಯದಲ್ಲಿ ಯುವ ದಾಂಡಿಗ ರಿಯಾನ್ ಪರಾಗ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಪಶ್ಚಿಮ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಮನ್ಯು ಈಶ್ವರನ್ (38) ಹಾಗೂ ಉತ್ಕರ್ಷ್​ ಸಿಂಗ್ (50) ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಸಿಂಗ್ 42 ರನ್​ಗಳ ಕೊಡುಗೆ ನೀಡಿದರು. ಇದಾದ ಬಳಿಕ ಕಣಕ್ಕಿಳಿದ ರಿಶವ್ ದಾಸ್ (3) ಹಾಗೂ ನಾಯಕ ಸೌರಭ್ ತಿವಾರಿ (13) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು.

ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿ ಮೇಲುಗೈ ಪಡೆದಿದ್ದ ಪಶ್ಚಿಮ ವಲಯ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ರಿಯಾನ್ ಪರಾಗ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಮೈದಾನದ ಮೂಲೆ ಮೂಲೆಗೆ ಸಿಕ್ಸ್​ ಫೋರ್​ಗಳನ್ನು ಸಿಡಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು.

ಅಂತಿಮವಾಗಿ 68 ಎಸೆತಗಳನ್ನು ಎದುರಿಸಿದ ರಿಯಾನ್ ಪರಾಗ್ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 102 ರನ್ ಬಾರಿಸಿ ಮಿಂಚಿದರು. ಈ ಶತಕದ ನೆರವಿನಿಂದ ಪೂರ್ವ ವಲಯ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 319 ರನ್ ಕಲೆಹಾಕಿತು.

320 ರನ್​ಗಳ ಕಠಿಣ ಗುರಿ ಪಡೆದ ಪಶ್ಚಿಮ ವಲಯ ತಂಡದ ಪರ ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಸಾಥ್ ದೊರಕಿರಲಿಲ್ಲ.

ಪರಿಣಾಮ 100 ರನ್​ಗಳಿಸುವಷ್ಟರಲ್ಲಿ ಪಶ್ಚಿಮ ವಲಯ ತಂಡವು 6 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ್ದ ಹಾರ್ವಿಕ್ ದೇಸಾಯಿ 92 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 34 ಓವರ್​ಗಳಲ್ಲಿ ಪಶ್ವಿಮ ವಲಯ ತಂಡವು 162 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಪೂರ್ವ ವಲಯ ತಂಡವು 157 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಸೆಂಚು’ರಿಯಾನ್’:

ಈ ಬಾರಿಯ ದೇವಧರ್ ಟ್ರೋಫಿಯಲ್ಲಿ ರಿಯಾನ್ ಪರಾಗ್ ಬ್ಯಾಟ್​ನಿಂದ ಮೂಡಿಬಂದ 2ನೇ ಶತಕ ಇದು. ಇದಕ್ಕೂ ಮುನ್ನ ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ ಯುವ ದಾಂಡಿಗ 131 ರನ್​ ಬಾರಿಸಿ ಅಬ್ಬರಿಸಿದ್ದರು. ಇದೀಗ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದ್ದಾರೆ.

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವಿರಾಟ್ ಸಿಂಗ್ , ಸೌರಭ್ ತಿವಾರಿ (ನಾಯಕ) , ಉತ್ಕರ್ಷ್ ಸಿಂಗ್ , ರಿಯಾನ್ ಪರಾಗ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ರಿಶವ್ ದಾಸ್ , ಮುಖ್ತಾರ್ ಹುಸೇನ್ , ಆಕಾಶ್ ದೀಪ್.

ಪಶ್ಚಿಮ ವಲಯ ಪ್ಲೇಯಿಂಗ್ 11: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಪ್ರಿಯಾಂಕ್ ಪಾಂಚಾಲ್ (ನಾಯಕ) , ರಾಹುಲ್ ತ್ರಿಪಾಠಿ , ಸಮರ್ಥ ವ್ಯಾಸ್ , ಶಿವಂ ದುಬೆ , ಕಥನ್ ಪಟೇಲ್ , ಸರ್ಫರಾಝ್ ಖಾನ್ , ಶಮ್ಸ್ ಮುಲಾನಿ , ಅತಿತ್ ಶೇತ್ , ಅರ್ಝಾನ್ ನಾಗವಾಸ್ವಾಲ್ಲಾ , ರಾಜವರ್ಧನ್ ಹಂಗರ್ಗೇಕರ್.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ