Dinesh Karthik: ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ

India vs West Indies T20I: ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್ ಸಿಡಿಸಿದರು. ಇವರ ಈ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಜಿಕೊಂಡರು. ಈ ಸಂದರ್ಭ ಮಾತನಾಡಿದ ಕಾರ್ತಿಕ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Dinesh Karthik: ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ
Dinesh Karthik post-match presentation
Follow us
TV9 Web
| Updated By: Vinay Bhat

Updated on:Jul 30, 2022 | 10:24 AM

ಟೀಮ್ ಇಂಡಿಯಾ ವಿಕೆಟ್ ಕೀಪರ್ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಟಿ20 ಕ್ರಿಕೆಟ್​ನಲ್ಲಿ ತಾನೊಬ್ಬ ಅತ್ಯುತ್ತಮ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಐಪಿಎಲ್ 2022 ರಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತ ಕ್ರಿಕೆಟ್ ತಂಡದಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಕಾರ್ತಿಕ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಶುಕ್ರವಾರ ರಾತ್ರಿ ನಡೆದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಕಾರ್ತಿಕ್ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡು ಕೇವಲ 19 ಎಸೆತಗಳಲ್ಲಿ 41 ರನ್ ಸಿಡಿಸಿದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಲೇ ಟೀಮ್ ಇಂಡಿಯಾ (Team India) ಮೊತ್ತ 20 ಓವರ್​ನಲ್ಲಿ 190 ಕ್ಕೆ ಬಂದುನಿಂತಿತು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಬಾಜಿಕೊಂಡರು. ಈ ಸಂದರ್ಭ ಮಾತನಾಡಿದ ಕಾರ್ತಿಕ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ನನಗೆ ನೀಡಿರುವ ಫಿನಿಶರ್ ಜವಾಬ್ದಾರಿಯನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ. ಇದೊಂದು ಆಸಕ್ತದಾಯಕವಾದ ಪಾತ್ರ. ಇದರಲ್ಲಿ ನೀವು ಸ್ಥಿರವಾಗಿರಲು ಸಾಧ್ಯವಿಲ್ಲ, ಆದರೆ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಪ್ರಭಾವ ಬೀರಬಹುದು. ಇದಕ್ಕಾಗಿ ತಂಡದ ನಾಯಕನ ಮತ್ತು ಕೋಚ್​ನ ಬೆಂಬಲ ಬೇಕು. ಇದು ನನಗೆ ಚೆನ್ನಾಗಿ ಸಿಗುತ್ತಿದೆ. ಪಂದ್ಯದಲ್ಲಿ ವಿಕೆಟ್ ಅನ್ನು ತಿಳಿಯುವುದು ಮುಖ್ಯ. ಕೊನೆಯ 3-4 ಓವರ್ ಬ್ಯಾಟ್ ಮಾಡಲು ಬರುವ ಬ್ಯಾಟರ್ ಚೆಂಡಿನ ಆಕಾರ, ವಿಕೆಟ್, ಚೆಂಡು ಯಾವರೀತಿ ವರ್ತಿಸುತ್ತದೆ ಎಂದು ಅರಿತುಕೊಳ್ಳಬೇಕು. ಸತತವಾಗಿ ಅಭ್ಯಾಸ ಮಾಡುವುದರಿಂದ ಈ ವಿಚಾರ ತಿಳಿಯುತ್ತದೆ,” ಎಂದು ಕಾರ್ತಿಕ್ ಹೇಳಿದ್ದಾರೆ.

ಇನ್ನು ಟೀಮ್ ಇಂಡಿಯ ನಾಯಕ ರೋಹಿತ್ ಶರ್ಮಾ ಮಾತನಾಡಿ, “ಇದು ಕೊಂಚ ಕಠಿಣ ಪಿಚ್ ಎಂಬುದು ತಿಳಿದಿತ್ತು. ಉತ್ತಮ ಆರಂಭ ಪಡೆದುಕೊಳ್ಳುವುದು ತುಂಬಾ ಕಷ್ಟ. ಹೀಗಿದ್ದರೂ ನಮ್ಮ ಬ್ಯಾಟರ್​ಗಳು ಆಡಿ ಫಿನಿಶ್ ಮಾಡಿದ್ದು ಅದ್ಭುತವಾಗಿತ್ತು. ಮೊದಲ 10 ಓವರ್ ಮುಕ್ತಾಯಗೊಂಡಾಗ ನಾವು 190ರ ಅಂಚಿಗೆ ತಲುಪುತ್ತೇವೆ ಎಂದು ಗ್ರಹಿಸಿರಲಿಲ್ಲ. ಕೆಲ ವಿಭಾಗಗಳಲ್ಲಿ ನಾವಿನ್ನೂ ಬಲಿಷ್ಠರಾಗಬೇಕು. ವೆಸ್ಟ್​ ಇಂಡೀಸ್​ನಲ್ಲಿ ಆಡುವುದು ಎಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಯುಎಸ್​ಎ ಇಂದಲೂ ಸಾಕಷ್ಟು ಭಾರತದ ಅಭಿಮಾನಿಗಳು ಪಂದ್ಯ ನೋಡಲು ಬರುತ್ತಾರೆ, ಅದು ಖುಷಿ ನೀಡುತ್ತದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
Dinesh Karthik: ಇದು ಯಾವ ಶಾಟ್?: ಕಾರ್ತಿಕ್ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ನೆಟ್ಟಿಗರು: ವಿಡಿಯೋ
Image
PV Sindhu: ಮೊದಲ ಮ್ಯಾಚ್​ನಲ್ಲೇ ಪಾಕ್ ಆಟಗಾರ್ತಿಗೆ ಮಣ್ಣು ಮುಕ್ಕಿಸಿದ ಪಿವಿ ಸಿಂಧು: ಭರ್ಜರಿ ಗೆಲುವು
Image
CWG 2022: ಕ್ರಿಕೆಟ್​ನಲ್ಲಿ ಸೋತರೂ ಕಾಮನ್​ವೆಲ್ತ್​​ನಲ್ಲಿ ಮೊದಲ ದಿನ ಭಾರತ ಭರ್ಜರಿ ಆರಂಭ
Image
Ind vs Aus: 49 ರನ್​ಗಳಿಗೆ 5 ವಿಕೆಟ್‌ ಉರುಳಿದರೂ ಭಾರತಕ್ಕೆ ಸೋಲು; ಕಣ್ಣೀರಿಟ್ಟ ಹರ್ಮನ್‌ಪ್ರೀತ್‌-ರೇಣುಕಾ..!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಏಕಾಂಗಿಯಾಗಿ ನಿಂತು 15 ಓವರ್​ ವರೆಗೂ ಆಡಿದರು. ಹಿಟ್​ಮ್ಯಾನ್ 44 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಬಾರಿಸಿ 64 ರನ್​ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಫಿನಿಶರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ತಿಕ್ 4 ಫೋರ್, 2 ಸಿಕ್ಸರ್​ನೊಂದಿಗೆ ಅಜೇಯ 41 ಚಚ್ಚಿ ಭಾರತ 20 ಓವರ್​ನಲ್ಲಿ 190 ರನ್ ಕಲೆಹಾಕುವಂತೆ ಮಾಡಿದರು.

191 ರನ್​ಗಳ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಪವರ್ ಪ್ಲೇ ಮುಗಿಯುವ ಹೊತ್ತಿಗೆನೆ ಮುಖ್ಯ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರವೂ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್ ಕಚ್ಚಿ ಆಡುವಲ್ಲಿ ವಿಂಡೀಸ್ ಬ್ಯಾಟರ್​ಗಳು ವಿಫಲರಾದರು. ತಂಡದ ಪರ ಶಮರ್ ಬ್ರೂಕ್ಸ್ 20 ರನ್ ಗಳಿಸಿದ್ದೇ ಹೆಚ್ಚು. 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತಷ್ಟೆ. ಭಾರತ ಪರ ಅರ್ಶ್​​ದೀಪ್, ಬಿಷ್ಣೋಯಿ ಹಾಗೂ ಅಶ್ವಿನ್ ತಲಾ 2 ವಿಕೆಟ್ ಪಡೆದರು.

Published On - 10:24 am, Sat, 30 July 22

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ