Virat Kohli: ನಾನು ಯಾರಿಗೂ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ..!
India vs South Africa 3rd Test: ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯವು ಮಂಗಳವಾರದಿಂದ ಕೇಪ್ ಟೌನ್ನಲ್ಲಿ ಶುರುವಾಗಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಗಲಿದೆ.
ಟೀಮ್ ಇಂಡಿಯಾ (Team India) ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿ ವರ್ಷಗಳು ಕಳೆದಿವೆ. 2019 ರಲ್ಲಿ ಸೆಂಚುರಿ ಸಿಡಿಸಿದ್ದ ಕೊಹ್ಲಿ ಆ ಬಳಿಕ ಶತಕ ಸಂಭ್ರಮ ಮಾಡಿರಲಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆಗಳು ಮೂಡಲಾರಂಭಿಸಿವೆ. ಅದರಲ್ಲೂ ಕೊನೆಯ 14 ಟೆಸ್ಟ್ ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 652 ರನ್‌ಗಳನ್ನು ಮಾತ್ರ. ಅಂದರೆ ಪ್ರಸ್ತುತ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 26 ಕ್ಕೆ ಬಂದು ನಿಂತಿದೆ. ಇದೀಗ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ದದ 3ನೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿಗೆ ತಮ್ಮ ಫಾರ್ಮ್ ಬಗ್ಗೆ ಕೇಳಲಾಗಿತ್ತು.
ಈ ಬಗ್ಗೆ ಮಾತನಾಡಿದ ಕೊಹ್ಲಿ, ಈ ಪ್ರಶ್ನೆ ನಾನು ಬಹಳ ದಿನಗಳಿಂದ ಕೇಳುತ್ತಿದ್ದೇನೆ. ಇದು ಮೊದಲ ಬಾರಿ ಅಲ್ಲ. ನಾನು ಮಾಡಿದ ದಾಖಲೆಗಳಿಗೆ ಹೋಲಿಕೆಯಾಗುತ್ತಲೇ ಇರುತ್ತೇನೆ. ನಾನು ತಂಡಕ್ಕಾಗಿ ಉತ್ತಮ ಪ್ರದರ್ಶನವನ್ನು ಮುಂದುವರಿಸಲು ಬಯಸುತ್ತೇನೆ. ಹೊರಗೆ ಏನಾಗುತ್ತಿದೆ. ನನ್ನ ಬಗ್ಗೆ ಏನು ಹೇಳಲಾಗುತ್ತಿದೆ ಎಂಬುದರ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ. ಯಾರಿಗೂ ನಾನು ಏನೆಂದು ಸಾಬೀತುಪಡಿಸುವ ಅವಶ್ಯಕೆತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹೊರಗಿನ ಪ್ರಪಂಚವು ನನ್ನನ್ನು ನೋಡುವ ಕಣ್ಣುಗಳಿಂದ ನಾನು ನನ್ನನ್ನು ನೋಡುವುದಿಲ್ಲ. ನನ್ನನ್ನು ಹೋಲಿಸಿದ ಮಾನದಂಡಗಳನ್ನು ನಾನೇ ಹೊಂದಿಸಿಕೊಂಡಿದ್ದೇನೆ. ಎಲ್ಲರಿಗಿಂತ ಹೆಚ್ಚಾಗಿ ನಾನು ತಂಡಕ್ಕಾಗಿ ಅತ್ಯುತ್ತಮವಾದದ್ದನ್ನು ಮಾಡಲು ಬಯಸುತ್ತೇನೆ. ಆಟದಲ್ಲಿ ಕೆಲವೊಮ್ಮೆ ನೀವು ಬಯಸಿದ ರೀತಿಯಲ್ಲಿ ನಡೆಯುವುದಿಲ್ಲ. ಆದರೆ ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ನಾನು ಬ್ಯಾಟರ್ ಆಗಿ ಬಹಳ ಮುಖ್ಯವಾದ ಕ್ಷಣಗಳಲ್ಲಿ ಭಾಗಿಯಾಗಿದ್ದೇನೆ ಎಂದು ಕೊಹ್ಲಿ ಹೇಳಿದರು.
ಕಳಪೆ ಫಾರ್ಮ್‌ನ ಬಗ್ಗೆ ಮಾತನಾಡುತ್ತಿರುವವರಿಗೆ ಮತ್ತು ಅಂಕಿಅಂಶಗಳನ್ನು ನೋಡುವ ವ್ಯಕ್ತಿಗಳಿಗೆ ಸೇರಿದಂತೆ ನಾನು ಯಾರಿಗೂ ನನ್ನುನ್ನು ನಾನು ಸಾಬೀತುಪಡಿಸುವ ಅಗತ್ಯವಿಲ್ಲ. ನಾನು ಈಗ ಫಾರ್ಮ್ ಅನ್ನು ಮರಳಿ ಪಡೆಯಲಷ್ಟೇ ಗಮನ ಕೇಂದ್ರೀಕರಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಡುವಣ 3ನೇ ಟೆಸ್ಟ್ ಪಂದ್ಯವು ಮಂಗಳವಾರದಿಂದ ಕೇಪ್ ಟೌನ್ನಲ್ಲಿ ಶುರುವಾಗಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಹೀಗಾಗಿ ಅಂತಿಮ ಪಂದ್ಯವು ಕೊಹ್ಲಿಗೂ ಹಾಗೂ ಟೀಮ್ ಇಂಡಿಯಾ ಪಾಲಿಗೂ ಮಹತ್ವದ ಪಂದ್ಯ ಎನಿಸಿಕೊಂಡಿದೆ.
ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡ ಹೀಗಿದೆ: ಕೆಎಲ್ ರಾಹುಲ್ , ಮಯಾಂಕ್ ಅಗರ್ವಾಲ್ , ಚೇತೇಶ್ವರ್ ಪೂಜಾರ , ಅಜಿಂಕ್ಯ ರಹಾನೆ , ವಿರಾಟ್ ಕೊಹ್ಲಿ (ನಾಯಕ) , ರಿಷಬ್ ಪಂತ್ (ವಿಕೆಟ್ ಕೀಪರ್ ) , ರವಿಚಂದ್ರನ್ ಅಶ್ವಿನ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ , ಉಮೇಶ್ ಯಾದವ್ , ವೃದ್ಧಿಮಾನ್ ಸಹಾ , ಜಯಂತ್ ಯಾದವ್ , ಶ್ರೇಯಸ್ ಅಯ್ಯರ್ , ಹನುಮ ವಿಹಾರಿ , ಪ್ರಿಯಾಂಕ್ ಪಾಂಚಾಲ್ , ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(‘Don’t need to prove anything to anyone’- Virat Kohli)