ಇಂಜುರಿಂದ ಗುಣಮುಖರಾದ ರಹಾನೆಗೆ ನಾಯಕತ್ವ; ಶ್ರೇಯಸ್, ಶಾರ್ದೂಲ್, ಜೈಸ್ವಾಲ್​ಗೂ ತಂಡದಲ್ಲಿ ಸ್ಥಾನ

Edited By:

Updated on: Aug 24, 2022 | 8:41 PM

Duleep Trophy 2022: ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವಾಗ ಮಂಡಿರಜ್ಜು ಗಾಯಗೊಂಡಿದ್ದ ರಹಾನೆ ಇದೀಗ ಮೈದಾನಕ್ಕೆ ಮರಳಲಿದ್ದಾರೆ.

1 / 5
ಇಂಜುರಿಯಿಂದ ಗುಣಮುಖರಾದ ರಹಾನೆಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ. ರಹಾನೆ ನಾಯಕತ್ವದಲ್ಲಿ ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್ ಮುಂತಾದವರು ಆಡಲಿದ್ದಾರೆ. ಅಷ್ಟಕ್ಕೂ ಮುಂದಿನ ತಿಂಗಳು ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ರಹಾನೆ ಪಶ್ಚಿಮ ವಲಯದ ನಾಯಕತ್ವ ವಹಿಸಲಿದ್ದಾರೆ.

2 / 5

ಭಾರತದ ಮಾಜಿ ವೇಗದ ಬೌಲರ್ ಸಲಿಕ್ ಅಂಕೋಲಾ ಅವರನ್ನೊಳಗೊಂಡ ವಲಯ ಆಯ್ಕೆ ಸಮಿತಿಯ ಪಶ್ಚಿಮ ವಲಯ ತಂಡದಲ್ಲಿ ಅಯ್ಯರ್, ಠಾಕೂರ್ ಕೂಡ ಆಯ್ಕೆಯಾಗಿದ್ದಾರೆ.

3 / 5

ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ಪ್ರಕಾರ, ಮುಂಬೈನ 9 ಆಟಗಾರರು ಪಶ್ಚಿಮ ವಲಯ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಮುಂಬೈ ತಂಡ ರಣಜಿ ಟ್ರೋಫಿಯ ಫೈನಲ್ ತಲುಪಿತ್ತು. ಆದರೆ ಮಧ್ಯಪ್ರದೇಶ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

4 / 5

ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವಾಗ ಮಂಡಿರಜ್ಜು ಗಾಯಗೊಂಡಿದ್ದ ರಹಾನೆ ಇದೀಗ ಮೈದಾನಕ್ಕೆ ಮರಳಲಿದ್ದಾರೆ.

5 / 5

ಮುಂಬೈ ಆರಂಭಿಕ ಆಟಗಾರ ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಶಮ್ಸ್ ಮುಲಾನಿ, ರಣಜಿ ಟ್ರೋಫಿ ಸೆಮಿಫೈನಲಿಸ್ಟ್ ಹಾರ್ದಿಕ್ ತೋಮರ್, ರಾಹುಲ್ ತ್ರಿಪಾಠಿ ಅವರಿಗೆ ತಂಡದಲ್ಲಿ ಆಯ್ಕೆದಾರರು ಅವಕಾಶ ನೀಡಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us