Duleep Trophy 2024: ರಾಹುಲ್ ಅರ್ಧಶತಕ ವ್ಯರ್ಥ; ಬೆಂಗಳೂರಿನಲ್ಲಿ ಗೆದ್ದ ಭಾರತ ಬಿ ತಂಡ

Duleep Trophy 2024: ಬೆಂಗಳೂರಿನಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ-ಬಿ ತಂಡವು, ಭಾರತ-ಎ ತಂಡವನ್ನು 76 ರನ್‌ಗಳಿಂದ ಸೋಲಿಸಿತು. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.

Duleep Trophy 2024: ರಾಹುಲ್ ಅರ್ಧಶತಕ ವ್ಯರ್ಥ; ಬೆಂಗಳೂರಿನಲ್ಲಿ ಗೆದ್ದ ಭಾರತ ಬಿ ತಂಡ
ಭಾರತ ಎ- ಭಾರತ ಬಿ ತಂಡಗಳು
Follow us
ಪೃಥ್ವಿಶಂಕರ
|

Updated on:Sep 08, 2024 | 4:59 PM

ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ಪಂದ್ಯಗಳು ಮುಗಿದಿವೆ. ಈ ಸುತ್ತಿನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಡಿ ತಂಡ, ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಸಿ ತಂಡದ ವಿರುದ್ಧ ಸೋಲನುಭವಿಸಿತ್ತು. ಇನ್ನೊಂದೆಡೆ ಶುಭಮನ್ ಗಿಲ್ ನಾಯಕತ್ವದ ಭಾರತ ಎ ತಂಡ, ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ ಬಿ ತಂಡದ ವಿರುದ್ಧ ಸೋತಿದೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು ಅಭಿಮನ್ಯು ಈಶ್ವರನ್ ನಾಯಕತ್ವದ ಭಾರತ-ಬಿ ತಂಡವು, ಭಾರತ-ಎ ತಂಡವನ್ನು 76 ರನ್‌ಗಳಿಂದ ಸೋಲಿಸಿತು. ತಂಡದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕದ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ. ಇನ್ನು ಈ ಪಂದ್ಯದಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಗಿಲ್ ನಾಯಕನಾಗಿ ಹಾಗೂ ಆಟಗಾರನಾಗಿ ಎರಡೂ ವಿಭಾಗಗಳಲ್ಲೂ ವಿಫಲರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಕೊನೆಯ ದಿನದಂದು, ಭಾರತ-ಬಿ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 150 ರನ್​ಗಳಿಗೆ 6 ವಿಕೆಟ್‌ ಕಳೆದುಕೊಂಡು ದಿನದಾಟವನ್ನು ಮುಂದುವರೆಸಿತು. ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದರೂ ಉಳಿದ 4 ವಿಕೆಟ್‌ಗಳನ್ನು ಕಬಳಿಸಲು ಭಾರತ ಎ ತಂಡ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಭಾರತ ಎ ಪರ ಮಿಂಚಿದ ವೇಗದ ಬೌಲರ್ ಆಕಾಶ್ ದೀಪ್ ಉಳಿದ ಈ 4 ವಿಕೆಟ್‌ಗಳಲ್ಲಿ 3 ವಿಕೆಟ್​ಗಳು ಪಡೆದು ಭಾರತ-ಬಿ ತಂಡವನ್ನು 181 ರನ್‌ಗಳಿಗೆ ಔಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಆಕಾಶ್, ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮುಶೀರ್ ದಾಖಲೆಯ ಇನ್ನಿಂಗ್ಸ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬಿ ತಂಡ 321 ರನ್ ಕಲೆಹಾಕಿತು. ತಂಡದ ಪರ ಮುಶೀರ್ ಖಾನ್ 181 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿದರು. ಇವರಿಗೆ ಸಾಥ್ ನೀಡಿದ ವೇಗಿ ನವದೀಪ್ ಸೈನಿ 56 ರನ್​ಗಳ ಇನ್ನಿಂಗ್ಸ್ ಆಡಿದಲ್ಲದೆ, ಮುಶೀರ್ ಜೊತೆ ದ್ವಿಶತಕದ ಜೊತೆಯಾಟ ನಡೆಸಿದರು. ಇವರಿಬ್ಬರ ಆಟದಿಂದಾಗಿ ಭಾರತ ಬಿ ತಂಡ ಇಷ್ಟು ಮೊತ್ತ ಕಲೆಹಾಕಲು ಸಾಧ್ಯವಾಯಿತು.ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡ 231 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಯಾರೊಬ್ಬರು ಅರ್ಧಶತಕದ ಇನ್ನಿಂಗ್ಸ್ ಆಡಲಿಲ್ಲ. ಕನ್ನಡಿಗ ಕೆಲ್ ರಾಹುಲ್ ತಂಡದ ಪರ ಅತ್ಯಧಿಕ 37 ರನ್​ಗಳ ಇನ್ನಿಂಗ್ಸ್ ಆಡಿದರು.

ಮಿಂಚಿದ ಪಂತ್

ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 90 ರನ್‌ಗಳ ಮುನ್ನಡೆ ಪಡೆದುಕೊಂಡ ಭಾರತ ಬಿ ತಂಡ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 184 ರನ್​ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್​ನಲ್ಲಿ ಸರ್ಫರಾಜ್ 46 ರನ್ ಬಾರಿಸಿದರೆ, ರಿಷಬ್ ಪಂತ್ 61 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಉಳಿದಂತೆ ಯಾರೂ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ.

ಸ್ಟಾರ್ ಕ್ರಿಕೆಟಿಗರು ಫೇಲ್

ಅಂತಿಮವಾಗಿ, ಗೆಲ್ಲಲು 275 ರನ್‌ಗಳ ಗುರಿ ಪಡೆದ ಭಾರತ ಎ ತಂಡಕ್ಕೆ ಈ ಗುರಿಯೇನು ಕಷ್ಟಕರವಾಗಿರಲಿಲ್ಲ. ಏಕೆಂದರೆ ತಂಡದಲ್ಲಿ ಶುಭಮನ್ ಗಿಲ್, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಶಿವಂ ದುಬೆಯಂತಹ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಿದ್ದರು. ಹೀಗಾಗಿ ಭಾರತ ಎ ತಂಡ ಗೆಲುವು ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಆಗಲಿಲ್ಲ. ತಂಡದ ಮೊತ್ತ 99 ರನ್‌ ಆಗುವಷ್ಟರಲ್ಲಿ ಮಯಾಂಕ್, ಶುಭ್‌ಮನ್ ಗಿಲ್, ರಿಯಾನ್ ಮತ್ತು ಶಿವಂ ಸೇರಿದಂತೆ 6 ಪ್ರಮುಖ ವಿಕೆಟ್‌ಗಳು ಪತನಗೊಂಡವು. ಅಂತಹ ಪರಿಸ್ಥಿತಿಯಲ್ಲಿ, ತಂಡದ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಕೆಎಲ್ ರಾಹುಲ್ ಮೇಲೆ ನಿರೀಕ್ಷೆ ಹೆಚ್ಚಿತ್ತು. ರಾಹುಲ್​ಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ರಾಹುಲ್ ಅರ್ಧಶತಕದ ಇನ್ನಿಂಗ್ಸ್

ಈ ನಿಟ್ಟಿನಲ್ಲಿ ರಾಹುಲ್ ಕೂಡ ಸಾಕಷ್ಟು ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ದೀರ್ಘಕಾಲ ಕ್ರೀಸ್​ನಲ್ಲಿ ಇದ್ದರಾದರೂ ರಾಹುಲ್​ಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿರಲಿಲ್ಲ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅದೇ ರೀತಿ ಬ್ಯಾಟ್ ಬೀಸಿದ ರಾಹುಲ್ ಅರ್ಧಶತಕ ಸಿಡಿಸಿದರಾದರೂ, ಆ ನಂತರವೇ ತಮ್ಮ ವಿಕೆಟ್ ಒಪ್ಪಿಸಿದರು. ರಾಹುಲ್ ವಿಕೆಟ್ ಪತನದೊಂದಿಗೆ ಭಾರತ ಎ ತಂಡದ ಸೋಲು ಕೂಡ ಖಚಿತವಾಯಿತು. ಕೊನೆಯಲ್ಲಿ ಆಕಾಶ್ ದೀಪ್ 43 ರನ್ ಸಿಡಿಸಿದರಾದರೂ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Sun, 8 September 24

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ