AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿದ್ದಾನೆ, ಅದಕ್ಕೆ ಬೊಗಳ್ತಿದ್ದಾನೆ..!

Irfan Pathan - Shahid Afridi: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರೊಂದಿಗಿನ ವಿವಾದದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ತನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅಫ್ರಿದಿಯನ್ನು ಹೇಗೆ ಎದುರಾಕಿಕೊಂಡಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿದ್ದಾನೆ, ಅದಕ್ಕೆ ಬೊಗಳ್ತಿದ್ದಾನೆ..!
Irfan Pathan - Shahid Afridi
ಝಾಹಿರ್ ಯೂಸುಫ್
|

Updated on:Aug 16, 2025 | 12:06 PM

Share

ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಹಾಗೂ ಪಾಕಿಸ್ತಾನ್ ಕ್ರಿಕೆಟಿಗರ ನಡುವಣ ಜಿದ್ದಾಟ ಎಂದಿಗೂ ಮುಗಿಯದ ಕಥೆ. ಈ ಹಿಂದೆ ಮೈದಾನದಲ್ಲಿ ಕಂಡು ಬರುತ್ತಿದ್ದ ವಾಕ್ಸಮರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿದೆ. ಅದರಲ್ಲೂ ಭಾರತ-ಪಾಕಿಸ್ತಾನ್ ನಡುವಣ ಪಂದ್ಯಗಳ ಫಲಿತಾಂಶದ ಬೆನ್ನಲ್ಲೇ ಪಾಕಿಗಳ ಕಾಲೆಳೆಯುವಲ್ಲಿ ಇರ್ಫಾನ್ ಪಠಾಣ್ ನಿಸ್ಸೀಮರು. ಇಂತಹದೊಂದು ಜಿದ್ದಾಟ ಶುರುವಾಗಿದ್ದು 2006 ರಲ್ಲಿ ಎಂಬುದು ಅನೇಕರಿಗೆ ಗೊತ್ತಿಲ್ಲ.

2006 ರಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದಾಗ ಇರ್ಫಾನ್ ಫಠಾಣ್ ಕೂಡ ಭಾರತ ತಂಡದಲ್ಲಿದ್ದರು. ಈ ವೇಳೆ ನಡೆದ ಕೆಲ ಕುತೂಹಲಕಾರಿ ಘಟನೆಗಳ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

2006 ರಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ಎರಡೂ ತಂಡಗಳ ಆಟಗಾರರು ಕರಾಚಿಯಿಂದ ಲಾಹೋರ್‌ಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಶಾಹಿದ್ ಅಫ್ರಿದಿ ಯುವ ಆಟಗಾರನಾಗಿದ್ದ ಇರ್ಫಾನ್ ಪಠಾಣ್ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದರು.

ಸುಮ್ಮನೆ ಕೂತಿದ್ದ ಇರ್ಫಾನ್ ಪಠಾಣ್ ಅವರ ತಲೆ ಮೇಲೆ ಕೈ ಇಟ್ಟು ಹೇರ್​ ಸ್ಟೈಲ್ ಅನ್ನು ಹಾಳು ಮಾಡಿದ್ದ ಅಫ್ರಿದಿ ಹೇಗಿದ್ದೀಯ ಮಗು?’ ಎಂದು ಕೇಳಿದರು. ಈ ವೇಳೆ ಕೋಪಗೊಂಡ ನಾನು,ತು ಕಬ್ ಸೆ ಮೇರಾ ಬಾಪ್ ಬನ್ ಗಯಾ? (ನೀನು ಯಾವಾಗಿನಿಂದ ನನ್ನ ತಂದೆಯಾದಿರಿ?)’ ಎಂದು ಕೇಳಿದ್ದೆ. ಇದೇ ವೇಳೆ ಅಫ್ರಿದಿ ನನ್ನನ್ನು ಕೆಲ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಇದು ಅಲ್ಲಿಗೆ ಮುಗಿಯಲಿಲ್ಲ. ನಾನು ವಿಮಾನದಲ್ಲಿ ಇತ್ತ ಕಡೆ ಕೂತಿದ್ದರೆ, ಅತ್ತ ಕಡೆ ಅಫ್ರಿದಿ ಹಾಗೂ ಅಬ್ದುಲ್ ರಝಾಕ್ ಕುಳಿತಿದ್ದರು. ಇದೇ ವೇಳೆ ನಾನು ರಝಾಕ್ ಅವರಲ್ಲಿ ಪಾಕಿಸ್ತಾನದಲ್ಲಿ ಲಭ್ಯವಿರುವ ವಿವಿಧ ರೀತಿಯ ಮಾಂಸದ ಬಗ್ಗೆ ಕೇಳಿದೆ. ಅವರು ವಿವಿಧ ರೀತಿಯ ಮಾಂಸದ ಬಗ್ಗೆ ಹೇಳಿದರು.

ಇದೇ ವೇಳೆ ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ಇದನ್ನು ಕೇಳಿ ರಝಾಕ್ ಆಘಾತಕ್ಕೊಳಗಾದರು. ಅಲ್ಲದೆ ಈ ಪ್ರಶ್ನೆ ಯಾಕೆ ಎಂದು ಮರುಪ್ರಶ್ನಿಸಿದರು.

ಇಲ್ಲಾ, ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿರಬೇಕು. ಅದಕ್ಕಾಗಿಯೇ ಅವರು ಬೊಗಳುತ್ತಲೇ ಇರುತ್ತಾರೆ ಎಂದು ನಾನು ಮರು ಉತ್ತರ ನೀಡಿದ್ದೆ. ಇದರಿಂದ ಅಫ್ರಿದಿ ಮತ್ತಷ್ಟು ಕೋಪಗೊಂಡರು. ಇದಾಗ್ಯೂ ನಾನು ನೀಡಿದ ಕೌಂಟರ್ ಅಟ್ಯಾಕ್​ಗೆ ಶಾಹಿದ್ ಅಫ್ರಿದಿ ತುಟಿಕ್ ಪಿಟಿಕ್ ಅನ್ನಲಿಲ್ಲ ಎಂದು ಇರ್ಫಾನ್ ಪಠಾಣ್ 19 ವರ್ಷಗಳ ಹಳೆಯ ಘಟನೆಯನ್ನು ಮೆಲುಕು ಹಾಕಿದರು.

ಇದನ್ನೂ ಓದಿ: IPL 2026: ಐಪಿಎಲ್ ಟ್ರೇಡ್ ವಿಂಡೋ ಎಂದರೇನು?

ಅಂದಿನ ಘಟನೆಯಿಂದಾಗಿ ಅಫ್ರಿದಿ ಹಾಗೂ ನನ್ನ ನಡುವೆ ಸ್ನೇಹವೇ ಮೂಡಲಿಲ್ಲ. ಈ ಜಿದ್ದಾಜಿದ್ದು ಮೈದಾನದಲ್ಲೂ ಮುಂದುವರೆಯಿತು. ಈ ಪೈಪೋಟಿ ನಡುವೆ ನಾನು ಶಾಹಿದ್ ಅಫ್ರಿದಿಯನ್ನು 11 ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಇದೇ ವೇಳೆ ಇರ್ಫಾನ್ ಪಠಾಣ್ ಸ್ಮರಿಸಿದರು.

Published On - 11:55 am, Sat, 16 August 25

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ