ENG vs NZ: ಕಿವೀಸ್ ಕಿವಿ ಹಿಂಡಿದ ಆಂಗ್ಲರು; ಕಾಂಗರೂಗಳು ಕೊನೆಯ ಪಂದ್ಯ ಗೆದ್ದರೂ ಸೇಮಿಸ್​ಗೇರುವುದು ಕಷ್ಟ..!

ENG vs NZ: ಟಿ20 ವಿಶ್ವಕಪ್​ನಲ್ಲಿ ಇಂದು ನಡೆದ ಬಲಿಷ್ಠ ತಂಡಗಳ ನಡುವಿನ ಕದನದಲ್ಲಿ ಅಂತಿಮವಾಗಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದರೊಂದಿಗೆ ಟಿ20 ವಿಶ್ವಕಪ್‌ನಿಂದ ಔಟಾಗುವುದರಿಂದ ಬದುಕುಳಿದಿದೆ.

ENG vs NZ: ಕಿವೀಸ್ ಕಿವಿ ಹಿಂಡಿದ ಆಂಗ್ಲರು; ಕಾಂಗರೂಗಳು ಕೊನೆಯ ಪಂದ್ಯ ಗೆದ್ದರೂ ಸೇಮಿಸ್​ಗೇರುವುದು ಕಷ್ಟ..!
ನ್ಯೂಜಿಲೆಂಡ್ ಮಣಿಸಿದ ಇಂಗ್ಲೆಂಡ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 01, 2022 | 5:39 PM

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಇಂದು ನಡೆದ ಬಲಿಷ್ಠ ತಂಡಗಳ ನಡುವಿನ ಕದನದಲ್ಲಿ ಅಂತಿಮವಾಗಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ (England beat New Zealand) ತಂಡವನ್ನು ಸೋಲಿಸುವುದರೊಂದಿಗೆ ಟಿ20 ವಿಶ್ವಕಪ್‌ನಿಂದ ಔಟಾಗುವುದರಿಂದ ಬದುಕುಳಿದಿದೆ. ಜೊತೆಗೆ ಇಂಗ್ಲೆಂಡ್ ಗೆಲುವಿನೊಂದಿಗೆ ಹಾಲಿ ಚಾಂಪಿಯನ್​ಗಳಾದ ಆಸ್ಟ್ರೇಲಿಯಾಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಈ ಗೆಲುವಿನೊಂದಿಗೆ ಜೋಸ್ ಬಟ್ಲರ್ (Jos Buttler) ತಂಡ ಗುಂಪು 1 ರಲ್ಲಿ ಎರಡನೇ ಸ್ಥಾನಕ್ಕೆ ಏರಿದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಅವರು ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ. ಎಂದಿನಂತೆ ಅಗ್ರಸ್ಥಾನವನ್ನು ನ್ಯೂಜಿಲೆಂಡ್ ಆಕ್ರಮಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ತಂಡ ಕಿವೀಸ್ ತಂಡಕ್ಕೆ 180 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಇದಕ್ಕೆ ಉತ್ತರವಾಗಿ ಕಿವೀಸ್ ತಂಡ 20 ಓವರ್​ಗಳಲ್ಲಿ 6 ವಿಕೆಟ್​ಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಇಂಗ್ಲೆಂಡ್ ತಂಡ 20 ರನ್​ಗಳಿಂದ ಜಯ ಸಾಧಿಸಿತು.

180 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳಿಗೆ ಆಂಗ್ಲರ ದಾಳಿಯ ಮುಂದೆ ಸರಾಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಡೆವೊನ್ ಕಾನ್ವೆ ಎರಡನೇ ಓವರ್‌ನಲ್ಲಿ ಕೇವಲ 3 ರನ್‌ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಇದಾದ ನಂತರವೂ ಚೇತರಿಸಿಕೊಳ್ಳಲು ಸಾಧ್ಯವಾಗದ ತಂಡ ಫಿನ್ ಅಲೆನ್ ರೂಪದಲ್ಲಿ 28 ರನ್​ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು.

ಫಿಲಿಪ್ಸ್ ಏಕಾಂಗಿ ಹೋರಾಟ

2 ವಿಕೆಟ್‌ಗಳ ಪತನದ ಬಳಿಕ ಕೇನ್ ವಿಲಿಯಮ್ಸನ್ ಬಳಗ ಸಂಕಷ್ಟಕ್ಕೆ ಸಿಲುಕಿತ್ತು. ತಂಡವನ್ನು ತೊಂದರೆಯಿಂದ ಪಾರು ಮಾಡಲು, ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್ ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿದರು. ಜೊತೆಗೆ ತಂಡದ ಸ್ಕೋರ್ ಅನ್ನು 119 ರನ್‌ಗಳಿಗೆ ಕೊಂಡೊಯ್ದರು. ಆದರೆ ವಿಲಿಯಮ್ಸನ್ 40 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ ಸ್ವಲ್ಪ ಸಮಯದ ನಂತರ ಜೇಮ್ಸ್ ನೀಶಮ್ ಕೂಡ ಔಟಾದರು. ಈ ವಿಕೆಟ್​ಗಳ ಬಳಿಕ ಏಕಾಂಗಿ ಹೋರಾಟ ಮುಂದುವರೆಸಿದ ಫಿಲಿಪ್ಸ್ 36 ಎಸೆತಗಳಲ್ಲಿ 62 ರನ್ ಸಿಡಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಬಳಿಕ ಕಿವೀಸ್ ತಂಡಕ್ಕೆ ಆಂಗ್ಲರಿಗೆ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಗಿಲ್ ಸಿಡಿಲಬ್ಬರದ ಶತಕ; ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಕರ್ನಾಟಕ ಔಟ್..!

ಬಟ್ಲರ್ ಮತ್ತು ಹೇಲ್ಸ್ ಉತ್ತಮ ಜೊತೆಯಾಟ

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್ ಗಳಿಸಿತು. ಇವರಿಬ್ಬರು ಇಂಗ್ಲೆಂಡ್‌ಗೆ ಬಲಿಷ್ಠ ಆರಂಭ ನೀಡಿ 81 ರನ್ ಜೊತೆಯಾಟ ನಡೆಸಿದರು. ಹೇಲ್ಸ್ ರೂಪದಲ್ಲಿ ಇಂಗ್ಲೆಂಡ್​ಗೆ 11ನೇ ಓವರ್​ನಲ್ಲಿ ಮೊದಲ ಪೆಟ್ಟು ಬಿದ್ದಿತು. ಇದರ ನಂತರ ಬಟ್ಲರ್‌ಗೆ ಮೊಯಿನ್ ಅಲಿ ಬೆಂಬಲ ಸಿಕ್ಕಿತು, ಆದರೆ ಇಬ್ಬರ ನಡುವಿನ ಜೊತೆಯಾಟ 108 ರನ್‌ಗಳಿಗೆ ಅಂತ್ಯಗೊಂಡಿತು. ಎರಡನೇ ವಿಕೆಟ್ ರೂಪದಲ್ಲಿ ಪೆವಿಲಿಯನ್​ಗೆ ಮರಳಿದ ಮೊಯಿನ್ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು.

ಆರಂಭಿಕರನ್ನು ಹೊರತುಪಡಿಸಿ ಮಿಕ್ಕವರು ಫೇಲ್

ಅಲಿ ವಿಕೆಟ್ ಬಳಿಕ ಜೊತೆಯಾದ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ತಂಡವನ್ನು 153 ರನ್‌ಗಳಿಗೆ ಕೊಂಡೊಯ್ದರು. ಆದರೆ ಲಿವಿಂಗ್‌ಸ್ಟೋನ್ ಸಹ 20 ರನ್​ಗಳಿಗೆ ಸುಸ್ತಾಗಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಬ್ರೂಕ್​ ಕೂಡ 7 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಕೊನೆಗೊಳಿಸಿದರು. ಬಟ್ಲರ್ ರೂಪದಲ್ಲಿ ಇಂಗ್ಲೆಂಡ್ 162 ರನ್‌ಗಳಿಗೆ ಐದನೇ ಹೊಡೆತವನ್ನು ಅನುಭವಿಸಿತು. ಬೆನ್ ಸ್ಟೋಕ್ಸ್ ಕೂಡ ಇನ್ನಿಂಗ್ಸ್‌ಗೆ ವೇಗ ನೀಡಲು ಸಾಧ್ಯವಾಗದೆ ಕೊನೆಯ ಓವರ್‌ನ 5 ನೇ ಎಸೆತದಲ್ಲಿ ಔಟಾದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 45 ರನ್ ನೀಡಿ 2 ವಿಕೆಟ್ ಪಡೆದರು.

ಕಾಂಗರೂಗಳಿಗೆ ಸಂಕಷ್ಟ

ಈಗ ಮೊದಲನೇ ಗುಂಪಿನಲ್ಲಿ ಟಾಪ್ 3 ರಲ್ಲಿ ಸ್ಥಾನ ಪಡೆದಿರುವ ತಂಡಗಳಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, ಕಾಂಗರೂಗಳಿಗೆ ಈಗ ಟೂರ್ನಿಯಿಂದ ಹೊರಬೀಳುವ ಆತಂಕ ಶುರುವಾಗಿದೆ. ಈ ಮೂರು ತಂಡಗಳು ಈಗ ತಲಾ 4 ಪಂದ್ಯಗಳನ್ನಾಡಿದ್ದು, ಕೊನೆಯ ಪಂದ್ಯವನ್ನು ಗೆಲ್ಲುವ ತಂಡಗಳಿಗೆ ಸೇಮಿಸ್ ಟಿಕೆಟ್ ಖಚಿತವಾಗಲಿದೆ. ಇದರಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಕೊನೆಯ ಪಂದ್ಯ ಗದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಹೋಗಲಿದೆ. ಹಾಗಾಗಿ ಕಾಂಗರೂಗಳು ತನ್ನ ಕೊನೆಯ ಪಂದ್ಯವನ್ನು ಬೃಹತ್ ಅಂತರದಲ್ಲಿ ಗೆಲ್ಲಬೇಕು. ಇದರ ಜೊತೆಗೆ ಮೊದಲೆರಡು ಸ್ಥಾನಗಳಲ್ಲಿರುವ ಯಾವುದಾದರೂ ಒಂದು ತಂಡ ಮುಂದಿನ ಪಂದ್ಯದಲ್ಲಿ ಸೋಲಬೇಕು ಅಥವಾ ಈ ಉಭಯ ತಂಡಗಳ ಪಂದ್ಯ ಮಳೆಯಿಂದ ರದ್ದಾಗಬೇಕು ಆಗ ಮಾತ್ರ ಕಾಂಗರೂಗಳು ಸೆಮಿಫೈನಲ್​ಗೇರಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Tue, 1 November 22

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?