
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿದ್ದ ಇಂಗ್ಲೆಂಡ್ ತಂಡದಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ತರಬೇತಿ ನೀಡುತ್ತಿದ್ದ ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ( Brendon McCullum) ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಹಲವಾರು ಸ್ಮರಣೀಯ ಗೆಲುವುಗಳಿಗೆ ಹಾಗೆಯೇ ಹಲವಾರು ಹೀನಾಯ ಸೋಲುಗಳಿಗೆ ಮುನ್ನಡೆಸಿದ್ದರು. ಇದೀಗ ಟೆಸ್ಟ್ ತಂಡದ ಕೋಚ್ ಆಗಿ ತಮ್ಮ ಹದಿನಾಲ್ಕು ವರ್ಷದ ಪಯಣಕ್ಕೆ ಮೆಕಲಮ್ ಅಂತ್ಯ ಹಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಬಾಝ್ ಬಾಲ್ ಕ್ರಿಕೆಟ್ ಕೂಡ ಯುಗಾಂತ್ಯವಾಗಿದೆ ಎನ್ನಬಹುದು. ಆದಾಗ್ಯೂ ಮೆಕಲಮ್ ಟೆಸ್ಟ್ ತಂಡದಿಂದ ದೂರ ಸರಿದರೂ ಏಕದಿನ ಹಾಗೂ ಟಿ20 ತಂಡಕ್ಕೆ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಕೋಚ್ ಆಗಿ ಹೆಚ್ಚು ಅನುಭವವಿಲ್ಲದಿದ್ದರೂ ಮೆಕಲಮ್‌ಗೆ 2012 ರಲ್ಲಿ ಕ್ರಿಸ್ ಸಿಲ್ವರ್‌ವುಡ್ ಅವರಿಂದ ತೆರವಾದ ಹುದ್ದೆಯನ್ನು ಮೆಕಲಮ್ ವಹಿಸಿಕೊಂಡರು. ಮೆಕಲಮ್ ಅವರ ಆಕ್ರಮಣಕಾರಿ ವಿಧಾನ ಇಂಗ್ಲೆಂಡ್ ತಂಡದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಆಟದ ಶೈಲಿಯನ್ನು ಪರಿವರ್ತಿಸಿದ ಕೀರ್ತಿ ಮೆಕಲಮ್‌ಗೆ ಸಲ್ಲುತ್ತದೆ. ಮೆಕಲಮ್ ಅವರ ವಿಧಾನವು ಆರಂಭದಲ್ಲಿ ಇಂಗ್ಲೆಂಡ್ ತಂಡಕ್ಕೆ ಪ್ರಯೋಜನವನ್ನು ನೀಡಿತ್ತಾದರೂ ಕ್ರಮೇಣ ತಂಡವನ್ನು ಹಲವು ಸೋಲುಗಳ ಕೂಪಕ್ಕೆ ತಳ್ಳಿತು.
ಆದರೆ ಆರಂಭದಲ್ಲಿ ಮೆಕಲಮ್ ಅವರ ಈ ಆಕ್ರಮಣಕಾರಿ ತಂತ್ರದಿಂದಲೇ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತು. ಆದರೆ ಆ ನಂತರ ಎದುರಾಳಿ ತಂಡಗಳು ಇಂಗ್ಲೆಂಡ್ ಆಟಗಾರರ ಸ್ಥಿರ ಆಟದ ಶೈಲಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ಫಲಿತಾಂಶಗಳು ಬದಲಾಗಲು ಪ್ರಾರಂಭಿಸಿದವು. ಇದರ ಪರಿಣಾಮವಾಗಿ ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿತು. ಆ ನಂತರ ಆಸ್ಟ್ರೇಲಿಯಾದಲ್ಲಿ 4-1 ಅಂತರದಿಂದ ಆಶಸ್ ಸರಣಿಯನ್ನು ಕಳೆದುಕೊಂಡಿತು.
IND vs ENG: ಇಂಗ್ಲೆಂಡ್ನ ಬಾಝ್ ಬಾಲ್ ಆಟಕ್ಕೆ ಬ್ರೇಕ್ ಹಾಕಿದ ಭಾರತ: ಸ್ಟೋಕ್ಸ್ ಪಡೆಯ ನಿಧಾನಗತಿಯ ಆಟ
ಇತ್ತೀಚೆಗಷ್ಟೇ ಮುಗಿದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆತಿಥೇಯ ಇಂಗ್ಲೆಂಡ್ ತನ್ನ ತವರಿನಲ್ಲೇ 2-1 ಅಂತರದಿಂದ ಸೋತಿತು. ಈ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ನಡುವೆ ತಂಡದ ನಾಯಕ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದರ ಜೊತೆಗೆ ಮೆಕಲಮ್ ಅವರ ಕೋಚಿಂಗ್ ಬಗ್ಗೆಯೂ ಟೀಕೆಗಳು ಕೇಳಿಬಂದವು. ಹಾಗೆಯೇ ಇಂಗ್ಲೆಂಡ್ ಆಟಗಾರರ ಅತಿಯಾದ ಮದ್ಯ ಸೇವನೆಗೂ ಮೆಕಲಮ್ ಉತ್ತೇಜನ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಎಲ್ಲಾ ಗೊಂದಲಗಳ ನಡುವೆ ಮೆಕಲಮ್ ಇಂದು ಟೆಸ್ಟ್ ತಂಡದ ಕೋಚಿಂಗ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.
Published On - 8:33 pm, Sun, 12 July 26