AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 487 ರನ್… ಇಂಗ್ಲೆಂಡ್ ದಾಂಡಿಗರ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್!

ಇಂಗ್ಲೆಂಡ್ ಲಯನ್ಸ್ (ಇಂಗ್ಲೆಂಡ್ 'ಎ') ಕ್ರಿಕೆಟ್ ತಂಡವು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ವೆಸ್ಟ್ ಇಂಡೀಸ್ 'ಎ' ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಯುವ ಪಡೆ, 50 ಓವರ್‌ಗಳಲ್ಲಿ ಬರೋಬ್ಬರಿ 487 ರನ್ ಚಚ್ಚುವ ಮೂಲಕ ಅಂತರರಾಷ್ಟ್ರೀಯ 'ಎ' ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಹೊಸ ದಾಖಲೆ ನಿರ್ಮಿಸಿದೆ.

ಬರೋಬ್ಬರಿ 487 ರನ್... ಇಂಗ್ಲೆಂಡ್ ದಾಂಡಿಗರ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್!
England LionsImage Credit source: GettyImages
ಝಾಹಿರ್ ಯೂಸುಫ್
|

Updated on: Nov 11, 2026 | 8:27 AM

Share

ಇಂಗ್ಲೆಂಡ್ ಲಯನ್ಸ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ 50 ಓವರ್‌ಗಳಲ್ಲಿ ಬರೋಬ್ಬರಿ 487 ರನ್ ಚಚ್ಚುವ ಮೂಲಕ. ಈ ಬೃಹತ್ ಮೊತ್ತದೊಂದಿಗೆ ಇಂಗ್ಲೆಂಡ್ ಲಯನ್ಸ್ (ಇಂಗ್ಲೆಂಡ್ ‘ಎ’) ತಂಡವು ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತ ಕಲೆಹಾಕಿದ ಹೊಸ ವಿಶ್ವ ದಾಖಲೆ ನಿರ್ಮಿಸಿದೆ.

ವೆಸ್ಟ್ ಇಂಡೀಸ್‌ನ ಸೇಂಟ್ ಕಿಟ್ಸ್​ನಲ್ಲಿರುವ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಲಯನ್ಸ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಆರಂಭಿಕನಾಗಿ ಕಣಕ್ಕಿಳಿದ 22 ವರ್ಷದ ಬೆನ್ ಮ್ಯಾಕಿನ್ನಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕಿನ್ನಿ ಕೇವಲ 65 ಎಸೆತಗಳಲ್ಲಿ 15 ಫೋರ್ ಹಾಗೂ 10 ಸಿಕ್ಸರ್​ಗಳೊಂದಿಗೆ 145 ರನ್ ಚಚ್ಚಿ ಔಟಾದರು.

ಮ್ಯಾಕಿನ್ನಿ ಔಟಾದ ನಂತರ ಆಗಮಿಸಿದ ಜೇಮ್ಸ್ ರೀವ್ ಕೇವಲ 56 ಎಸೆತಗಳಲ್ಲಿ ಅಜೇಯ 107 ರನ್ (15 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 400 ರನ್​ಗಳ ಗಡಿ ದಾಟಿಸಿದರು. ಅಲ್ಲದೆ ಬೆನ್ ಮೇಯಸ್ 6ನೇ ವಿಕೆಟ್‌ಗೆ ಕೇವಲ ಕೆಲವೇ ಓವರ್‌ಗಳಲ್ಲಿ 166 ರನ್‌ಗಳ ಬೃಹತ್ ಜೊತೆಯಾಟ ಆಡಿ ಇಂಗ್ಲೆಂಡ್ ಲಯನ್ಸ್ ತಂಡದ ಮೊತ್ತವನ್ನು 50 ಓವರ್​ಗಳಲ್ಲಿ 487/5 ಕ್ಕೆ ತಂದು ನಿಲ್ಲಿಸಿದರು.

ಲಯನ್ಸ್​ ಪಡೆಗೆ ಭರ್ಜರಿ ಜಯ:

488 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ‘ಎ’ ತಂಡ ಇಂಗ್ಲೆಂಡ್‌ನ ಬೌಲಿಂಗ್ ದಾಳಿಗೆ ತತ್ತರಿಸಿತು. ಇಂಗ್ಲೆಂಡ್‌ ಲಯನ್ಸ್ ತಂಡದ ವೇಗದ ಬೌಲರ್ ಎಡ್ಡಿ ಜಾಕ್ ಕೇವಲ 44 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರು. ಇದರೊಂದಿಗೆ ಇಂಗ್ಲೆಂಡ್ ಲಯನ್ಸ್ 276 ರನ್‌ಗಳ ಬೃಹತ್ ಜಯ ಸಾಧಿಸಿ, 50 ಓವರ್‌ಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

ಹೊಸ ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಕಲೆಹಾಕಿದ 487 ರನ್​ ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಭಾರತ ಎ ತಂಡದ ಹೆಸರಿನಲ್ಲಿತ್ತು.

2013 ರಲ್ಲಿ ಪ್ರೆಟೋರಿಯಾದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ‘ಎ’ ತಂಡದ ವಿರುದ್ಧ ಭಾರತ ‘ಎ’ ತಂಡವು 3 ವಿಕೆಟ್ ನಷ್ಟಕ್ಕೆ 433 ರನ್ ಕಲೆಹಾಕಿ ವಿಶ್ವ ದಾಖಲೆ ಬರೆದಿತ್ತು. ಆ ಪಂದ್ಯದಲ್ಲಿ ಭಾರತದ ಪರ ಶಿಖರ್ ಧವನ್ ಕೇವಲ 150 ಎಸೆತಗಳಲ್ಲಿ 248 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು.

ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಟೀಮ್ ಇಂಡಿಯಾ ಬರೆದಿದ್ದ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಇಂಗ್ಲೆಂಡ್ ಲಯನ್ಸ್ ಯಶಸ್ವಿಯಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ‘ಎ’ ತಂಡಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಕಲೆಹಾಕಿದ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದಲ್ಲಿ ಜೀವ ಭಯ
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ