IPL 2021 ಮತ್ತೆ ಶುರು ಮಾಡಿದರೆ ನಾವು ಬರುವುದಿಲ್ಲ ಅನ್ನುತ್ತಿದ್ದಾರಂತೆ ಇಂಗ್ಲೆಂಡ್​ ಆಟಗಾರರು! ಯಾಕೆ ಗೊತ್ತಾ?

ಆದರೆ ಇದಕ್ಕೆ ಒಂದೊಂದೇ ಒಂದು ವಿನಾಯ್ತಿ ಅಂದ್ರೆ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ನಲ್ಲಿ ಇಂಗ್ಲೆಂಡ್​ ಕ್ರಿಕೆಟ್​ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಆ ಪ್ರವಾಸಗಳು ಏನಾದರೂ ಕ್ಯಾನ್ಸಲ್​ ಆದ್ರೆ ಮಾತ್ರ ಇಂಗ್ಲೆಂಡ್​​ ಆಟಗಾರರು 2021 ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

IPL 2021 ಮತ್ತೆ ಶುರು ಮಾಡಿದರೆ ನಾವು ಬರುವುದಿಲ್ಲ ಅನ್ನುತ್ತಿದ್ದಾರಂತೆ ಇಂಗ್ಲೆಂಡ್​ ಆಟಗಾರರು! ಯಾಕೆ ಗೊತ್ತಾ?
IPL 2021 ಮತ್ತೆ ಶುರು ಮಾಡಿದರೆ ನಾವು ಬರುವುದಿಲ್ಲ ಅನ್ನುತ್ತಿದ್ದಾರಂತೆ ಇಂಗ್ಲೆಂಡ್​ ಆಟಗಾರರು! ಯಾಕೆ ಗೊತ್ತಾ?

ಕೊರೊನಾ ಕ್ರಮಿಯಿಂದಾಗಿ IPL 2021 ಟೂರ್ನಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಟೂರ್ನಿಯಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್​ ಆಟಗಾರರು ಈಗಾಗಲೇ ಭಾರತ ಬಿಟ್ಟು ತಮ್ಮ ತಮ್ಮ ಊರುಗಳನ್ನು ತಲುಪಿಕೊಂಡಿದ್ದಾರೆ. ಆದರೆ ತಾಯ್ನಾಡಿಗೆ ಮರಳಿದ ಬಳಿಕ ಆ ಆಟಗಾರರು ಯಾರೂ ಇನ್ನು ಬಾಕಿಯಿರುವ IPL 2021 ಟೂರ್ನಿಯಲ್ಲಿ ಭಾಗಹಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಆಕಸ್ಮಾತ್​ ಬಾಕಿ 31 ಪಂದ್ಯಗಳು ಮತ್ತೆ ಇಂಗ್ಲೆಂಡ್​ ಸೇರಿದಂತೆ ಎಲ್ಲೇ ನಡೆದರೂ ನಾವು ಬರಾಕಿಲ್ಲ ಎಂದಿದ್ದಾರಂತೆ. ಇದಕ್ಕೆ ಕಾರಣವೂ ಇದೆ. ಏನಪ್ಪಾ ಅಂದ್ರೆ.

ಈ ಹಿಂದಿನಂತೆ IPL 2021 ಟೂರ್ನಿ ಭಾರತದಲ್ಲಿಯೇ ನಿಗದಿತ ಅವಧಿಯಲ್ಲಿ ನಡೆದಿದ್ದರೆ ಅದರಲ್ಲಿ ಪಾಲ್ಗೊಂಡಿದ್ದ ಅಷ್ಟೂ ಇಂಗ್ಲೆಂಡ್​ ಆಟಗಾರರಿಗೆ ವಿನಾಯ್ತಿ ನೀಡಲಾಗಿತ್ತು. ಇಂಗ್ಲೆಂಡ್​ ತಂಡ ಜೂನ್​ ತಿಂಗಳಲ್ಲಿ ನ್ಯೂಜಿಲ್ಯಾಂಡ್​ ಟೆಸ್ಟ್​ ಪ್ರವಾಸ ಕೈಗೊಳ್ಳಬೇಕಿದೆ. ಇದೀಗ ಐಪಿಎಲ್​ 2021 ಟೂರ್ನಿ ವೇಳಾಪಟ್ಟಿ ಮರುನಿಗದಿಯಾದರೆ ಇಂಗ್ಲೆಂಡ್​ ತಂಡದ ಪ್ರವಾಸಕ್ಕೆ ಧಕ್ಕೆಯಾಗಲಿದೆ. ಹಾಗಾಗಿ IPL 2021 ಟೂರ್ನಿ ಪುನರಾರಂಭವಾದರೆ ಅದರಲ್ಲಿ ಇಂಗ್ಲೆಂಡ್​ ತಂಡದ 12 ಆಟಗಾರರು ಮತ್ತೆ ಆಡುವುದು ಸಾಧ್ಯವಾಗದು. ಆದ ಅದನ್ನು ಬೇರೆಯದ್ದೇ ಮಾನದಂಡದೊಂದಿಗೆ ನೋಡಬೇಕಾಗುತ್ತದೆ ಎಂದು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯ ನಿರ್ದೇಶಕ ಆಶ್ಲೆ ಗಿಲ್ಸ್​ ಹೇಳಿದ್ದಾರೆ.

ಭಾರತದಲ್ಲಿ ಯಶ್ವಸ್ವಿಯಾಗಿ ನಡೆಯುತ್ತಿದ್ದ IPL 2021 ಟೂರ್ನಿಯು ಕೊರೊನಾ ಕಾಟದಿಂದ ಕಳೆದ ವಾರವಷ್ಟೇ ದಿಢೀರನೆ ಸ್ಥಗಿತಗೊಂಡಿತ್ತು. ಸೆಪ್ಟೆಂಬರ್​ ಮಧ್ಯ ಭಾಗದಲ್ಲೋ ಅಥವಾ ಮಧ್ಯ ಭಾಗದಲ್ಲೋ ಬೇರೆ ಯಾವುದಾದರೂ ಸುರಕ್ಷಿತ ದೇಶದಲ್ಲಿ ಟೂರ್ನಿಯ ಉಳಿದ 31 ಪಂದ್ಯಗಳನ್ನು ಪೂರ್ಣಗೊಳಿಸಲು ಆಲೋಚಿಸುತ್ತಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದರು. ಆದರೆ ಈ ಅವಧಿಯಲ್ಲಿ ಇಂಗ್ಲೆಂಡ್​ ಆಟಗಾರರು ತಮ್ಮ ತಾಯ್ನಾಡಿನ ತಂಡದೊಂದಿಗೆ ಅಧಿಕೃತ ಪ್ರವಾಸದಲ್ಲಿ ಬಿಸಿಯಾಗಿರುತ್ತಾರೆ. 2022 ಮಾರ್ಚ್​ ವರೆಗೂ ಇಂಗ್ಲೆಂಡ್​ ತಂಡದ ಕ್ರಿಕೆಟ್​ ವೇಳಾಪಟ್ಟಿ ನಿಗದಿಯಾಗಿದೆ. ಹಾಗಾಗಿ ಇಂಗ್ಲೆಂಡ್​ ಆಟಗಾರರು ಯಾವುದೇ ಪರಿಷ್ಕೃತ ವೇಳಾಪಟ್ಟಿಗೆ ಹೊಂದಿಕೊಂಡು ಆಡುವುದು ಅನುಮಾನವಾಗಿದೆ.

ಆದರೆ ಇದಕ್ಕೆ ಒಂದೊಂದೇ ಒಂದು ವಿನಾಯ್ತಿ ಅಂದ್ರೆ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ನಲ್ಲಿ ಇಂಗ್ಲೆಂಡ್​ ಕ್ರಿಕೆಟ್​ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಆ ಪ್ರವಾಸಗಳು ಏನಾದರೂ ಕ್ಯಾನ್ಸಲ್​ ಆದ್ರೆ ಮಾತ್ರ ಇಂಗ್ಲೆಂಡ್​​ ಆಟಗಾರರು 2021 ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಕೊರೊನಾ ಕಾಲದಲ್ಲಿ ಆಟಗಾರರು ಹೆಚ್ಚು ಹೆಚ್ಚು ಪ್ರವಾಸ ಮಾಡುವುದು, ಒತ್ತಡದಲ್ಲಿ ಆಡುವುದು ಸುರಕ್ಷಿತವಲ್ಲ. ಹಾಗಾಗಿ ಕ್ರಿಕೆಟ್​ ಪ್ರವಾಸದಲ್ಲಿ ಯಾವುದೇ ಏರುಪೇರುಗಳಾಗುವುದು ಸಮಂಜಸವಲ್ಲ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆಯಾಗಿದೆ.

( England players may not involve in rescheduled IPL 2021 anywhere due to Future Tours Programme)

ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?