AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

೪೦೦ ರನ್ಸ್… ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆ

England vs West Indies: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 400 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 26.2 ಓವರ್​ಗಳಲ್ಲಿ 162 ರನ್ ಬಾರಿಸಿ ಆಲೌಟ್ ಆಗಿದೆ.

೪೦೦ ರನ್ಸ್... ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆ
England
ಝಾಹಿರ್ ಯೂಸುಫ್
|

Updated on: May 30, 2025 | 8:35 AM

Share

ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ (England) ತಂಡವು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಶೇಷ ವಿಶ್ವ ದಾಖಲೆಯನ್ನು ಬರೆದಿದೆ. ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ (60) ಹಾಗೂ ಜೇಮಿ ಸ್ಮಿತ್ (37) ಉತ್ತಮ ಆರಂಭ ಒದಗಿಸಿದ್ದರು.

ಆ ಬಳಿಕ ಬಂದ ಜೋ ರೂಟ್ 57 ರನ್ ಬಾರಿಸಿದರೆ, ನಾಯಕ ಹ್ಯಾರಿ ಬ್ರೂಕ್ 58 ರನ್ ಕಲೆಹಾಕಿದರು. ಇನ್ನು ಜೋಸ್ ಬಟ್ಲರ್ 37 ರನ್​ಗಳ ಕೊಡುಗೆ ನೀಡಿದರೆ, ಯುವ ದಾಂಡಿಗ ಜೇಕಬ್ ಬೆಥೆಲ್ ಸ್ಪೋಟಕ ಇನಿಂಗ್ಸ್ ಆಡಿದರು.

53 ಎಸೆತಗಳನ್ನು ಎದುರಿಸಿದ ಜೇಕಬ್ ಬೆಥೆಲ್ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 82 ರನ್​ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 400 ರನ್​ ಕಲೆಹಾಕಿತು.

ಇಂಗ್ಲೆಂಡ್ ವಿಶ್ವ ದಾಖಲೆ:

ಇಂಗ್ಲೆಂಡ್ ತಂಡ ಕಲೆಹಾಕಿದ 400 ರನ್​ಗಳಲ್ಲಿ ಒಂದೇ ಒಂದು ಶತಕವಿಲ್ಲ ಎಂಬುದು ವಿಶೇಷ. ಅಂದರೆ ಯಾವುದೇ ಬ್ಯಾಟರ್ ಶತಕ ಬಾರಿಸಿದೇ ಏಕದಿನ ಕ್ರಿಕೆಟ್​ನಲ್ಲಿ 400 ರನ್ ಕಲೆಹಾಕಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಇಂಗ್ಲೆಂಡ್ ತನ್ನದಾಗಿಸಿಕೊಂಡಿದೆ.

ಹಾಗೆಯೇ ಬ್ಯಾಟರ್​ರೊಬ್ಬರು ಸೆಂಚುರಿ ಸಿಡಿಸದೇ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಕೋರ್​ಗಳಿಸಿದ ವಿಶ್ವ ದಾಖಲೆ ಕೂಡ ಇಂಗ್ಲೆಂಡ್ ತಂಡದ ಪಾಲಾಗಿದೆ.

ಇದಲ್ಲದೇ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದರ 7 ಬ್ಯಾಟರ್​ಗಳು 30+ ಸ್ಕೋರ್​ಗಳಿಸಿದ್ದಾರೆ. ಅಂದರೆ ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟ್ ಬೀಸಿದ ಮೊದಲ 7 ಬ್ಯಾಟ್ಸ್​ಮನ್​ಗಳು 30 ಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಇದು ಕೂಡ ಏಕದಿನ ಕ್ರಿಕೆಟ್​ನಲ್ಲಿ ಮೂಡಿಬಂದ ಹೊಸ ವಿಶ್ವ ದಾಖಲೆ.

ಇಂಗ್ಲೆಂಡ್ ಜಯಭೇರಿ:

ಈ ಭರ್ಜರಿ ದಾಖಲೆಗಳೊಂದಿಗೆ ವೆಸ್ಟ್ ಇಂಡೀಸ್​ಗೆ 401 ರನ್​ಗಳ ಗುರಿ ನೀಡಲಾಯಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 26.2 ಓವರ್​ಗಳಲ್ಲಿ 162 ರನ್​ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ 238 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಇದನ್ನೂ ಓದಿ: RCB ತಂಡದ್ದು ಅಂತಿಂಥ ಗೆಲುವಲ್ಲ, ಐಪಿಎಲ್ ಇತಿಹಾಸದಲ್ಲೇ ಮೊದಲು..!

ಇದು ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಸಾಧಿಸಿದ 2ನೇ ಭರ್ಜರಿ ಗೆಲುವು ಎಂಬುದು ವಿಶೇಷ. ಅಂದರೆ ಆಂಗ್ಲ ಪಡೆಯು ಎರಡನೇ ಬಾರಿ 235 ರನ್​ಗಳ ಅಂತರದಿಂದ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 242 ರನ್​ಗಳ ಅಂತರದಿಂದ ಗೆದ್ದಿರುವುದು ಇಂಗ್ಲೆಂಡ್ ತಂಡದ ಶ್ರೇಷ್ಠ ಗೆಲುವು. ಇದೀಗ 7 ವರ್ಷಗಳ ಬಳಿಕ ಮತ್ತೊಮ್ಮೆ ಭರ್ಜರಿ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ.

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು