PBKS vs RCB: 9 ವರ್ಷಗಳ ನಂತರ ಆರ್‌ಸಿಬಿಯನ್ನು ಫೈನಲ್‌ಗೆ ಕರೆದೊಯ್ದ ರಜತ್ ಪಾಟಿದಾರ್: ಪಂದ್ಯದ ಬಳಿಕ ಏನು ಹೇಳಿದ್ರು ನೋಡಿ
Rajat Patidar Post match presentation: ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1 ರಲ್ಲಿ ಗೆದ್ದ ಆರ್‌ಸಿಬಿ ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಡಲಿದೆ. ಸದ್ಯ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.

ಬೆಂಗಳೂರು (ಮೇ. 30): ಐಪಿಎಲ್ 2025 ರಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ (Royal Challengers vs Punjab Kings) ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ 2016 ರ ನಂತರ ಮೊದಲ ಬಾರಿಗೆ ಐಪಿಎಲ್ ಫೈನಲ್‌ಗೆ ಪ್ರವೇಶಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 14.1 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿತು. ಫಿಲ್ ಸಾಲ್ಟ್ 27 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆರ್‌ಸಿಬಿ ಆಡಲಿದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.
ಪಾಟೀದಾರ್ ಬಗ್ಗೆ ದೊಡ್ಡ ಹೇಳಿಕೆ
ಪಂದ್ಯದ ನಂತರ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮಾತನಾಡಿ, ‘ನಾವು ಹೇಗೆ ಬೌಲಿಂಗ್ ಮಾಡಬೇಕೆಂಬುದರ ಬಗ್ಗೆ ನಮ್ಮ ಯೋಜನೆಗಳು ಸ್ಪಷ್ಟವಾಗಿದ್ದವು. ವೇಗದ ಬೌಲರ್‌ಗಳು ಮೇಲ್ಮೈಯನ್ನು ಚೆನ್ನಾಗಿ ಬಳಸಿಕೊಂಡರು. ಮುಖ್ಯವಾಗಿ ಸುಯಾಶ್ ಕೊಡುಗೆ ನೀಡಿದ ರೀತಿ, ಅವರು ಲೈನ್ ಅಂಡ್ ಲೆಂತ್ ಬೌಲಿಂಗ್ ಮಾಡಿದ ರೀತಿ ನಿಜಕ್ಕೂ ಚೆನ್ನಾಗಿತ್ತು. ಒಬ್ಬ ನಾಯಕನಾಗಿ ಸುಯೇಶ್ ಬೌಲಿಂಗ್ ಬಗ್ಗೆ ನನಗೆ ಸ್ಪಷ್ಟವಾಗಿದೆ. ಅವರು ಸ್ಟಂಪ್‌ಗಳನ್ನು ಗುರಿಯಾಗಿಸಿಕೊಳ್ಳಬೇಕು, ಅದು ಅವರ ಶಕ್ತಿ. ಅವರ ಗೂಗ್ಲಿ ಬ್ಯಾಟ್ಸ್‌ಮನ್‌ಗಳಿಗೆ ಓದಲು ಕಷ್ಟ. ಇದರಲ್ಲಿ ಅವರು ಕೆಲವು ರನ್‌ಗಳನ್ನು ಕೊಟ್ಟರೂ ನನಗೆ ಪರವಾಗಿಲ್ಲ’ ಎಂದು ಹೇಳಿದ್ದಾರೆ.
ಟೂರ್ನಮೆಂಟ್‌ನಾದ್ಯಂತ ನಾವು ಸಾಕಷ್ಟು ಅಭ್ಯಾಸ ಅವಧಿಗಳನ್ನು ಮಾಡಿದ್ದೇವೆ ಎಂದಿದ್ದಾರೆ. ಫಿಲ್ ಸಾಲ್ಟ್ ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಪಾಟಿದಾರ್, ‘ಹೆಚ್ಚಿನ ಪಂದ್ಯಗಳಲ್ಲಿ ಅವರು (ಸಾಲ್ಟ್) ಬ್ಯಾಟಿಂಗ್ ಮಾಡುತ್ತಿರುವ ರೀತಿ ಅದ್ಭುತವಾಗಿದೆ. ಅವರು ಆಟ ಆರಂಭಿಸುವ ರೀತಿಗೆ ನಾನು ದೊಡ್ಡ ಅಭಿಮಾನಿ. ಡಗೌಟ್ ನಿಂದ ಅವರ ಬ್ಯಾಟಿಂಗ್ ನೋಡುವುದೇ ಒಂದು ಆನಂದ. ಇದು ನಿಜಕ್ಕೂ ಒಳ್ಳೆಯದು’ ಎಂದು ಶ್ಲಾಘಿಸಿದ್ದಾರೆ.
IPL 2025 Qualifier 1: ಪಂಜಾಬ್ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಫೈನಲ್ಗೇರಿದ ಆರ್‌ಸಿಬಿ
ಕೊನೆಯದಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ರಜತ್, ‘ನಾನು ಯಾವಾಗಲೂ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ, ಚಿನ್ನಸ್ವಾಮಿಯಲ್ಲಿ ಮಾತ್ರವಲ್ಲ, ನಾವು ಎಲ್ಲಿಗೆ ಹೋದರೂ ಅದು ನಮ್ಮ ತವರು ಮೈದಾನ ಎಂದು ನಮಗೆ ಅನಿಸುತ್ತದೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ, ನಮ್ಮನ್ನು ಹೀಗೆ ಸದಾ ಬೆಂಬಲಿಸುತ್ತಿರಿ’ ಎಂಬುದು ಪಾಟಿದಾರ್ ಮಾತು.
ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಆರ್‌ಸಿಬಿ ಐಪಿಎಲ್ ಫೈನಲ್ ತಲುಪುತ್ತಿರುವುದು ಇದು ನಾಲ್ಕನೇ ಬಾರಿ. ಇದಕ್ಕೂ ಮೊದಲು, 2009, 2011 ಮತ್ತು 2016 ರಲ್ಲಿ ಫೈನಲ್ ತಲುಪಿದ್ದರು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ 9 ವರ್ಷಗಳ ನಂತರ, ಆರ್‌ಸಿಬಿಗೆ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಸುವರ್ಣಾವಕಾಶ ಸಿಕ್ಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




