AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs SCO: ಸೋಲಿನಿಂದ ಪಾರಾದರೂ ಇಂಗ್ಲೆಂಡ್​ಗೆ ತಪ್ಪಿಲ್ಲ ಸಂಕಷ್ಟ

T20 World Cup 2026: 2026 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಸ್ಕಾಟ್ಲೆಂಡ್ ವಿರುದ್ಧ ಕಷ್ಟಪಟ್ಟು ಗೆದ್ದಿದೆ. ದುರ್ಬಲ ತಂಡಗಳ ಅಮೋಘ ಪ್ರದರ್ಶನಗಳ ನಡುವೆ, ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತ್ತು. ಟಾಮ್ ಬ್ಯಾಂಟನ್ ಅಮೋಘ ಅರ್ಧಶತಕದಿಂದ ತಂಡ ಗೆಲುವಿನ ದಡ ಸೇರಿತು. ಈ ಗೆಲುವು ಇಂಗ್ಲೆಂಡ್‌ನ ಸೂಪರ್ 8 ಕನಸನ್ನು ಜೀವಂತವಾಗಿರಿಸಿದೆ, ಆದರೆ ಮುಂದಿನ ಪಂದ್ಯ ನಿರ್ಣಾಯಕವಾಗಿದ್ದು, ಪಂದ್ಯಾವಳಿಯ ರಂಗು ಹೆಚ್ಚಿಸಿದೆ.

ENG vs SCO: ಸೋಲಿನಿಂದ ಪಾರಾದರೂ ಇಂಗ್ಲೆಂಡ್​ಗೆ ತಪ್ಪಿಲ್ಲ ಸಂಕಷ್ಟ
Eng Vs Sco
ಪೃಥ್ವಿಶಂಕರ
|

Updated on: Feb 14, 2026 | 7:12 PM

Share

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ದುರ್ಬಲ ತಂಡಗಳ ಕೂಡ ಅಮೋಘ ಪ್ರದರ್ಶನ ನೀಡುತ್ತಿವೆ. ಬಲಿಷ್ಠ ತಂಡಗಳ ಎದುರು ಕೆಚ್ಚೆದೆಯ ಹೋರಾಟ ನೀಡುತ್ತಿರುವ ದುರ್ಬಲ ತಂಡಗಳು ಪಂದ್ಯಾವಳಿಯ ರಂಗು ಹೆಚ್ಚಿಸಿವೆ. ಬಲಿಷ್ಠ ತಂಡ ಆಸ್ಟ್ರೇಲಿಯಾ, ಜಿಂಬಾಬ್ವೆ ವಿರುದ್ಧ ಸೋತ ಬಳಿಕ ಉಳಿದ ಪ್ರಮುಖ ತಂಡಗಳಿಗೆ ನಡುಕ ಶುರುವಾಗಿದೆ. ಅದರಲ್ಲೂ ನೇಪಾಳ ವಿರುದ್ಧ ಕೂದಲೆಳೆ ಅಂತರದಲ್ಲಿ ಸೋಲಿನಿಂದ ಪಾರಾಗಿದ್ದ ಇಂಗ್ಲೆಂಡ್‌, ಇದೀಗ ಸ್ಕಾಟ್ಲೆಂಡ್ (England vs Scotland) ವಿರುದ್ಧವೂ ತಿಣುಕಾಡಿ ಗೆದ್ದಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್, ತನ್ನ ಮೂರನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತಾದರೂ ಈ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು. ಸ್ಕಾಟ್ಲೆಂಡ್ ನೀಡಿದ 152 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 5 ವಿಕೆಟ್​ಗಳ ಗೆಲುವು ದಾಖಲಿಸಿ ಸೂಪರ್ 8 ಸುತ್ತಿನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು.

152 ರನ್ ಕಲೆಹಾಕಿದ ಸ್ಕಾಟ್ಲೆಂಡ್

ಫೆಬ್ರವರಿ 14 ರ ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು. ಎರಡೂ ತಂಡಗಳು ತಲಾ ಎರಡು ಅಂಕಗಳನ್ನು ಹೊಂದಿದ್ದರಿಂದ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಗೆಲುವು ಅಗತ್ಯವಾಗಿತ್ತು. ಅದರಂತೆ ಇಂಗ್ಲೆಂಡ್‌ನ ಬೌಲರ್‌ಗಳು ಇಂಗ್ಲೆಂಡ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಅನುಭವಿ ಸ್ಪಿನ್ನರ್ ಆದಿಲ್ ರಶೀದ್ ಸ್ಕಾಟ್ಲೆಂಡ್ ಹೆಚ್ಚಿನ ಸ್ಕೋರ್ ತಲುಪದಂತೆ ತಡೆದರು. ಆದಾಗ್ಯೂ ನಾಯಕ ರಿಚಿ ಬೆರಿಂಗ್ಟನ್ ಮತ್ತು ಮೈಕೆಲ್ ಜೋನ್ಸ್ ಅವರ ಜೊತೆಯಾಟದಿಂದ ಸ್ಕಾಟ್ಲೆಂಡ್ 152 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

19ನೇ ಓವರ್​ನಲ್ಲಿ ಗೆದ್ದ ಇಂಗ್ಲೆಂಡ್

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭ ತೀರ ಕಳಪೆಯಾಗಿತ್ತು. ಆರಂಭಿಕರಿಬ್ಬರೂ ಕೇವಲ 13 ರನ್‌ಗಳಿಗೆ ಔಟಾದರು. ನಾಯಕ ಹ್ಯಾರಿ ಬ್ರೂಕ್ (4) ಸೇರಿದಂತೆ ನಾಲ್ಕು ವಿಕೆಟ್‌ಗಳು ಒಟ್ಟು 86 ರನ್‌ಗಳಿಗೆ ಪತನಗೊಂಡಿದ್ದವು. ಆದರೆ ಈ ಹಂತದಲ್ಲಿ ಜೊತೆಯಾದ ಟಾಮ್ ಬ್ಯಾಂಟನ್ ಮತ್ತು ಜಾಕೋಬ್ ಬೆಥೆಲ್ 66 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆ ನಂತರ ಬ್ಯಾಂಟನ್ ಅರ್ಧಶತಕ ಬಾರಿಸುವುದರ ಜೊತೆಗೆ ಸ್ಯಾಮ್ ಕರನ್ ಅವರೊಂದಿಗೆ 46 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು 19 ನೇ ಓವರ್‌ನಲ್ಲಿ ಗೆಲುವಿನತ್ತ ಕೊಂಡೊಯ್ದರು. ಬ್ಯಾಂಟನ್ 41 ಎಸೆತಗಳಲ್ಲಿ 63 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ

ಇಂಗ್ಲೆಂಡ್​ಗೆ ತಪ್ಪಿಲ್ಲ ಸಂಕಷ್ಟ

ಈ ಗೆಲುವು ಇಂಗ್ಲೆಂಡ್‌ನ ಸೂಪರ್ 8 ರ ಭರವಸೆಯನ್ನು ಜೀವಂತವಾಗಿರಿಸಿದೆ. ಈ ಪಂದ್ಯಕ್ಕೂ ಮೊದಲು, ಇಂಗ್ಲೆಂಡ್ ಗ್ರೂಪ್ ಸಿ ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಆದಾಗ್ಯೂ, ಈ ಗೆಲುವಿನ ನಂತರ ಮೂರು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಇದೀಗ ತನ್ನ ಕೊನೆಯ ಪಂದ್ಯವನ್ನು ಇಟಲಿ ವಿರುದ್ಧ ಆಡಲಿದ್ದು, ಆ ಪಂದ್ಯವನ್ನು ಗೆದ್ದರೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತದೆ. ಒಂದು ವೇಳೆ ಸೋತರೆ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ.

ಏಕೆಂದರೆ ಇದೇ ಗುಂಪಿನಲ್ಲಿರುವ ಇಟಲಿ ಆಡಿರುವ 2 ಪಂದ್ಯಗಳಲ್ಲಿ 1 ಪಂದ್ಯವನ್ನು ಗೆದ್ದು, 1 ಪಂದ್ಯದಲ್ಲಿ ಸೋತಿದೆ. ಉಳಿದಿರುವ 2 ಪಂದ್ಯಗಳಲ್ಲಿ ಇಟಲಿ ಗೆದ್ದರೆ, ಇತ್ತ ಇಂಗ್ಲೆಂಡ್‌ ತನ್ನ ಕೊನೆಯ ಪಂದ್ಯದಲ್ಲಿ ಸೋತರೆ, ಇಟಲಿ ನೇರವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲಿದೆ. ಇಂಗ್ಲೆಂಡ್‌ ಮೂರನೇ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬೀಳಲಿದೆ. ಆದರೆ ಇಟಲಿ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಕಷ್ಟಕರವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?