Fact Check: ಆಸೀಸ್ ವಿರುದ್ಧ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ-ಅನನ್ಯಾ ಪಾಂಡೆ ಅಪ್ಪಿಕೊಳ್ಳುತ್ತಿರುವ ಫೋಟೋ ವೈರಲ್
Hardik Pandya-Ananya Pandya: ಸಾಮಾಜಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಟಿ ಅನನ್ಯಾ ಪಾಂಡೆ ಅವರ ಫೋಟೋಗಳಿವೆ. ಫೋಟೋದಲ್ಲಿ ಹಾರ್ದಿಕ್-ಅನನ್ಯಾ ಪರಸ್ಪರ ಅಪ್ಪಿಕೊಳ್ಳುವುದನ್ನು ಕಾಣಬಹುದು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ಅವರು ಮೈದಾನದಲ್ಲಿ ಅನನ್ಯಾ ಪಾಂಡೆಯನ್ನು ಭೇಟಿಯಾಗಿ ಅವರನ್ನು ಅಪ್ಪಿಕೊಂಡರು ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ.

(ಬೆಂಗಳೂರು, ಮಾ 07): 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champion Trophy) ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸಿದೆ. ಭಾನುವಾರ ಟೀಮ್ ಇಂಡಿಯಾ ಹಾಗೂ ನ್ಯೂಝಿಲೆಂಡ್ ನಡುವೆ ಅಂತಿಮ ಫೈನಲ್ ಕದನ ನಡೆಯಲಿದೆ. ಇದೀಗ ಸೆಮಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಸಾಮಾಜಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನಟಿ ಅನನ್ಯಾ ಪಾಂಡೆ ಅವರ ಫೋಟೋಗಳಿವೆ. ಫೋಟೋದಲ್ಲಿ ಹಾರ್ದಿಕ್-ಅನನ್ಯಾ ಪರಸ್ಪರ ಅಪ್ಪಿಕೊಳ್ಳುವುದನ್ನು ಕಾಣಬಹುದು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಗೆದ್ದ ನಂತರ, ಹಾರ್ದಿಕ್ ಪಾಂಡ್ಯ ಅವರು ಮೈದಾನದಲ್ಲಿ ಅನನ್ಯಾ ಪಾಂಡೆಯನ್ನು ಭೇಟಿಯಾಗಿ ಅವರನ್ನು ಅಪ್ಪಿಕೊಂಡರು ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ.
ಏನು ವೈರಲ್ ಆಗುತ್ತಿರುವುದೇನು?
“ಭಾರತ vs ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಅನನ್ಯಾ ಪಾಂಡೆ ಅವರನ್ನು ಭೇಟಿಯಾಗಿ ಅಪ್ಪಿಕೊಂಡಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಹಾರ್ದಿಕ್- ಅನನ್ಯಾ ಪಾಂಡೆ ಫೋಟೋದ ಸತ್ಯಾಂಶ ಏನು?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಈ ವಿಚಾರ ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ. ವಾಸ್ತವವಾಗಿ ಈ ಚಿತ್ರಗಳನ್ನು ಕೃತಕ ಬುದ್ದಿಮತ್ತೆ AI ಪರಿಕರಗಳ ಸಹಾಯದಿಂದ ರಚಿಸಲಾಗಿದೆ. ವೈರಲ್ ಪೋಸ್ಟ್‌ನ ಸತ್ಯವನ್ನು ತಿಳಿಯಲು, ನಾವು ಚಿತ್ರವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಎರಡೂ ಚಿತ್ರಗಳ ಬ್ಯಾಕ್ಗ್ರೌಂಡ್ ಮಸುಕು ಇದೆ ಮತ್ತು ಬಣ್ಣವನ್ನು ನೋಡಿದಾಗ ಅವು ನೈಜ್ಯದಂತೆ ಕಾಣಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚಿತ್ರವು AI ಎಂದು ನಾವು ಅನುಮಾನಿಸಿದೆವು.
Fact Check: ಮಹಾಕುಂಭಮೇಳ ಮುಗಿದ ನಂತರ ಪ್ರಯಾಗರಾಜ್‌ನ ಗಂಗಾ ನದಿ ದಡದಲ್ಲಿ ಆಮೆಗಳ ದಂಡು?
AI-ಸಕ್ರಿಯಗೊಳಿಸಿದ ಮಲ್ಟಿಮೀಡಿಯಾ ವಿಶ್ಲೇಷಣಾ ಪರಿಕರಗಳನ್ನು ಬಳಸಿಕೊಂಡು ಫೋಟೋವನ್ನು ಹುಡುಕುವ ಮೂಲಕ ನಾವು ವಿಷಯವನ್ನು ಮತ್ತಷ್ಟು ತನಿಖೆ ಮಾಡಿದೆವು. ನಾವು ಹೈವ್ ಮಾಡರೇಶನ್ ಟೂಲ್ ಬಳಸಿ ಎರಡೂ ಫೋಟೋಗಳನ್ನು ಹುಡುಕಿದೆವು. ಈ ಉಪಕರಣವು ಮೊದಲು ಫೋಟೋ AI ನಿಂದ ರಚಿತವಾಗುವ ಶೇಕಡಾ 98.6 ರಷ್ಟು ಸಾಧ್ಯತೆಯನ್ನು ತಿಳಿಸಿತು. ಅದೇ ಸಮಯದಲ್ಲಿ, ಹೈವ್ ಮಾಡರೇಶನ್ ಉಪಕರಣವು ಎರಡನೇ ಫೋಟೋವನ್ನು AI- ರಚಿಸುವ ಶೇಕಡಾ 99.4 ರಷ್ಟು ಸಂಭವನೀಯತೆಯನ್ನು ತೋರಿಸಿದೆ.
ನಾವು ಇನ್ನೊಂದು ಉಪಕರಣದ ಸಹಾಯದಿಂದ ಈ ಚಿತ್ರಗಳನ್ನು ಮತ್ತೊಮ್ಮೆ ಹುಡುಕಿದೆವು. ಸೈಟ್ ಎಂಜಿನ್ ಬಳಸಿ ಚಿತ್ರವನ್ನು ಹುಡುಕಿದೆವು. ಈ ಉಪಕರಣವು ಫೋಟೋವು ಶೇಕಡಾ 99 ರಷ್ಟು AI ನಿಂದ ರಚಿತವಾಗಿರುವ ಸಾಧ್ಯತೆಯಿದೆ ಎಂದು ತೋರಿಸಿದೆ. ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅನನ್ಯಾ ಪಾಂಡೆ ಅವರ ವೈರಲ್ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ ಎಂದು ಖಚಿತವಾಗಿ ಹೇಳುತ್ತದೆ.
ಭಾನುವಾರ ಭಾರತ-ನ್ಯೂಝಿಲೆಂಡ್ ನಡುವೆ ಫೈನಲ್:
2025 ರ ಚಾಂಪಿಯನ್ಸ್ ಟ್ರೋಫಿಯ ಅತಿದೊಡ್ಡ ಪಂದ್ಯ ಅಂದರೆ ಫೈನಲ್ ಮ್ಯಾಚ್ ಮಾರ್ಚ್ 9 ರಂದು ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಆವೃತ್ತಿಯಲ್ಲಿ ಈ ಎರಡೂ ತಂಡಗಳ ನಡುವಿನ ಎರಡನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು, ಈ ಎರಡೂ ತಂಡಗಳ ನಡುವೆ ಗುಂಪು ಹಂತದ ಕೊನೆಯ ಪಂದ್ಯವೂ ನಡೆದಿತ್ತು, ಅದರಲ್ಲಿ ಭಾರತ ಗೆದ್ದಿತ್ತು. ಇದೀಗ ಫೈನಲ್ ಕಾದಾಟದಲ್ಲಿ ಗೆದ್ದು ಯಾರ ಮುಡಿಗೆ ಟ್ರೋಫಿ ಹೋಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ನ್ಯೂಝಿಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಉಭಯ ತಂಡಗಳ ನಡುವಣ ಪಂದ್ಯ ಹೈವೋಲ್ಟೇಜ್ ಆಗುವುದರಲ್ಲಿ ಅನುಮಾನವಿಲ್ಲ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ