Team India
ಭಾರತ ಟೆಸ್ಟ್ ತಂಡದ 38ನೇ ನಾಯಕನಾಗಿ ರಿಷಭ್ ಪಂತ್ ಪಾದಾರ್ಪಣೆ ಮಾಡಿದ್ದಾರೆ. ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಪಂತ್ ಟೆಸ್ಟ್ನಲ್ಲಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಪಂದ್ಯದ ಮೊದಲ ಇನಿಂಗ್ಸ್ನ ಬ್ಯಾಟಿಂಗ್ ವೇಳೆ ಅವರು ಕುತ್ತಿಗೆ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಇದೀಗ ದ್ವಿತೀಯ ಟೆಸ್ಟ್ನಲ್ಲಿ ರಿಷಭ್ ಪಂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ 38ನೇ ನಾಯಕನೆಂಬ ಹೆಗ್ಗಳಿಕೆ ಪಂತ್ ಪಾಲಾಗಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಟೆಸ್ಟ್ನಲ್ಲಿ ಮುನ್ನಡೆಸಿದ ಕ್ಯಾಪ್ಟನ್ಗಳ ಪಟ್ಟಿ ಈ ಕೆಳಗಿನಂತಿದೆ…
- ಸಿ.ಕೆ. ನಾಯುಡು (1932-1934) – 4 ಪಂದ್ಯಗಳು
- ಮಹಾರಾಜಕುಮಾರ್ (ವಿಝಿಯನಗರಂ) (1936-1936) – 3 ಪಂದ್ಯಗಳು
- ಇಫ್ತಿಕಾರ ಪಟೌಡಿ (1946-1946) – 3 ಪಂದ್ಯಗಳು
- ಲಾಲಾ ಅಮರನಾಥ್ (1947-1952) – 15 ಪಂದ್ಯಗಳು
- ವಿಜಯ್ ಹಝಾರೆ (1951-1953) – 14 ಪಂದ್ಯಗಳು
- ವಿನೂ ಮಂಕಡ್ (1955-1959) – 6 ಪಂದ್ಯಗಳು
- ಗುಲಾಮ್ ಅಹ್ಮದ್ (1955-1959) – 3 ಪಂದ್ಯಗಳು
- ಪಾಲಿ ಉಮ್ರಿಗರ್ (1955-1958) – 8 ಪಂದ್ಯಗಳು
- ಹೇಮು ಅಧಿಕಾರಿ (1959-1959) – 1 ಪಂದ್ಯ
- ದತ್ತ ಗಾಯಕ್ವಾಡ್ (1959-1959) – 4 ಪಂದ್ಯಗಳು
- ಪಂಕಜ್ ರಾಯ್ (1959-1959) – 1 ಪಂದ್ಯ
- ಜಿಎಸ್ ರಾಮಚಂದ್ (1959-1960) – 5 ಪಂದ್ಯಗಳು
- ನಾರಿ ಕಾಂಟ್ರಾಕ್ಟರ್ (1960-1962) – 12 ಪಂದ್ಯಗಳು
- ಮನ್ಸೂಲಿ ಅಲಿ ಖಾನ್ ಪಟೌಡಿ (1962-1975) – 40 ಪಂದ್ಯಗಳು
- ಚಂದು ಬೋರ್ಡೆ (1967-1967) – 1 ಪಂದ್ಯ
- ಅಜಿತ್ ವಾಡೇಕರ್ (1971-1974) – 16 ಪಂದ್ಯಗಳು
- ಎಸ್ ವೆಂಕಟರಾಘವನ್ (1974-1979) – 5 ಪಂದ್ಯಗಳು
- ಸುನಿಲ್ ಗವಾಸ್ಕರ್ (1976-1985) – 47 ಪಂದ್ಯಗಳು
- ಬಿಶನ್ ಬೇಡಿ (1976-1978) – 22 ಪಂದ್ಯಗಳು
- ಗುಂಡಪ್ಪ ವಿಶ್ವನಾಥ್ (1980-1980) – 2 ಪಂದ್ಯಗಳು
- ಕಪಿಲ್ ದೇವ್ (1983-1987) – 34 ಪಂದ್ಯಗಳು
- ದಿಲೀಪ್ ವೆಂಗ್‌ಸರ್ಕರ್ (1987-1989) – 10 ಪಂದ್ಯಗಳು
- ರವಿಶಾಸ್ತ್ರಿ (1988-1988) – 1 ಪಂದ್ಯ
- ಕೆ. ಶ್ರೀಕಾಂತ್ (1989-1989) – 4 ಪಂದ್ಯಗಳು
- ಮೊಹಮ್ಮದ್ ಅಝರುದ್ದೀನ್ (1990-1999) – 47 ಪಂದ್ಯಗಳು
- ಸಚಿನ್ ತೆಂಡೂಲ್ಕರ್ (1996-2000) – 25 ಪಂದ್ಯಗಳು
- ಸೌರವ್ ಗಂಗೂಲಿ (2000-2005) – 49 ಪಂದ್ಯಗಳು
- ರಾಹುಲ್ ದ್ರಾವಿಡ್ (2003-2007) – 25 ಪಂದ್ಯಗಳು
- ವೀರೇಂದ್ರ ಸೆಹ್ವಾಗ್ (2005-2012) – 4 ಪಂದ್ಯಗಳು
- ಅನಿಲ್ ಕುಂಬ್ಳೆ (2007-2008) – 14 ಪಂದ್ಯಗಳು
- ಎಂ.ಎಸ್. ಧೋನಿ (2008-2014) – 60 ಪಂದ್ಯಗಳು
- ವಿರಾಟ್ ಕೊಹ್ಲಿ (2014-2022) – 68 ಪಂದ್ಯಗಳು
- ಅಜಿಂಕ್ಯ ರಹಾನೆ (2017-2021) – 6 ಪಂದ್ಯಗಳು
- ಕೆ.ಎಲ್. ರಾಹುಲ್ (2022-2022) – 3 ಪಂದ್ಯಗಳು
- ರೋಹಿತ್ ಶರ್ಮಾ (2022-2024) – 24 ಪಂದ್ಯಗಳು
- ಜಸ್ಪ್ರೀತ್ ಬುಮ್ರಾ (2022-2025) – 3 ಪಂದ್ಯಗಳು
- ಶುಭಮನ್ ಗಿಲ್ (2025*) – 8 ಪಂದ್ಯಗಳು
- ರಿಷಭ್ ಪಂತ್ (2025*) – 1 ಪಂದ್ಯ
ಇದನ್ನೂ ಓದಿ: 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೀಗೆ ಔಟಾಗಿದ್ದು ಇದೇ ಮೊದಲು..!
ಶತಕ ಪೂರೈಸಿದ ಸೌತ್ ಆಫ್ರಿಕಾ:
ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಸೌತ್ ಆಫ್ರಿಕಾ ತಂಡವು 33 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 102 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಟೆಂಬಾ ಬವುಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.