
ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ತಮ್ಮ ತಾಯಿಯವರ ಆರೋಗ್ಯ ಹದಗೆಟ್ಟ ಕಾರಣ ಇಂಗ್ಲೆಂಡ್ ಪ್ರವಾಸವನ್ನು ಮಧ್ಯದಲ್ಲಿಯೇ ಬಿಟ್ಟು ಭಾರತಕ್ಕೆ ವಾಪಸ್ಸಾಗಿದ್ದಾರೆ. ಗಂಭೀರ್ ಅನುಪಸ್ಥಿತಿಯಲ್ಲಿ ಅನುಭವಿ ವಿವಿಎಸ್ ಲಕ್ಷ್ಮಣ್ (VVS Laxman) ತಂಡವನ್ನು ಮುಖ್ಯ ಕೋಚ್ ಆಗಿ ಮುನ್ನಡೆಸಬಹುದು ಎಂದು ವರದಿಗಳಿದ್ದವು. ಅಲ್ಲದೆ ಗಂಭೀರ್ ಮತ್ತೆ ತಂಡವನ್ನು ಕೂಡಿಕೊಳ್ಳುವುದು ಯಾವಾಗ ಎಂಬುದರ ಬಗ್ಗೆಯೂ ಯಾವುದೇ ಖಚಿತತೆ ಸಿಕ್ಕಿರಲಿಲ್ಲ. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಗಂಭೀರ್, ಇಂದು ರಾತ್ರಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂಬ ಸುದ್ದಿ ಇದೆ.
ಗೌತಮ್ ಗಂಭೀರ್ ಜೂನ್ 16 ರ ರಾತ್ರಿ ಭಾರತದಿಂದ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಅವರು ಮೊದಲು ಭಾರತದಿಂದ ದುಬೈಗೆ ಹೋಗಲಿದ್ದಾರೆ. ನಂತರ ದುಬೈನಿಂದ ವಿಮಾನದ ಮೂಲಕ ಬರ್ಮಿಂಗ್ಹ್ಯಾಮ್ ತಲುಪಲಿದ್ದಾರೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಬರ್ಮಿಂಗ್ಹ್ಯಾಮ್ ತಲುಪಿದ ನಂತರ, ಗೌತಮ್ ಗಂಭೀರ್ ರಸ್ತೆ ಮೂಲಕ ಹೆಡಿಂಗ್ಲಿ ತಲುಪಲಿದ್ದು, ಅಲ್ಲಿ ಜೂನ್ 20 ರಂದು ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
ಟೀಂ ಇಂಡಿಯಾ ಬಗ್ಗೆ ಹೇಳುವುದಾದರೆ, ಇಂಟ್ರಾ-ಸ್ಕ್ವಾಡ್ ಪಂದ್ಯ ನಿಗದಿತ ಸಮಯಕ್ಕಿಂತ ಒಂದು ದಿನ ಮೊದಲು ಮುಗಿದಿದ್ದು, ಭಾರತ ತಂಡ ಜೂನ್ 16 ರಂದು ವಿಶ್ರಾಂತಿ ಪಡೆಯಲಿದೆ. ಆ ಬಳಿಕ ಜೂನ್ 17 ರಂದು ಹೆಡಿಂಗ್ಲಿಗೆ ತೆರಳಲಿದ್ದು, ಅಲ್ಲಿ ಗೌತಮ್ ಗಂಭೀರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಗೌತಮ್ ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಜೂನ್ 11 ರಂದು ಹೃದಯಾಘಾತಕ್ಕೊಳಗಾಗಿದ್ದರು. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಸುದ್ದಿ ಕೇಳಿದ ನಂತರ, ಗಂಭೀರ್ ತರಾತುರಿಯಲ್ಲಿ ಭಾರತಕ್ಕೆ ಮರಳಿದ್ದರು. ವರದಿಗಳ ಪ್ರಕಾರ, ಗಂಭೀರ್ ಅವರ ತಾಯಿ ಇನ್ನೂ ಐಸಿಯುನಲ್ಲಿದ್ದಾರೆ. ಆದರೆ ಇದರ ಹೊರತಾಗಿಯೂ, ಗಂಭೀರ್ ಇಂಗ್ಲೆಂಡ್‌ಗೆ ಮರಳಲು ನಿರ್ಧರಿಸಿದ್ದಾರೆ.
WTC 2025-27 ವೇಳಾಪಟ್ಟಿ ಪ್ರಕಟ; ಟೀಂ ಇಂಡಿಯಾ ಯಾವಾಗ, ಯಾರ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಲಿದೆ ಗೊತ್ತಾ?
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಟೀಂ ಇಂಡಿಯಾದ ಹೊಸ ಟೆಸ್ಟ್ ನಾಯಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಈ ಪ್ರಯಾಣವು ಹೆಡಿಂಗ್ಲಿಯಿಂದ ಪ್ರಾರಂಭವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ