IPL 2022: ಗೆಲುವು ಗುರು…RCB ತಂಡದ ವಿಜಯ ಗೀತೆ ಬಿಡುಗಡೆ
IPL 2022 RCB Anthem: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ರಲ್ಲಿ ಆರ್ಸಿಬಿ ತಂಡವು ಗೆಲುವಿನ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸೋತಿದ್ದ ಆರ್ಸಿಬಿ 2ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ದ ರೋಚಕ ಜಯ ಸಾಧಿಸಿತು. ಈ ಮೂಲಕ ಐಪಿಎಲ್ ಸೀಸನ್ 15 ನಲ್ಲಿ ಮೊದಲ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಇದೀಗ ಆರ್ಸಿಬಿ ವಿಜಯ ಗೀತೆಯನ್ನು ಬಿಡುಗಡೆ ಮಾಡಿದೆ. ಗೆಲುವು ಗುರು ಹೆಸರಿನಲ್ಲಿ ಮೂಡಿಬಂದಿರುವ ಈ ಉತ್ಸಾಹಭರಿತ ಹಾಡಿನಲ್ಲಿ ಹಿಂದಿ ಹಾಗೂ ಕನ್ನಡ ಸಾಹಿತ್ಯ ಬಳಸಲಾಗಿದೆ.
ನಮ್ಮೆಲ್ಲರ ಹೃದಯದಲ್ಲಿ ಮಿಡಿಯುವ ಒಂದೇ ಧ್ವನಿಯನ್ನು ಪ್ರಸ್ತುತಪಡಿಸುವುದು: ಗೆಲುವು ಗುರು! ಈ ವರ್ಷದ ಆರ್ಸಿಬಿಯ ವಿಜಯ ಗೀತೆಯನ್ನಾಗಿ ಈ ಹಾಡನ್ನು ಅಭಿಮಾನಿಗಳ ಮುಂದಿಡಲಾಗಿದೆ ಎಂದು ಆರ್ಸಿಬಿ ತಿಳಿಸಿದೆ. ಗೆಲುವು ಗುರು ಗೀತೆಯನ್ನು ಆರ್ಸಿಬಿ ವಿಜಯ ಗೀತೆಯನ್ನಾಗಿ ಆರ್ಸಿಬಿ ಅಭಿಮಾನಿಗಳ ಮುಂದಿಟ್ಟಿದ್ದರೂ, ಈ ಸಲ ಕಪ್ ನಮ್ದೇ ಎನ್ನುವ ಸ್ಲೋಗನ್ ಈ ಬಾರಿ ಕೂಡ ಆರ್ಸಿಬಿ ಫ್ಯಾನ್ಸ್ ಮುಂದುವರೆಸಿದ್ದಾರೆ. ಅದರಂತೆ ಆರ್ಸಿಬಿ ಈ ಸಲ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
Presenting the one voice that beats in all our hearts: Geluvu Guru!
This year, RCB goes #BoldTogether with @CholaMS, a winning spirit at heart, and Geluvu spirit in the game! #GeluvuGuruGeluvu#PlayBold #RCB #CholaMS pic.twitter.com/Fe6NYj4JHK
— Royal Challengers Bangalore (@RCBTweets) March 31, 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
RCB ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ:
ಏಪ್ರಿಲ್ 5- RCB vs ರಾಜಸ್ಥಾನ್ ರಾಯಲ್ಸ್-ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 9- RCB vs ಮುಂಬೈ ಇಂಡಿಯನ್ಸ್-ಎಂಸಿಎ ಸ್ಟೇಡಿಯಂ, ಪುಣೆ
ಏಪ್ರಿಲ್ 12- RCB vs ಚೆನ್ನೈ ಸೂಪರ್ ಕಿಂಗ್ಸ್-ಡಿವೈ ಪಾಟೀಲ್ ಕ್ರೀಡಾಂಗಣ
ಏಪ್ರಿಲ್ 16- RCB vs ಡೆಲ್ಲಿ ಕ್ಯಾಪಿಟಲ್ಸ್-ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 19- RCB vs ಲಖನೌ ಸೂಪರ್ ಜೈಂಟ್ಸ್-ಡಿವೈ ಪಾಟೀಲ್ ಕ್ರೀಡಾಂಗಣ
ಏಪ್ರಿಲ್ 23- RCB vs ಸನ್ರೈಸರ್ಸ್ ಹೈದರಾಬಾದ್-ಬ್ರಬೋರ್ನ್ ಸ್ಟೇಡಿಯಂ
ಏಪ್ರಿಲ್ 26- RCB vs ರಾಜಸ್ಥಾನ್ ರಾಯಲ್ಸ್-ಎಂಸಿಎ ಸ್ಟೇಡಿಯಂ, ಪುಣೆ
ಏಪ್ರಿಲ್ 30- RCB vs ಗುಜರಾತ್ ಟೈಟನ್ಸ್-ಬ್ರಬೋರ್ನ್ ಸ್ಟೇಡಿಯಂ,
ಮೇ 4- RCB vs ಚೆನ್ನೈ ಸೂಪರ್ ಕಿಂಗ್ಸ್-ಎಂಸಿಎ ಸ್ಟೇಡಿಯಂ, ಪುಣೆ
ಮೇ 8- RCB vs ಸನ್ರೈಸರ್ಸ್ ಹೈದರಾಬಾದ್-ವಾಂಖೆಡೆ ಸ್ಟೇಡಿಯಂ
ಮೇ 13- RCB vs ಪಂಜಾಬ್ ಕಿಂಗ್ಸ್-ಬ್ರಬೋರ್ನ್ – ಬ್ರಬೋರ್ನ್ ಸ್ಟೇಡಿಯಂ
ಮೇ 19- RCB vs ಗುಜರಾತ್ ಟೈಟನ್ಸ್-ವಾಂಖೆಡೆ ಸ್ಟೇಡಿಯಂ
ಇದನ್ನೂ ಓದಿ: Harshal Patel: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2022: ವನಿಂದು ಹಸರಂಗ ವಿಭಿನ್ನ ಸಂಭ್ರಮಕ್ಕೆ ಇದುವೇ ಕಾರಣ..!
Published On - 6:41 pm, Thu, 31 March 22