
ಬೆಂಗಳೂರು (ಮೇ. 31): ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗುಜರಾತ್ ಟೈಟಾನ್ಸ್ (GT vs MI IPL 2025) ಐಪಿಎಲ್ 2025 ರಲ್ಲಿ ಫೈನಲ್‌ಗೆ ಹೋಗುವ ರೇಸ್‌ನಿಂದ ಹೊರಬಿದ್ದಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ತಂಡಕ್ಕೆ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು ಇಷ್ಟು ದೊಡ್ಡ ಸ್ಕೋರ್ ಗಳಿಸಿತು. ಇದರ ನಂತರ, ಮುಂಬೈ ಇಂಡಿಯನ್ಸ್ ನೀಡಿದ ಗುರಿಯನ್ನು ಬೆನ್ನಟ್ಟಲು ಗುಜರಾತ್ ಟೈಟಾನ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ ಮತ್ತು 20 ಓವರ್‌ಗಳಲ್ಲಿ 208 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇಂತಹ ಪರಿಸ್ಥಿತಿಯಲ್ಲಿ, ಎಲಿಮಿನೇಟರ್‌ನಲ್ಲಿ ಗುಜರಾತ್ ಸೋಲಿಗೆ ಕಾರಣರಾದ 5 ಆಟಗಾರರು ಯಾರು ಎಂಬುದನ್ನು ನೋಡೋಣ.
ಜೆರಾಲ್ಡ್ ಕೋಟ್ಜೀ ವೈಫಲ್ಯ
ಗುಜರಾತ್ ತಂಡದ ಎಲಿಮಿನೇಟರ್ ಸೋಲಿಗೆ ವೇಗಿ ಜೆರಾಲ್ಡ್ ಕೋಟ್ಜೀ ಪ್ರಮುಖ ಕಾರಣರಾದರು. ಗಿಲ್ ಇವರಿಗೆ ಕೇವಲ 3 ಓವರ್ ಬೌಲಿಂಗ್ ಮಾಡಿಸಿದರು, ಇದರಲ್ಲಿ ಬರೋಬ್ಬರಿ 51 ರನ್ ನೀಡಿ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಕೂಡ ಸಾಧ್ಯವಾಗಲಿಲ್ಲ. ಈ ರೀತಿಯಾಗಿ ಕೋಟ್ಜೀ ಗುಜರಾತ್ ಸೋಲಿಗೆ ಕಾರಣರಾದರು.
ರನ್ ಹರಿಬಿಟ್ಟ ಪ್ರಸಿದ್ಧ ಕೃಷ್ಣ
ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಪರ ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಕಬಳಿಸಿದರು, ಆದರೆ ಅವರು ತಮ್ಮ ನಾಲ್ಕು ಓವರ್‌ಗಳ ಅವಧಿಯಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟರು. ಪ್ರಸಿದ್ಧ್ ದುಬಾರಿ ಬೌಲರ್ ಎನಿಸಿದರು. ಆದಾಗ್ಯೂ, ಅವರು ತಂಡಕ್ಕೆ ಅವಕಾಶಗಳನ್ನು ಸೃಷ್ಟಿಸಿದರು ಆದರೆ ಫೀಲ್ಡರ್‌ಗಳೊಂದಿಗೆ ಸಹಕರಿಸಲು ಸಾಧ್ಯವಾಗಲಿಲ್ಲ.
ರಶೀದ್ ಖಾನ್ ಸಂಪೂರ್ಣ ವಿಫಲ
ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಎಲಿಮಿನೇಟರ್ ಪಂದ್ಯದಲ್ಲಿ ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿದ್ದರು. ರಶೀದ್ ಖಾನ್ 4 ಓವರ್‌ಗಳಲ್ಲಿ 31 ರನ್‌ಗಳನ್ನು ನೀಡಿದರು, ಆದರೆ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ರಶೀದ್ ಕಷ್ಟದ ಸಮಯದಲ್ಲಿ ತಂಡಕ್ಕೆ ವಿಕೆಟ್ ತಂದುಕೊಡುತ್ತಿದ್ದರು, ಆದರೆ ಈ ಋತುವಿನಲ್ಲಿ ರಶೀದ್ ಸಂಪೂರ್ಣವಾಗಿ ವಿಫಲರಾದರು.
GT vs MI, IPL 2025: ಪಂದ್ಯದ ಮಧ್ಯೆ ಬೌಂಡರಿ ಲೈನ್ ಬಳಿ ಬುಮ್ರಾ-ಜಯವರ್ಧನೆ ನಡುವೆ ಜಗಳ
ಕುಸಲ್ ಮೆಂಡಿಸ್ ಎಡವಟ್ಟು
ಈ ಪಂದ್ಯದಲ್ಲಿ ಗುಜರಾತ್ ಪರ ಪಾದಾರ್ಪಣೆ ಮಾಡಿದ ಕುಸಲ್ ಮೆಂಡಿಸ್ ಮೊದಲ ಪಂದ್ಯದಲ್ಲೇ ವಿಲನ್ ಆದರು. ವಿಕೆಟ್ ಕೀಪಿಂಗ್ ಮಾಡುವಾಗ ಮೆಂಡಿಸ್ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದರು. ವಿಶೇಷವಾಗಿ ರೋಹಿತ್ ಶರ್ಮಾ ಕ್ಯಾಚ್ ಗುಜರಾತ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಮೆಂಡಿಸ್ ಬ್ಯಾಟಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದರು ಹಿಟ್‌ವಿಕೆಟ್ ಆದರು.
ಶುಭ್‌ಮನ್ ಗಿಲ್ ವಿಫಲ
ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಪರ ನಾಯಕ ಶುಭ್‌ಮನ್ ಗಿಲ್ ದಯನೀಯವಾಗಿ ವಿಫಲರಾದರು. ಮೊದಲ ಓವರ್‌ನಲ್ಲೇ ಗಿಲ್ ಔಟಾದರು. ಅವರು ತಂಡಕ್ಕೆ ಕೇವಲ 1 ರನ್ ಗಳಿಸಲು ಸಾಧ್ಯವಾಯಿತು. ಪ್ರಮುಖ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಗುಜರಾತ್ ಸೋಲಿಗೆ ದೊಡ್ಡ ಕಾರಣವಾಯಿತು. ಗಿಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಆರಂಭ ನೀಡಲು ಸಾಧ್ಯವಾಗಿದ್ದರೆ, ಬಹುಶಃ ಪಂದ್ಯದ ಫಲಿತಾಂಶ ಗುಜರಾತ್ ಪರವಾಗುತ್ತಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ