GT vs RCB Highlights, IPL 2024: ವಿಲ್ ಜ್ಯಾಕ್ಸ್ ಸಿಡಿಲಬ್ಬರದ ಶತಕ; ಆರ್ಸಿಬಿಗೆ 3ನೇ ಜಯ
Gujarat Titans vs Royal Challengers Bengaluru Highlights in Kannada: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 45 ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಮೂರನೇ ಗೆಲುವು ದಾಖಲಿಸಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 45 ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಮೂರನೇ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಸಾಯಿ ಸುದರ್ಶನ್ ತಂಡದ ಪರ ಗರಿಷ್ಠ 84 ರನ್‌ಗಳ ಇನ್ನಿಂಗ್ಸ್ ಆಡಿದರು ಈ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ತಂಡ 16 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ತಂಡದ ಪರ ವಿಲ್ ಜ್ಯಾಕ್ಸ್ ಅಜೇಯ 100 ರನ್ ಮತ್ತು ವಿರಾಟ್ ಕೊಹ್ಲಿ ಅಜೇಯ 70 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
LIVE NEWS & UPDATES
-
ಒಂಬತ್ತು ವಿಕೆಟ್‌ಗಳ ಜಯ
ಆರ್‌ಸಿಬಿ 201 ರನ್‌ಗಳ ಗುರಿಯನ್ನು ಒಂಬತ್ತು ವಿಕೆಟ್‌ಗಳು ಬಾಕಿ ಇರುವಂತೆಯೇ ಸಾಧಿಸಿತು. ವಿಲ್ ಜ್ಯಾಕ್ಸ್ ಶತಕ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಅದ್ಭುತ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು
-
ಜ್ಯಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್
15ನೇ ಓವರ್‌ನಲ್ಲಿ ಜ್ಯಾಕ್ಸ್ ಒಬ್ಬರೆ 29 ರನ್ ಚಚ್ಚಿದರು. ಈ ಓವರ್‌ನಲ್ಲಿ ಒಟ್ಟು 3 ಸಿಕ್ಸರ್ ಮತ್ತು 2 ಬೌಂಡರಿಗಳು ಬಂದವು. ತಂಡದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 171 ರನ್ ಆಗಿದೆ.
-
-
14 ಓವರ್ ಅಂತ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಓವರ್‌ಗಳಲ್ಲಿ 148 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 108 ರನ್‌ಗಳ ಜೊತೆಯಾಟ ಆಡಿದ್ದಾರೆ.
-
ಕೊಹ್ಲಿ ಅರ್ಧಶತಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದಾರೆ. ವಿಲ್ ಜಾಕ್ವೆಸ್ 16 ರನ್ ಗಳಿಸಿ ಆಡುತ್ತಿದ್ದಾರೆ.
-
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ವಿಲ್ ಜಾಕ್ವೆಸ್ 5 ರನ್ ಮತ್ತು ವಿರಾಟ್ ಕೊಹ್ಲಿ 28 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 84 ಎಸೆತಗಳಲ್ಲಿ 138 ರನ್‌ಗಳ ಅಗತ್ಯವಿದೆ.
-
-
ಡು ಪ್ಲೆಸಿಸ್ ಪೆವಿಲಿಯನ್‌ಗೆ
ನಾಯಕ ಫಾಫ್ ಡು ಪ್ಲೆಸಿಸ್ 24 ರನ್ ಗಳಿಸಿ ಔಟಾದರು. ತಂಡದ ಪರವಾಗಿ ವಿಲ್ ಜಾಕ್ಸ್ ಕ್ರೀಸ್‌ಗೆ ಬಂದಿದ್ದಾರೆ. ತಂಡ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.
-
2 ಓವರ್ ಪೂರ್ಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ಓವರ್‌ಗಳಲ್ಲಿ 20 ರನ್ ಗಳಿಸಿದೆ. ವಿರಾಟ್ ಕೊಹ್ಲಿ 7 ರನ್ ಹಾಗೂ ಫಾಫ್ ಡು ಪ್ಲೆಸಿಸ್ 7 ರನ್ ಗಳಿಸಿ ಆಡುತ್ತಿದ್ದಾರೆ.
-
ಆರ್‌ಸಿಬಿ ಇನ್ನಿಂಗ್ಸ್ ಆರಂಭ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಕ್ರೀಸ್‌ನಲ್ಲಿದ್ದಾರೆ.
-
201 ರನ್ ಗುರಿ
ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಸಾಯಿ ಸುದರ್ಶನ್ ತಂಡದ ಪರ ಗರಿಷ್ಠ 84 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 120 ಎಸೆತಗಳಲ್ಲಿ 201 ರನ್ ಗಳಿಸಬೇಕಿದೆ.
-
18 ಓವರ್ ಪೂರ್ಣ
ಗುಜರಾತ್ ಟೈಟಾನ್ಸ್ ತಂಡ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 40 ರನ್‌ಗಳ ಜೊತೆಯಾಟ ಆಡಿದ್ದಾರೆ.
-
16 ಓವರ್‌ಗಳು ಪೂರ್ಣ
ಗುಜರಾತ್ ಟೈಟಾನ್ಸ್ ತಂಡ 16 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ. ಸಾಯಿ ಸುದರ್ಶನ್ 58 ರನ್ ಹಾಗೂ ಡೇವಿಡ್ ಮಿಲ್ಲರ್ 4 ರನ್ ಗಳಿಸಿ ಆಡುತ್ತಿದ್ದಾರೆ.
-
ಸಾಯಿ ಸುದರ್ಶನ್ ಅರ್ಧಶತಕ
ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದ್ದಾರೆ. ಡೇವಿಡ್ ಮಿಲ್ಲರ್ 2 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 138 ರನ್ ಆಗಿದೆ.
-
ಶಾರುಖ್ ಖಾನ್ ಔಟ್
ಶಾರುಖ್ ಖಾನ್ 58 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ತಂಡದ ಪರವಾಗಿ ಡೇವಿಡ್ ಮಿಲ್ಲರ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 131 ರನ್ ಆಗಿದೆ.
-
ಶಾರುಖ್ ಖಾನ್ ಅರ್ಧಶತಕ
ಶಾರುಖ್ ಖಾನ್ ಅರ್ಧಶತಕ ಪೂರೈಸಿದ್ದಾರೆ. ತಂಡದ ಸ್ಕೋರ್ 125 ರನ್ ದಾಟಿದೆ. ಸಾಯಿ ಸುದರ್ಶನ್ 42 ರನ್ ಗಳಿಸಿ ಆಡುತ್ತಿದ್ದಾರೆ.
-
ಅತ್ಯುತ್ತಮ ಜೊತೆಯಾಟ
ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್‌ಗಳು ಅರ್ಧಶತಕದ ಜೊತೆಯಾಟ ನಡೆಸಿ ಕ್ರೀಸ್‌ನಲ್ಲಿದ್ದಾರೆ. 12 ಓವರ್‌ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ. ಸಾಯಿ ಸುದರ್ಶನ್ 42 ರನ್ ಹಾಗೂ ಶಾರುಖ್ ಖಾನ್ 43 ರನ್ ಗಳಿಸಿ ಆಡುತ್ತಿದ್ದಾರೆ.
-
ಗುಜರಾತ್ ಅರ್ಧ ಇನಿಂಗ್ಸ್ ಅಂತ್ಯ
ಗುಜರಾತ್ ಟೈಟಾನ್ಸ್ ತಂಡ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳ ನಡುವೆ 37 ರನ್ ಜೊತೆಯಾಟ ನಡೆದಿದೆ.
-
8 ಓವರ್ ಮುಕ್ತಾಯ
ಗುಜರಾತ್ ಟೈಟಾನ್ಸ್ ತಂಡ 8 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದೆ. ಸಾಯಿ ಸುಂದರ್ 30 ರನ್ ಮತ್ತು ಶಾರುಖ್ ಖಾನ್ 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ಗಿಲ್ ಔಟ್
ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್ 16 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ತಂಡದ ಪರ ಶಾರುಖ್ ಖಾನ್ ಕ್ರೀಸ್‌ನಲ್ಲಿದ್ದಾರೆ. ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 47 ರನ್ ಆಗಿದೆ.
-
ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ ತಂಡ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ. ತಂಡದ ಪರ ಸಾಯಿ ಸುದರ್ಶನ್ 18 ರನ್ ಹಾಗೂ ಶುಭಮನ್ ಗಿಲ್ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ಮೂರು ಓವರ್ ಅಂತ್ಯ
ಮೂರು ಓವರ್‌ಗಳ ನಂತರ ಗುಜರಾತ್ ಸ್ಕೋರ್ 24/1.
ಸದ್ಯ ಗಿಲ್ 10 ರನ್ ಹಾಗೂ ಸಾಯಿ ಸುದರ್ಶನ್ 9 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
-
ವೃದ್ಧಿಮಾನ್ ಸಹಾ ಔಟ್
ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ 5 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ತಂಡದ ಪರವಾಗಿ ಸಾಯಿ ಸುದರ್ಶನ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 12 ರನ್ ಆಗಿದೆ.
-
ಗುಜರಾತ್ ಇನ್ನಿಂಗ್ಸ್ ಆರಂಭ
ಟಾಸ್ ಸೋತ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟಿಂಗ್ ಮಾಡಲು ಸಜ್ಜಾಗಿದೆ. ನಾಯಕ ಶುಭ್‌ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಆರಂಭಿಕ ಬ್ಯಾಟಿಂಗ್‌ಗೆ ಇಳಿದಿದ್ದಾರೆ.
-
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್‌ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ಸಂದೀಪ್ ವಾರಿಯರ್, ಶರತ್ ಬಿಆರ್, ಮಾನವ್ ಸುತಾರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್.
-
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ವಿಲ್ ಜಾಕ್ವೆಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್: ಅನುಜ್ ರಾವತ್, ಮಹಿಪಾಲ್ ಲೊಮ್ರೋರ್, ಹಿಮಾಂಶು ಶರ್ಮಾ, ಆಕಾಶ್ ದೀಪ್, ವೈಶಾಕ್ ವಿಜಯ್ಕುಮಾರ್.
-
ಟಾಸ್ ಗೆದ್ದ ಆರ್‌ಸಿಬಿ
ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
-
ಗುಜರಾತ್- ಆರ್‌ಸಿಬಿ ಮುಖಾಮುಖಿ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ.
Published On - Apr 28,2024 2:50 PM
