ಜೋಸ್ ಬಟ್ಲರ್
ಐಪಿಎಲ್ 2022 (IPL 2022)ರಲ್ಲಿ, ಯಾವುದೇ ಒಬ್ಬ ಆಟಗಾರ ಹೆಚ್ಚಿನ ಜನರ ತುಟಿಗಳಲ್ಲಿ ಉಳಿದಿದ್ದರೆ, ಅದು ಜೋಸ್ ಬಟ್ಲರ್(Jos Buttler). ಇಂಗ್ಲೆಂಡ್‌ನ ಈ ಬಲಿಷ್ಠ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲೀಗ್‌ನ 15 ನೇ ಋತುವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡರು. ರಾಜಸ್ಥಾನ್ ರಾಯಲ್ಸ್‌ನ ಈ ಆರಂಭಿಕ ಆಟಗಾರ ಸೀಸನ್ ಆರಂಭದಿಂದಲೂ ಬಹಳಷ್ಟು ರನ್‌ಗಳನ್ನು ಮಾಡಿ, ಪ್ರತಿ ಇನ್ನಿಂಗ್ಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಹಾಗೂ ಹಳೆಯ ದಾಖಲೆಗಳನ್ನು ಸರಿಗಟ್ಟಿದ. ಗುಜರಾತ್ ಟೈಟಾನ್ಸ್ (GT vs RR Final) ವಿರುದ್ಧದ ಫೈನಲ್‌ನಲ್ಲಿ ಬಟ್ಲರ್ಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ, ಆದರೆ ಸೀಸನ್ನ ಕೊನೆಯ ಪಂದ್ಯದಲ್ಲೂ ಬಟ್ಲರ್ ತಮ್ಮ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸುವುದನ್ನು ಮರೆಯಲಿಲ್ಲ.
ಮೇ 29 ರ ಭಾನುವಾರದಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ನಲ್ಲಿ ಜೋಸ್ ಬಟ್ಲರ್ ಕೂಡ ಉತ್ತಮವಾಗಿ ಪ್ರಾರಂಭಿಸಿದ್ದರು. ಆದರೆ ಈ ಬಾರಿ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 35 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 39 ರನ್‌ಗಳು ಬಂದವು. ಆದಾಗ್ಯೂ, ಈ ಸಣ್ಣ ಇನ್ನಿಂಗ್ಸ್‌ನಲ್ಲೂ, ಬಟ್ಲರ್ ತನ್ನ ಹೆಸರಿನಲ್ಲಿ ಕೆಲವು ವಿಶೇಷ ದಾಖಲೆಗಳನ್ನು ಮಾಡಿದರು.
ಇದನ್ನೂ ಓದಿ:GT vs RR Final: ಆರೆಂಜ್ ಕ್ಯಾಪ್ ಜೊತೆಗೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಜೋಸ್ ಬಟ್ಲರ್..!
- ಜೋಸ್ ಬಟ್ಲರ್ 17 ಇನ್ನಿಂಗ್ಸ್‌ಗಳಲ್ಲಿ 863 ರನ್‌ಗಳೊಂದಿಗೆ ಸೀಸನ್ ಕೊನೆಗೊಳಿಸಿದರು. ಈ ರೀತಿಯಾಗಿ, ಅವರು ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಬಟ್ಲರ್ ಆಸ್ಟ್ರೇಲಿಯನ್ ಸ್ಟಾರ್ ಡೇವಿಡ್ ವಾರ್ನರ್ (848) ಅವರನ್ನು ಹಿಂದಿಕ್ಕಿದರು. ಆದರೆ, ವಿರಾಟ್ ಕೊಹ್ಲಿ (973) ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.
- ಇದರೊಂದಿಗೆ, ಬಟ್ಲರ್ ಐಪಿಎಲ್ 2022 ರಲ್ಲಿ 83 ಬೌಂಡರಿ ಮತ್ತು 45 ಸಿಕ್ಸರ್‌ಗಳನ್ನು ಹೊಡೆದರು. ಈ ಸಂದರ್ಭದಲ್ಲಿಯೂ ಅವರು ಪ್ರಸ್ತುತ ಋತುವಿನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತ ಮುಂದಿದ್ದರು. ಅವರು ಒಟ್ಟು 128 ಬೌಂಡರಿಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ 45 ಬೌಂಡರಿ ಮತ್ತು 30 ಸಿಕ್ಸರ್‌ಗಳನ್ನು ಒಳಗೊಂಡ 75 ಬೌಂಡರಿಗಳನ್ನು ಬಾರಿಸಿ ಎರಡನೇ ಸ್ಥಾನ ಪಡೆದಿದ್ದಾರೆ.
- ಈ 39 ರನ್‌ಗಳ ಇನ್ನಿಂಗ್ಸ್‌ನೊಂದಿಗೆ, ಬಟ್ಲರ್ ಐಪಿಎಲ್ ಋತುವಿನ ಪ್ಲೇಆಫ್ ಹಂತದಲ್ಲಿ 200 ರನ್ ಗಳಿಸಿದ ಅದ್ಭುತ ದಾಖಲೆ ಮಾಡಿದರು. ಬಟ್ಲರ್ 3 ಇನ್ನಿಂಗ್ಸ್‌ಗಳಲ್ಲಿ 234 ರನ್ ಗಳಿಸಿದರು. ಇವರನ್ನು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಅವರಿಗಿಂತ ಮೊದಲು, 2016 ರಲ್ಲಿ 190 ರನ್ ಗಳಿಸಿದ ಡೇವಿಡ್ ವಾರ್ನರ್ ಪ್ಲೇಆಫ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದರು.
- ಬಟ್ಲರ್ ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೊತೆಗೆ 4 ಶತಕಗಳನ್ನು ಗಳಿಸಿದರು. ಈ ಮೂಲಕ 2016ರ ಋತುವಿನಲ್ಲಿ 4 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
- ಇಷ್ಟೇ ಅಲ್ಲ ಬಟ್ಲರ್ ಈ ಸೀಸನ್ನಲ್ಲಿ ಬೌಲರ್ಗಳನ್ನು ಹೇಗೆ ದಂಡಿಸಿದ್ದಾರೆ ಎಂಬುದು ಅವರ ಈ ಅಂಕಿ ಅಂಶಗಳಿಂದ ಗೊತ್ತಾಗಿದೆ. ಈ ಋತುವಿನಲ್ಲಿ, ಅವರು ವೇಗದ ಬೌಲರ್‌ಗಳ ವಿರುದ್ಧ 620 ರನ್ ಗಳಿಸಿದರು. ಇದು ಐಪಿಎಲ್‌ನ ಹೊಸ ದಾಖಲೆಯಾಗಿದೆ. ಅದೇ ಸಮಯದಲ್ಲಿ, ಸ್ಪಿನ್ನರ್‌ಗಳ ವಿರುದ್ಧ ಅವರ ಸರಾಸರಿ 243 ಆಗಿತ್ತು.