GT vs KKR IPL 2026 Highlights: ಕೆಕೆಆರ್ ವಿರುದ್ಧ ಗೆದ್ದ ಗುಜರಾತ್
Gujarat Titans vs Kolkata Knight Riders, IPL 2026 Highlights: ಐಪಿಎಲ್ 2026 ರ ಸೀಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದುಃಸ್ವಪ್ನದಂತೆ ಕಾಡಲಾರಂಭಿಸಿದೆ. ಈಗಾಗಲೇ ತಮ್ಮ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತಿರುವ ಕೋಲ್ಕತ್ತಾ ಮತ್ತೊಂದು ಸೋಲನ್ನು ಅನುಭವಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಕೋಲ್ಕತ್ತಾ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿತು.

ಐಪಿಎಲ್ 2026 ರ ಸೀಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದುಃಸ್ವಪ್ನದಂತೆ ಕಾಡಲಾರಂಭಿಸಿದೆ. ಈಗಾಗಲೇ ತಮ್ಮ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತಿರುವ ಕೋಲ್ಕತ್ತಾ ಮತ್ತೊಂದು ಸೋಲನ್ನು ಅನುಭವಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಕೋಲ್ಕತ್ತಾ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿತು. ನಾಯಕ ಶುಭಮನ್ ಗಿಲ್ ಅವರ ಅತ್ಯುತ್ತಮ ಇನ್ನಿಂಗ್ಸ್ ಗುಜರಾತ್‌ಗೆ ಸತತ ಮೂರನೇ ಗೆಲುವು ತಂದುಕೊಟ್ಟಿತು.
LIVE NEWS & UPDATES
-
GT vs KKR IPL 2026: ಗುಜರಾತ್‌ಗೆ ಗೆಲುವು
ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಕ್ಯಾಮರೂನ್ ಗ್ರೀನ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 10 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 181 ರನ್ ಗಳಿಸಿ ಜಯಗಳಿಸಿತು.
-
GT vs KKR IPL 2026: ಗುಜರಾತ್‌ಗೆ ಮೂರನೇ ಹೊಡೆತ
ಗುಜರಾತ್ ಮೂರನೇ ವಿಕೆಟ್ ಕಳೆದುಕೊಂಡಿದ್ದು ಸುಂದರ್ ಕ್ಯಾಚ್ ನೀಡಿದ್ದಾರೆ. ಅವರು ಕೇವಲ 13 ರನ್ ಗಳಿಸಿ ಔಟಾದರು. ಗ್ಲೆನ್ ಫಿಲಿಪ್ಸ್ ಈಗ ಬ್ಯಾಟಿಂಗ್ಗೆ ಇಳಿದಿದ್ದಾರೆ.
-
-
GT vs KKR IPL 2026: ಗಿಲ್ ಅರ್ಧಶತಕ
ಶುಭಮನ್ ಗಿಲ್ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಕ್ಕೂ ಮೊದಲು ಜೋಸ್ ಬಟ್ಲರ್ 25 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ. 11 ಓವರ್‌ಗಳ ನಂತರ ಸ್ಕೋರ್ ಎರಡು ವಿಕೆಟ್‌ಗೆ 104 ರನ್ ಆಗಿದೆ.
-
GT vs KKR IPL 2026: 4 ಓವರ್ ಪೂರ್ಣ
ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ. ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ. ಮೊದಲ 4 ಓವರ್‌ಗಳಲ್ಲಿ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 45 ರನ್ ಕಲೆಹಾಕಿದೆ.
-
GT vs KKR IPL 2026: 180 ರನ್‌ಗಳಿಗೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟ್ ಆಯಿತು. ಕ್ಯಾಮರೂನ್ ಗ್ರೀನ್ 79 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಕಗಿಸೊ ರಬಾಡ ಗುಜರಾತ್ ಪರ ಅತಿ ಹೆಚ್ಚು 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ ತಲಾ 2 ವಿಕೆಟ್ ಪಡೆದರು.
-
-
GT vs KKR IPL 2026: ರಿಂಕು ಸಿಂಗ್ ಔಟ್
ಕೋಲ್ಕತ್ತಾ ತಂಡಕ್ಕೆ ಆರನೇ ಹಿನ್ನಡೆಯಾಗಿದೆ. ರಬಾಡ, ರಿಂಕು ಸಿಂಗ್ ಅವರನ್ನು ಔಟ್ ಮಾಡಿದರು. ರಮಣದೀಪ್ ಸಿಂಗ್ ಈಗ ಕ್ರೀಸ್ ನಲ್ಲಿದ್ದಾರೆ.
-
GT vs KKR IPL 2026: ಕ್ಯಾಮರೂನ್ ಗ್ರೀನ್ ಅರ್ಧಶತಕ
ಕ್ಯಾಮರೂನ್ ಗ್ರೀನ್ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 13 ಓವರ್‌ಗಳ ನಂತರ ಸ್ಕೋರ್ ನಾಲ್ಕು ವಿಕೆಟ್‌ಗಳಿಗೆ 122 ರನ್ ಆಗಿದೆ.
-
GT vs KKR IPL 2026: 4ನೇ ವಿಕೆಟ್
ಕೋಲ್ಕತ್ತಾ ತಂಡಕ್ಕೆ ನಾಲ್ಕನೇ ಹೊಡೆತ ನೀಡಿದ ಅಶೋಕ್ ಶರ್ಮಾ, ರೋವ್‌ಮನ್ ಪೊವೆಲ್ ಅವರ ವಿಕೆಟ್ ಪಡೆದರು. ಅವರು 20 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು. 12 ಓವರ್‌ಗಳ ನಂತರ ಸ್ಕೋರ್ ನಾಲ್ಕು ವಿಕೆಟ್ ನಷ್ಟಕ್ಕೆ 103 ರನ್ ಆಗಿದೆ.
-
GT vs KKR IPL 2026: ಎಂಟು ಓವರ್‌ಗಳು ಪೂರ್ಣ
ಎಂಟು ಓವರ್‌ಗಳು ಮುಗಿದಿವೆ. ಪೊವೆಲ್ 21 ಮತ್ತು ಗ್ರೀನ್ 8 ರನ್‌ಗಳೊಂದಿಗೆ ಆಟ ಮುಂದುವರಿಸಿದ್ದಾರೆ. ಕೆಕೆಆರ್ 59 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ.
-
GT vs KKR IPL 2026: ಎರಡನೇ ವಿಕೆಟ್
ರಬಾಡ ಅವರಿಂದ ಕೋಲ್ಕತ್ತಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿತು, ರಘುವಂಶಿ ಬಟ್ಲರ್ ಗೆ ಕ್ಯಾಚ್ ನೀಡಿದರು. ಅವರು ಕೇವಲ ಎಂಟು ರನ್ ಗಳಿಸಿದರು.
-
GT vs KKR IPL 2026: ಕಳಪೆ ಆರಂಭ
ಕೆಕೆಆರ್ ತಂಡ ಕಳಪೆ ಆರಂಭ ಪಡೆಯಿತು. ಅಜಿಂಕ್ಯ ರಹಾನೆ ಖಾತೆ ತೆರೆಯುವಲ್ಲಿ ವಿಫಲರಾದರು. ಈಗ ಟಿಮ್ ಸೀಫರ್ಟ್ ಜೊತೆ ಅಂಗ್ಕ್ರಿಶ್ ರಘುವಂಶಿ ಸೇರಿಕೊಂಡಿದ್ದಾರೆ.
-
GT vs KKR IPL 2026: ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI:
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಶೋಕ್ ಶರ್ಮಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
-
GT vs KKR IPL 2026: ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಟಿಮ್ ಸೀಫರ್ಟ್, ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ (ಕೀಪರ್), ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
-
GT vs KKR IPL 2026: ಟಾಸ್ ಗೆದ್ದ ಕೆಕೆಆರ್
ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 17,2026 7:01 PM




